AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕವಾಗಿ ಅಭಿಮಾನಿಗಳಿಗೆ ಕಾಣಿಸಿಕೊಂಡ ರಣವೀರ್​ ಸಿಂಗ್​; ಇಲ್ಲೊಂದು ಅಚ್ಚರಿಯ ವಿಚಾರ ಗಮನಿಸಿದ್ರಾ?

Ranveer Singh: ರಣವೀರ್​ ಸಿಂಗ್ ತಮ್ಮ ಮನೆಯಿಂದ ನಿರ್ಗಮಿಸುವಾಗ ಛಾಯಾಗ್ರಾಹಕರ ಕಣ್ಣಿಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ನೆರೆದಿರುವ ಅಭಿಮಾನಿಗಳತ್ತ ಕೈ ಬೀಸಿ, ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವೀಡಿಯೋ  ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾರ್ವಜನಿಕವಾಗಿ ಅಭಿಮಾನಿಗಳಿಗೆ ಕಾಣಿಸಿಕೊಂಡ ರಣವೀರ್​ ಸಿಂಗ್​; ಇಲ್ಲೊಂದು ಅಚ್ಚರಿಯ ವಿಚಾರ ಗಮನಿಸಿದ್ರಾ?
ರಣವೀರ್ ಸಿಂಗ್
Follow us
TV9 Web
| Updated By: shivaprasad.hs

Updated on:Jul 03, 2021 | 1:57 PM

ಕೊರೊನಾ ಕಾರಣದಿಂದಾಗಿ ಬಹುತೇಕರು ಮನೆಯಲ್ಲೇ ಇರುವ ಪರಿಸ್ಥಿತಿ ಬಂದೊದಗಿತ್ತು. ಇದಕ್ಕೆ ಸೆಲೆಬ್ರಿಟಿಗಳು ಕೂಡ ಹೊರತಾಗಿಲ್ಲ. ಹೀಗಾಗಿ, ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ಫ್ಯಾನ್​​ಗಳಿಗೆ ಸಿಕ್ಕಿದ್ದು ಬಹಳ ಕಡಿಮೆ. ಹೀಗಿರುವಾಗಲೇ ಬಾಲಿವುಡ್ ಹೀರೋ ರಣವೀರ್ ಸಿಂಗ್ ಸಾರ್ವಜನಿಕವಾಗಿ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಚ್ಚರಿಯ ವಿಚಾರವೊಂದನ್ನು ಅಭಿಮಾನಿಗಳು ಗಮನಿಸಿದ್ದಾರೆ.

ರಣವೀರ್ ಸಿಂಗ್ ಶುಕ್ರವಾರ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ನೆಚ್ಚಿನ ಆಸ್ಟನ್ ಮಾರ್ಟಿನ್ ಕಾರು ಡ್ರೈವ್​ ಮಾಡಿಕೊಂಡು ಹೋಗಿದ್ದಾರೆ. ಈ ಕಾರು ಕೊನೆಯ ಬಾರಿಗೆ ಅಭಿಮಾನಿಗಳಿಗೆ ಕಾಣಿಸಿಕೊಂಡಾಗ ಬಿಳಿ ಬಣ್ಣದಲ್ಲಿತ್ತು. ಆದರೆ, ಈಗ ಅದರ ಬಣ್ಣ ಆಗಸ ನೀಲಿ ಬಣ್ಣಕ್ಕೆ ಬದಲಾಗಿದೆ. ರಣವೀರ್ ನೇರಳೆ ಬಣ್ಣದ ಧಿರಿಸನ್ನು ಧರಿಸಿದ್ದರು. ಅದಕ್ಕೆ ಹೊಂದುವಂತೆ ಬೂದು ಬಣ್ಣದ ಟೊಪ್ಪಿ, ಮಾಸ್ಕ್ ಹಾಗೂ ಕನ್ನಡಕವನ್ನು ಹಾಕಿಕೊಂಡಿದ್ದರು.

ತಮ್ಮ ಮನೆಯಿಂದ ನಿರ್ಗಮಿಸುವಾಗ ಛಾಯಾಗ್ರಾಹಕರ ಕಣ್ಣಿಗೆ ರಣವೀರ್ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ನೆರೆದಿರುವ ಅಭಿಮಾನಿಗಳತ್ತ ಕೈ ಬೀಸಿ, ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವೀಡಿಯೋ  ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ರಣವೀರ್ ಕಳೆದ ತಿಂಗಳಷ್ಟೇ 2.5 ಕೋಟಿಗೂ ಅಧಿಕ ಮೊತ್ತದ ಮರ್ಸಿಡೀಸ್ ಜಿಎಲ್ಎಸ್ ಕಾರಿನ ಒಡೆಯರಾಗಿದ್ದಾರೆ. ಅವರ ಬಳಿ ಮತ್ತೊಂದು ಮರ್ಸಿಡಿಸ್, ಜಾಗ್ವಾರ್, ಆಡಿ Q5, ಲ್ಯಾಂಡ್ ರೋವರ್ ರೇಂಜ್ ರೋವರ್ ವಾಗ್, ಲ್ಯಾಂಬೊರ್ಗಿನಿ ಉರುಸ್ ಸೇರಿದಂತೆ ವಿವಿಧ ಕಂಪೆನಿಯ ಕಾರುಗಳು ಇವೆ.

ರಣವೀರ್ ನಟನೆಯ ‘83’ ಮೊದಲಿನ ಲೆಕ್ಕಾಚಾರದ ಪ್ರಕಾರ 2020ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಸಿನಿಮಾ ಬಿಡುಗಡೆಯಾಗಿಲ್ಲ. ಈ ಚಿತ್ರವು 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಕಥನ. ಇದರಲ್ಲಿ ರಣವೀರ್ ಅವರು ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಕಪಿಲ್ ದೇವ್ ಅವರ ಪತ್ನಿ ರೋಮಿ ಪಾತ್ರದಲ್ಲಿ ರಣವೀರ್ ಅವರ ನಿಜ ಜೀವನದ ಪತ್ನಿ ದೀಪಿಕಾ ಪಡುಕೋಣೆ ಬಣ್ಣಹಚ್ಚುತ್ತಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದ ‘ಸರ್ಕಸ್​​’ ಚಿತ್ರವೂ ರಣವೀರ್ ಅವರ ಖಾತೆಯಲ್ಲಿ ಇದೆ. ಈ ಮೊದಲು ರೋಹಿತ್ ಶೆಟ್ಟಿ- ರಣವೀರ್ ಕಾಂಬಿನೇಷನ್​​ನಲ್ಲಿ ‘ಸಿಂಬಾ’ ಚಿತ್ರ ಬಂದಿತ್ತು. ರೋಹಿತ್ ಶೆಟ್ಟಿಯವರ ‘ಸೂರ್ಯವಂಶಿ’ ಚಿತ್ರದಲ್ಲಿ ರಣವೀರ್ ವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಸರ್ಕಸ್ ಚಿತ್ರವು ವಿಲಿಯಂ ಶೇಕ್ಸ್ಪಿಯರ್ ಅವರ ಕಾಮಿಡಿ ಆಫ್ ಎರರ್ಸ್ ನಾಟಕವನ್ನು ಅಳವಡಿಸಿಕೊಂಡು ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ ಬಹುತಾರಾಗಣದ ಚಿತ್ರ. ಇದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ಪೂಜಾ ಹೆಗ್ಡೆ, ಸಂಜಯ್ ಮಿಶ್ರಾ, ಸಿದ್ಧಾರ್ಥ ಜಾಧವ್, ವರುಣ್ ಶರ್ಮಾ, ಮುಖೇಶ್ ತಿವಾರಿ ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗವೇ ಇದೆ. ರಣವೀರ್ ಕೈಯಲ್ಲಿ ಇವಲ್ಲದೇ ಕರಣ್ ಜೋಹರ್ ನಿರ್ಮಾಣದ ‘ತಖ್ತ್​’ ಚಿತ್ರವೂ ಇದೆ.

ಇದನ್ನೂ ಓದಿ: ‘ಶಂಕರ್​ ನಾಗ್​ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ’; ಬಾಲಿವುಡ್​ ನಟಿ ಭಾವುಕ ನುಡಿ

(Ranveer Singh Appears in front of camera and waves at fans and and driving away in his aston martin)

Published On - 5:48 pm, Fri, 2 July 21

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!