ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು

ಪ್ರಶಾಂತ್​ ಹಾಗೂ ಚರ್ಕವರ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ ಅವರನ್ನು ಚಕ್ರವರ್ತಿ ದೂಕಿದ್ದಾರೆ.

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು
ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 02, 2021 | 2:51 PM

‘ಕನ್ನಡ ಬಿಗ್​ ಬಾಸ್ ಸೀಸನ್​ 8’ ಎರಡನೇ ಇನ್ನಿಂಗ್ಸ್​ ದಿನೇದಿನೇ ರಂಗೇರುತ್ತಿದೆ. ಎರಡನೇ ವಾರ ಇಡೀ ಮನೆ ರಣರಂಗವಾಗಿ ಮಾರ್ಪಟ್ಟಿದೆ. ಚಕ್ರವರ್ತಿ ಚಂದ್ರಚೂಡ್​ ನಡೆದುಕೊಳ್ಳುತ್ತಿರುವ ರೀತಿ ಮನೆಯಲ್ಲಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಆಪ್ತ ಗೆಳೆಯ​ ಎನಿಸಿಕೊಂಡಿರುವ ಪ್ರಶಾಂತ್​ ಸಂಬರಗಿ ಅವರಿಗೇ ಚಕ್ರವರ್ತಿ ನಡೆ ಹಿಡಿಸುತ್ತಿಲ್ಲ. ಈ ಮಧ್ಯೆ ಪ್ರಶಾಂತ್​ ಅವರನ್ನು ಚಕ್ರವರ್ತಿ ತಳ್ಳಿದ ಘಟನೆ ಕೂಡ ನಡೆದಿದೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿದೆ. ಮನೆಯಲ್ಲಿರುವ 12 ತಂಡಗಳನ್ನು ಎರಡು ಟೀಂ ಆಗಿ ವಿಭಜಿಸಲಾಗಿದ್ದು, ಮಂಜು ಹಾಗೂ ಅರವಿಂದ್​ ಎರಡು ತಂಡವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ. ತಂಡ ತಂಡಗಳ ನಡುವೆ ಇರಬೇಕಾಗಿದ್ದ ಸ್ಪರ್ಧೆ ತಂಡದ ಒಳಗೇ ಏರ್ಪಟ್ಟಿದೆ. ಅರವಿಂದ್​ ಟೀಂನಲ್ಲಿರುವ ಚಕ್ರವರ್ತಿ ಟಾಸ್ಕ್​ ಸರಿಯಾಗಿ ಆಡದೆ ಇದ್ದರೂ ಉಳಿದವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬೇರೆಯವರ ತಪ್ಪನ್ನು ಎತ್ತಿ ಹೇಳುತ್ತಿದ್ದಾರೆ. ಇದು ಸ್ಪರ್ಧಿಗಳ ಕೋಪಕ್ಕೆ ಕಾರಣವಾಗಿದೆ.

ಕಲರ್ಸ್​ ಕನ್ನಡ ವಾಹಿನಿ ಜುಲೈ 2ರ ಸಂಚಿಕೆಯ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಚಕ್ರವರ್ತಿ ವಿರುದ್ಧ ಎಲ್ಲರೂ ತಿರುಗಿ ಬಿದ್ದಿದ್ದಾರೆ. ಇನ್ನು, ಪ್ರಶಾಂತ್​ ಹಾಗೂ ಚರ್ಕವರ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ ಅವರನ್ನು ಚಕ್ರವರ್ತಿ ದೂಕಿದ್ದಾರೆ.

ಇನ್ನು, ಜುಲೈ 1ರ ಎಪಿಸೋಡ್​ನಲ್ಲಿ ಚಕ್ರವರ್ತಿ ಬಗ್ಗೆ ಪ್ರಶಾಂತ್​ ಅಸಮಾಧಾನ ಹೊರಹಾಕಿದ್ದರು. ಚಕ್ರವರ್ತಿಯದು ಅತಿಯಾಗುತ್ತಿದೆ. ಹಾಗಾಗಿ, ಆತನಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇನೆ. ಅವನ ಗೆಳೆಯ ಎನ್ನುವ ಕಾರಣಕ್ಕೆ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು ಎಂದು ಪ್ರಶಾಂತ್​ ಹೇಳಿರುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಶಮಂತ್​ ಬ್ರೋ ಗೌಡ ಹಾಗೂ ರಘು ಮಾತ್ರ ಎಲ್ಲರ ಜತೆಯೂ ಚೆನ್ನಾಗಿದ್ದಾರೆ. ಉಳಿದ ಸ್ಪರ್ಧಿಗಳಲ್ಲಿ ವೈಮನಸ್ಸು ಮೂಡುತ್ತಿದೆ. ಹೀಗಾಗಿ, ಮನೆಯ ಶಾಂತಿ ಕದಡಿದಂತೆ ಕಾಣುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮಾಡಿದ ಆ ಒಂದು ತಪ್ಪಿಗೆ ಭಾರೀ ದಂಡ ತೆರಲಿದ್ದಾರಾ ಅರವಿಂದ್​?

ಸುದೀಪ್​ ಹೇಳಿದ ಬುದ್ಧಿವಾದ ಮರೆತ ಬಿಗ್​ ಬಾಸ್​ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್​?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ