‘ಏನೋ ಆಗಿದೆ ಆಯಮ್ಮನಿಗೆ, ಪಿಕ್​ನಿಕ್​ಗೆ ಬಂದಂಗೆ ಕಾಣ್ತಿದೆ’; ಶುಭಾ-ನಿಧಿ ಗೆಳೆತನದಲ್ಲಿ ಬಿರುಕು​

ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಕ್ಲೋಸ್​ ಆಗಿದ್ದರು. ಆದರೆ, ಅವರ ಫ್ರೆಂಡ್​ಶಿಪ್​ನಲ್ಲಿ ಈಗ ಬಿರುಕು ಮೂಡಿದೆ.

‘ಏನೋ ಆಗಿದೆ ಆಯಮ್ಮನಿಗೆ, ಪಿಕ್​ನಿಕ್​ಗೆ ಬಂದಂಗೆ ಕಾಣ್ತಿದೆ’; ಶುಭಾ-ನಿಧಿ ಗೆಳೆತನದಲ್ಲಿ ಬಿರುಕು​
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
Rajesh Duggumane

| Edited By: Madan Kumar

Jul 03, 2021 | 7:25 AM

ಬಿಗ್​ ಬಾಸ್​ ಮನೆಯ ಮೊದಲ ಇನ್ನಿಂಗ್ಸ್​ನಲ್ಲಿ ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಇಬ್ಬರೂ ಕ್ಲೋಸ್​ ಫ್ರೆಂಡ್ಸ್​ ಆಗಿದ್ದರು. ಆದರೆ, ಎರಡನೇ ಇನ್ನಿಂಗ್ಸ್​ನಲ್ಲಿಇಬ್ಬರ ಗೆಳೆತನ ಮೊದಲಿನಂತೆ ಇಲ್ಲ. ಆರಂಭದಲ್ಲಿ ಸಣ್ಣಸಣ್ಣ ವಿಚಾರಕ್ಕೂ ಕಿತ್ತಾಡಿಕೊಳ್ಳುತ್ತಿದ್ದ ಇಬ್ಬರೂ ಈಗ ಓಪನ್​ ಆಗಿ ಎಲ್ಲರೂ ರೀತಿ ಕಿತ್ತಾಡಿಕೊಳ್ಳುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಜುಲೈ 2ರ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ಅನುಸಾರ ಮನೆಯಲ್ಲಿ ಇಟ್ಟ ಬೋರ್ಡ್​ ಮೇಲೆ ಪೇಂಟ್​ ಮಾಡಬೇಕಿತ್ತು. ಟಾಸ್ಕ್​ ನಡೆಯುವ ವೇಳೆ ಬಂದ ಶುಭಾ, ಕೊಂಕು ನುಡಿದರು. ಇದರಿಂದ ನಿಧಿಗೆ ಇರಿಟೇಷನ್​ ಆಗಿದೆ.

‘ನಿಜವಾಗಲೂ ನನಗೆ ನೆತ್ತಿಗೇರಿದೆ. ಎಲ್ಲಾನೂ ಕಾಂಪಿಟೇಷನ್​ ಆಗಿ ತಗೋಬೇಡಿ ಎಂದು ಶುಭಾ ಹೇಳ್ತಾಳೆ. ಪೇಂಟ್​ ಮಾಡುವ ಏಕಾಗ್ರತೆ ಬೇಕು. ಆದರೆ, ಅವಳು ಎಲ್ಲರನ್ನೂ ಎಳೆದಾಡುಕೊಂಡಿದ್ದಾಳೆ. ಆ ಯಮ್ಮನಿಗೆ ಏನೋ ಆಗಿಬಿಟ್ಟಿದೆ. ನಾವೆಲ್ಲ ಆಡೋಕೆ ಬಂದಿದ್ದು. ಅವಳು ಪಿಕ್​ನಿಕ್​ಗೆ ಬಂದಿದ್ದಾಳೆ ಎನಿಸುತ್ತದೆ’ ಎಂದರು ನಿಧಿ. ದಿವ್ಯಾ ಸುರೇಶ್​ ಕೂಡ ಇದೇ ಅನುಭವ ಹಂಚಿಕೊಂಡರು.

‘ಪ್ರತಿ ಬಾರಿ ಉರಿಸಬಾರದು. ಇದು ಫನ್​ ಟಾಸ್ಕ್​. ಜೋಕ್​ ಮಾಡಿಕೊಂಡು ಆಡಿ. ಗಂಭೀರ ಟಾಸ್ಕ್​ನಲ್ಲಿ ಗಂಭೀರವಾಗಿರಬೇಕು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಟಾಸ್ಕ್​ನ ನಿಜವಾಗಿಯೂ ಗಂಭೀರವಾಗಿ ಆಡುತ್ತೇನೆ. ಬಿಗ್​ ಬಾಸ್​ ಟಾಸ್ಕ್ ಕೊಡೋದು ಎಲ್ಲರೂ ಆಡಲಿ ಎಂದು. ಒಬ್ಬರೇ ಟಾಸ್ಕ್​ನಲ್ಲಿ ಪಾಲ್ಗೊಳ್ಳಲಿ ಎಂದರ್ಥವಲ್ಲ. ನನ್ನ ಹಿಂದೆ ಆಕೆ ಮಾತನಾಡುತ್ತಿದ್ದಾಳೆ. ಇದು ಹೊಸದಲ್ಲ ಅವಳಿಗೆ. ಧೈರ್ಯ ಇದ್ದರೆ ಮುಂದೆ ಬಂದು ಮಾತನಾಡಲಿ’ ಎಂದು ನಿಧಿಗೆ ಶುಭಾ ಛಾಟಿ ಬೀಸಿದರು.

ಇನ್ನು, ಕಳಪೆ ವಿಚಾರ ಬಂದಾಗ ಬಹುತೇಕರು ಶುಭಾ ಅವರ ಹೆಸರನ್ನು ಪಡೆದುಕೊಂಡರು. ಹೀಗಾಗಿ, ಶುಭಾ ಜೈಲು ಸೇರಿದರು.

ಇದನ್ನೂ ಓದಿ:

‘ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’; ಈ ಬಿಗ್​ ಬಾಸ್​ ಸ್ಪರ್ಧಿಯ ಮಾತನ್ನು ನೀವು ಒಪ್ತೀರಾ?

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada