AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟಿಗನ ಜತೆ ಹಸೆಮಣೆ ಏರಿದ ಖ್ಯಾತ ನಿರ್ದೇಶಕ ಶಂಕರ್ ಮಗಳು ಐಶ್ವರ್ಯಾ

ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನೆರವೇರಿದೆ. ಕೊವಿಡ್ ಕಾರಣದಿಂದ ಮದುವೆಗೆ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ತಮಿಳುನಾಡು ರಾಜಕಾರಣಿಗಳು ಮದುವೆಗೆ ಆಗಮಿಸಿ ನವ ದಂಪತಿಯನ್ನು ಹರಸಿದ್ದಾರೆ.

ಕ್ರಿಕೆಟಿಗನ ಜತೆ ಹಸೆಮಣೆ ಏರಿದ ಖ್ಯಾತ ನಿರ್ದೇಶಕ ಶಂಕರ್ ಮಗಳು ಐಶ್ವರ್ಯಾ
ಕ್ರಿಕೆಟಿಗನ ಜತೆ ಹಸೆಮಣೆ ಏರಿದ ಖ್ಯಾತ ನಿರ್ದೇಶಕ ಶಂಕರ್ ಮಗಳು ಐಶ್ವರ್ಯಾ
ರಾಜೇಶ್ ದುಗ್ಗುಮನೆ
| Edited By: |

Updated on: Jun 27, 2021 | 5:12 PM

Share

ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಎಸ್. ಶಂಕರ್ ಮಗಳು ಐಶ್ವರ್ಯಾ ಅವರು ಕ್ರಿಕೆಟಿಗ ರೋಹಿತ್ ದಾಮೋದರನ್ ಜತೆ ಇಂದು (ಜೂನ್ 27) ಹಸೆಮಣೆ ಎರಿದ್ದಾರೆ. ತಮಿಳುನಾಡು ರಾಜಕಾರಣಿಗಳು ಮದುವೆಗೆ ಆಗಮಿಸಿ ನವ ದಂಪತಿಯನ್ನು ಹರಸಿದ್ದಾರೆ.

ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನೆರವೇರಿದೆ. ಕೊವಿಡ್ ಕಾರಣದಿಂದ ಮದುವೆಗೆ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಮಗ, ರಾಜಕಾರಣಿ ಉದಯಾನಿಧಿ ಸ್ಟಾಲಿನ್, ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮಾ ಸುಬ್ರಮಣಿಯಮ್ ಕೂಡ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಐಶ್ವರ್ಯಾ ಹಾಗೂ ರೋಹಿತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವ ದಂಪತಿಗೆ ಎಲ್ಲರೂ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಕೊವಿಡ್ ಸಂಖ್ಯೆಗಳು ಕಡಿಮೆ ಆದ ನಂತರದಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಸಲು ನಿರ್ದೇಶಕ ಶಂಕರ್ ನಿರ್ಧರಿಸಿದ್ದಾರೆ. ಈ ವೇಳೆ ಫಿಲ್ಮ್ ಇಂಡಸ್ಟ್ರಿಯ ಸಾಕಷ್ಟು ಜನರಿಗೆ ಆಮಂತ್ರಣ ಸಿಗುವ ಸಾಧ್ಯತೆ ಇದೆ.

ರೋಹಿತ್ ದಾಮೋದರನ್ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್​ಪಿಎ​ಲ್) ಆಟಗಾರ. ರೋಹಿತ್ ತಂದೆ ದಾಮೋದರನ್ ಉದ್ಯಮಿ.  ಟಿಎನ್​ಪಿಎ​ಲ್​ನಲ್ಲಿರುವ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ವೃತ್ತಿಯಲ್ಲಿ ವೈದ್ಯೆ.

1993ರಲ್ಲಿ ತೆರೆಗೆ ಬಂದ ‘ಜಂಟಲ್​ಮನ್​’ ಸಿನಿಮಾ ಮೂಲಕ ಶಂಕರ್ ನಿರ್ದೇಶನಕ್ಕೆ ಕಾಲಿಟ್ಟರು. ವೃತ್ತಿಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. 2010ರಲ್ಲಿ ತೆರೆಗೆ ಬಂದ ‘ಎಂದಿರನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸದ್ಯ, ಅವರು ‘ಇಂಡಿಯನ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕಮಲ್ ಹಾಸನ್ ಈ ಚಿತ್ರದ ನಾಯಕ. ‘ಇಂಡಿಯನ್’ ಚಿತ್ರದ ಮುಂದಿನ ಭಾಗ ಇದಾಗಿದೆ.

ಇದನ್ನೂ ಓದಿ:

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?

Follow Us
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ