14ನೇ ವಯಸ್ಸಿನಲ್ಲೇ ಮೊದಲ ಕಿಸ್; ಹಳೆ ನೆನಪು ಬಿಚ್ಚಿಟ್ಟ ಖ್ಯಾತ ನಿರ್ದೇಶಕನ ಮಗಳು ಆಲಿಯಾ

ಯೂಟ್ಯೂಬ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆಲಿಯಾ ತಮ್ಮ ಅನೇಕ ಮೊದಲ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ.

14ನೇ ವಯಸ್ಸಿನಲ್ಲೇ ಮೊದಲ ಕಿಸ್; ಹಳೆ ನೆನಪು ಬಿಚ್ಚಿಟ್ಟ ಖ್ಯಾತ ನಿರ್ದೇಶಕನ ಮಗಳು ಆಲಿಯಾ
ಆಲಿಯಾ ಕಶ್ಯಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 02, 2021 | 9:49 PM

ಬಾಲಿವುಡ್​ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್ ಮಗಳು ಆಲಿಯಾ ಕಶ್ಯಪ್​ ಚಿತ್ರರಂಗಕ್ಕೆ ಕಾಲಿಡದೇ ಇದ್ದರೂ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಅವರು ಮೊದಲ ಚುಂಬನದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಡೇಟ್​ ಬಗ್ಗೆಯೂ ಓಪನ್​ ಆಗಿ ಮಾತನಾಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಯೂಟ್ಯೂಬ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆಲಿಯಾ ತಮ್ಮ ಅನೇಕ ಮೊದಲ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಬಾಯ್​ಫ್ರೆಂಡ್​ ಶೇನ್ ಗ್ರೆಗೊಯಿರ್ ಕೂಡ ಕಾಣಿಸಿಕೊಂಡಿದ್ದಾರೆ.

ಮೊದಲ ಕಿಸ್​ ಬಗ್ಗೆ ಮಾತನಾಡಿರುವ ಆಲಿಯಾ, ‘ಆಗ ನನ್ನ ವಯಸ್ಸು 14. ನಾನು ಮೊದಲ ಬಾರಿ ಕಿಸ್​ ಮಾಡಿದ್ದು ಆಗಲೇ. ಕಿಸ್​ ಮಾಡಿದ ನಂತರ ಅಲ್ಲಿಂದ ಓಡಿ ಹೋದೆ. ಏಕೆಂದರೆ ನನಗೆ ಅಷ್ಟೊಂದು ನಾಚಿಕೆ ಆಗುತ್ತಿತ್ತು. ಅದು ನನ್ನ ಅತ್ಯಂತ ಕೆಟ್ಟ ಅನುಭವ’ ಎಂದಿದ್ದಾರೆ.

‘ಅದಕ್ಕೂ ಒಂದು ವರ್ಷ ಮೊದಲು, ಅಂದರೆ 13ನೇ  ವಯಸ್ಸಿನಲ್ಲಿ ನನಗೆ ಮೊದಲ ಬಾರಿ ಬಾಯ್​ಫ್ರೆಂಡ್​ ಸಿಕ್ಕಿದ್ದ. ನನ್ನ ಬೆಸ್ಟ್​ ಫ್ರೆಂಡ್​ ನನ್ನ ಬಾಯ್​ಫ್ರೆಂಡ್​ನ ಬೆಸ್ಟ್​ ಫ್ರೆಂಡ್​ ಜತೆ ಡೇಟಿಂಗ್​ ನಡೆಸುತ್ತಿದ್ದ. ಹೀಗಾಗಿ ನಾವು ಡಬಲ್​ ಡೇಟ್​ ಮಾಡೋಕೆ ನಿರ್ಧರಿಸಿದೆವು. ಅಂತೆಯೇ ಡೇಟ್​ಗೆ ತೆರಳಿದೆವು’ ಎಂದು ಮೊದಲ ಡೇಟ್​ ಅನುಭವ ಬಿಚ್ಚಿಟ್ಟಿದ್ದಾರೆ ಆಲಿಯಾ.

ಶೇನ್ ಗ್ರೆಗೊಯಿರ್​ ಜತೆ ಆಲಿಯಾ ಕಶ್ಯಪ್​ ರಿಲೇಶನ್​ಶಿಪ್​ನಲ್ಲಿದ್ದಾರೆ. ಅಮೆರಿಕದಲ್ಲಿ ಶೇನ್ ಉದ್ಯಮ ಹೊಂದಿದ್ದಾರೆ. ಯೂಟ್ಯೂಬ್​ನಲ್ಲಿ ಇತ್ತೀಚೆಗೆ ವಿಡಿಯೋ ಅಪ್​ಲೋಡ್​ ಮಾಡಿದ್ದ ಆಲಿಯಾ ರಿಲೇಶನ್​ಶಿಪ್​ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೆ, ಮೊದಲ ಬಾರಿಗೆ ಶೇನ್ ಜತೆ ಕಿಸ್​ ಮಾಡುವಾಗ ತುಂಬಾನೇ ನರ್ವಸ್​ ಆಗಿದ್ದೆ ಎಂದಿದ್ದರು.

ಸ್ಟಾರ್​ ನಿರ್ದೇಶಕರು ಹಾಗೂ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರೋದು ಹೊಸದಲ್ಲ. ಬಾಲಿವುಡ್​ನಲ್ಲಿ ಸಾಕಷ್ಟು ಸ್ಟಾರ್​ ಕಿಡ್​ಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅದೇ ರೀತಿ ಆಲಿಯಾ ಕೂಡ ಚಿತ್ರರಂಗಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಾತನಾಡಿದ್ದ ಅನುರಾಗ್ ಕಶ್ಯಪ್​​, ಆಲಿಯಾ ಚಿತ್ರರಂಗಕ್ಕೆ ಬರುತ್ತಾರೆ ಎಂದರೆ ನನ್ನ ವಿರೋಧ ಇಲ್ಲ ಎಂದಿದ್ದರು.

ಇದನ್ನೂ ಓದಿ: ಕ್ರಿಕೆಟಿಗನ ಜತೆ ಹಸೆಮಣೆ ಏರಿದ ಖ್ಯಾತ ನಿರ್ದೇಶಕ ಶಂಕರ್ ಮಗಳು ಐಶ್ವರ್ಯಾ

ಡೇಟಿಂಗ್​ ಆ್ಯಪ್​ನಲ್ಲಿ ಖ್ಯಾತ ನಿರ್ದೇಶಕನ ಮಗಳ ಫೇಕ್​ ಖಾತೆ; ತಪ್ಪಾಗಿ ತಿಳಿದ ಅಭಿಮಾನಿಗಳು ಮಾಡಿದ್ದೇನು?

Published On - 9:46 pm, Fri, 2 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ