‘ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’; ಈ ಬಿಗ್​ ಬಾಸ್​ ಸ್ಪರ್ಧಿಯ ಮಾತನ್ನು ನೀವು ಒಪ್ತೀರಾ?

ಶುಭಾ ಪೂಂಜಾ ಬಂದ ದಿನದಿಂದಲೂ ತಮ್ಮದೇ ಸ್ಟೈಲ್​ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಮಕ್ಕಳಂತೆ ವರ್ತಿಸಿದ್ದೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಮನೆಯಲ್ಲಿ ಅವರಿಗೆ ವೈರಿಗಳಿಲ್ಲ.

‘ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’; ಈ ಬಿಗ್​ ಬಾಸ್​ ಸ್ಪರ್ಧಿಯ ಮಾತನ್ನು ನೀವು ಒಪ್ತೀರಾ?
ನಟಿ ಶುಭಾ ಪೂಂಜಾ
Follow us
TV9 Web
| Updated By: ಮದನ್​ ಕುಮಾರ್​

Updated on: Jul 02, 2021 | 4:52 PM

‘ಕನ್ನಡ ಬಿಗ್​ ಬಾಸ್​ ಸೀಸನ್ 8’ರ ಎರಡನೇ ಇನ್ನಿಂಗ್ಸ್​ ದಿನ ಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಸ್ಪರ್ಧಿಗಳ ನಡುವೆ ಟಫ್​ ಫೈಟ್​ ಏರ್ಪಡುತ್ತಿದ್ದು, ಎಲ್ಲರೂ ಗೆಲ್ಲಲೇ ಬೇಕು ಎನ್ನುವ ಛಲಕ್ಕೆ ಬಿದ್ದಿದ್ದಾರೆ. ಆದರೆ, ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ ಮಾತ್ರ ಏನನ್ನೂ ಮಾಡುತ್ತಿಲ್ಲವಂತೆ. ಅವರನ್ನು ಕೇವಲ ಕೌಂಟ್​ಗೆ ಇಡಲಾಗಿದೆ ಎನ್ನುವ ಮಾತು ಬಿಗ್​ ಬಾಸ್​ ಸ್ಪರ್ಧಿಯಿಂದಲೇ ಬಂದಿದೆ.

ಶುಭಾ ಪೂಂಜಾ ಬಂದ ದಿನದಿಂದಲೂ ತಮ್ಮದೇ ಸ್ಟೈಲ್​ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಮಕ್ಕಳಂತೆ ವರ್ತಿಸಿದ್ದೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಮನೆಯಲ್ಲಿ ಅವರಿಗೆ ವೈರಿಗಳಿಲ್ಲ. ಎಲ್ಲರ ಜತೆಯೂ ಅವರು ಹೊಂದಿಕೊಂಡು ಹೋಗುತ್ತಿದ್ದಾರೆ. ಇದು ಕೆಲವರ ಕಣ್ಣು ಕುಕ್ಕಿದೆ.

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್​ ಸಂಬರಗಿ ಕುಳಿತು ಮಾತನಾಡುತ್ತಿದ್ದರು. ಸದ್ಯ, ಮನೆಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಚರ್ಚೆ ಮಾಡುತ್ತಿದ್ದರು. ಮನೆಯಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆಯೂ ಶಮಂತ್​ ಬ್ರೋ ಗೌಡ, ರಘು ಗೌಡ ಹಾಗೂ ಶುಭಾ ಎಲ್ಲರ ಜತೆಗೂ ಬೆರೆಯುತ್ತಿದ್ದಾರೆ. ಆದರೆ, ಇಲ್ಲಿ ಶುಭಾ ಲೆಕ್ಕಕ್ಕೇ ಇಲ್ಲ!

‘ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ರಘು, ಶಮಂತ್​ ಮಾತ್ರ ಎಲ್ಲರ ಜತೆಗೂ ಚೆನ್ನಾಗಿದ್ದಾರೆ’ ಎಂದರು ಚಕ್ರವರ್ತಿ. ‘ಶುಭಾ ಕೂಡ ಎಲ್ಲರ ಜತೆಗೆ ಬರೆಯುತ್ತಿದ್ದಾರೆ’ ಎಂದರು ಪ್ರಶಾಂತ್​. ‘ಬಿಗ್​ ಬಾಸ್​ನಲ್ಲಿ ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’ ಎಂದು ಚಕ್ರವರ್ತಿ ತಮ್ಮ ಅಭಿಪ್ರಾಯ ತಿಳಿಸಿದರು. ‘ಹಾಗನ್ನಬೇಡ’ ಎಂದು ಹೇಳುವ ಮೂಲಕ ಶುಭಾ ಕೂಡ ಪ್ರಬಲ ಕ್ಯಾಂಡಿಡೇಟ್​ ಎಂಬುದನ್ನು ಪ್ರಶಾಂತ್​ ಹೇಳೋಕೆ ಹೋದರು. ಆದರೆ, ಇದನ್ನು ಚಕ್ರವರ್ತಿ ಒಪ್ಪಲೇ ಇಲ್ಲ. ‘ನೀನೇ ಹೇಳು ಅವಳು (ಶುಭಾ) ಯಾವುದಕ್ಕೆ ಲೆಕ್ಕಕ್ಕೆ ಇದ್ದಾಳೆ? ಆಟಕ್ಕೂ ಇಲ್ಲ, ತರ್ಕಕ್ಕೂ ಇಲ್ಲ’ ಎಂದು ಚಕ್ರವರ್ತಿ ತಮ್ಮ ವಾದ ಮಂಡಿಸಿದರು.

ಇದನ್ನೂ ಓದಿ:

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು

ಜೀವನದಲ್ಲಿ ಶುಭಾ ಪೂಂಜಾ ಕಳೆದುಕೊಂಡಿದ್ದ ಅಮೂಲ್ಯ ವ್ಯಕ್ತಿಗಳನ್ನು ಮರಳಿ ಕೊಡಿಸಿದ ಬಿಗ್​ ಬಾಸ್​; ಯಾರವರು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ