ಯಾವುದು ಕಾಪಿ? ಯಾವುದು ಅಸಲಿ? ‘ದ್ವಿತ್ವ’ ಚಿತ್ರದ ಪೋಸ್ಟರ್​ ಮೇಲೆ ಹೊಸ ಅನುಮಾನ

Dvitva Kannada Cinema: ಸದ್ಯ ಈ ಎರಡು ಪೋಸ್ಟರ್​ಗಳನ್ನು ಎದುರುಬದುರು ಇಟ್ಟುಕೊಂಡು ಹೋಲಿಕೆ ಮಾಡಲಾಗುತ್ತಿದೆ. ಇವುಗಳಲ್ಲಿ ಅಸಲಿ ಯಾರದ್ದು, ನಕಲಿ ಯಾರದ್ದು ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಯಾವುದು ಕಾಪಿ? ಯಾವುದು ಅಸಲಿ? ‘ದ್ವಿತ್ವ’ ಚಿತ್ರದ ಪೋಸ್ಟರ್​ ಮೇಲೆ ಹೊಸ ಅನುಮಾನ
ಯಾವುದು ಕಾಪಿ? ಯಾವುದು ಅಸಲಿ?
TV9kannada Web Team

| Edited By: Rajesh Duggumane

Jul 02, 2021 | 4:11 PM

ಪುನೀತ್​ ರಾಜ್​ಕುಮಾರ್​ ಮತ್ತು ಪವನ್​ ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ‘ದ್ವಿತ್ವ’ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ಜು.1ರಂದು ಅನಾವರಣಗೊಂಡ ಈ ಸಿನಿಮಾದ ಶೀರ್ಷಿಕೆ ಬಗ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರ ಜೊತೆಗೆ ಈ ಚಿತ್ರದ ಪೋಸ್ಟರ್​ ಅಸಲಿಯೋ ನಕಲಿಯೋ ಎಂಬ ಅನುಮಾನ ಕೂಡ ಕಾಡಲು ಶುರುವಾಗಿದೆ. ಗುರುವಾರ ಬಿಡುಗಡೆ ಆಗಿರುವ ಈ ಪೋಸ್ಟರ್​ ತುಂಬಾ ಭಿನ್ನ ಮತ್ತು ಕ್ರಿಯೇಟಿವ್​ ಆಗಿದೆ ಎಂಬುದೇನೋ ನಿಜ. ಅದನ್ನೇ ಹೋಲುವಂತಹ ಮತ್ತೊಂದು ಪೋಸ್ಟರ್​ನಿಂದಾಗಿ ಅನುಮಾನ ಹೊಗೆಯಾಡುವಂತಾಗಿದೆ.

‘ದ್ವಿತ್ವ’ ಸಿನಿಮಾದಲ್ಲಿ ಸೈಕಲಾಜಿಕಲ್​ ಕಥಾಹಂದರ ಇರಲಿದೆ. ಅದಕ್ಕೆ ತಕ್ಕಂತೆಯೇ ಪೋಸ್ಟರ್​ ವಿನ್ಯಾಸಗೊಂಡಿದೆ. ಆದರೆ ದ್ವಿತ್ವ ಪೋಸ್ಟರ್​ ಬಿಡುಗಡೆ ಆಗುವುದಕ್ಕಿಂತ 7 ತಿಂಗಳು ಮುನ್ನವೇ ಸೌಂಡ್​ಕ್ಲೌಡ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಿರುವ ಒಂದು ಪೋಸ್ಟರ್​ ಕೂಡ ಅದನ್ನೇ ಹೋಲುವಂತಿದೆ. ಶೇ.95ರಷ್ಟು ಸಾಮ್ಯತೆ ಇರುವುದನ್ನು ಮೇಲ್ನೋಟಕ್ಕೆ ಕಾರಣಬಹುದು.

ಸದ್ಯ ಈ ಎರಡು ಪೋಸ್ಟರ್​ಗಳನ್ನು ಎದುರುಬದುರು ಇಟ್ಟುಕೊಂಡು ಹೋಲಿಕೆ ಮಾಡಲಾಗುತ್ತಿದೆ. ಇವುಗಳಲ್ಲಿ ಅಸಲಿ ಯಾರದ್ದು, ನಕಲಿ ಯಾರದ್ದು? ಸೌಂಡ್​ಕ್ಲೌಡ್​ನಲ್ಲಿ ಇರುವ ಪೋಸ್ಟರ್​ನಿಂದ ಸ್ಫೂರ್ತಿ ಪಡೆದು ‘ದ್ವಿತ್ವ’ ಪೋಸ್ಟರ್​ ವಿನ್ಯಾಸ ಮಾಡಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಪವನ್​ ಕುಮಾರ್​ ಸ್ಪಷ್ಟನೆ ನೀಡಿದ ಬಳಿಕವೇ ಸತ್ಯಾಸತ್ಯತೆ ಏನು ಎಂಬುದು ಗೊತ್ತಾಗಬೇಕಿದೆ. ಅಂದಹಾಗೆ, ಈ ರೀತಿ ಪೋಸ್ಟರ್​ ಕಾಪಿ ಆರೋಪ ಕೇಳಿಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ಬಾಹುಬಲಿ’, ‘ರಾಬರ್ಟ್​’ ಮುಂತಾದ ಸಿನಿಮಾಗಳ ಪೋಸ್ಟರ್​ಗಳ ಮೇಲೂ ಇಂಥದ್ದೇ ಆರೋಪ ಎದುರಾಗಿತ್ತು.

‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ನಲ್ಲಿ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ದ್ವಿತ್ವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪುನೀತ್​ ರಾಜ್​ಕುಮಾರ್​ ಮತ್ತು ಪವನ್​ ಕುಮಾರ್​ ಒಂದಾಗಿರುವುದು ವಿಶೇಷ. ಪ್ರೀತಾ ಜಯರಾಮನ್​ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ:

‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸತ್ಯ ಪ್ರಕಾಶ್​

ಪುನೀತ್​ ರಾಜ್​ಕುಮಾರ್​ ಸಿನಿಮಾ ಹಾಡನ್ನು ಮಧುರವಾಗಿ ಹಾಡಿದ ಕೊರಿಯಾ ಯುವತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada