AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಬಿಗ್ ಬಾಸ್ ಮನೆಯಲ್ಲಿದ್ದಾರೆ ಸಂಬಂಧಿಕರು; ಯಾರ್ಯಾರು ಗೊತ್ತಾ?
ಬಿಗ್​ ಬಾಸ್​ ಕನ್ನಡ
TV9 Web
| Edited By: |

Updated on: Jun 26, 2021 | 4:55 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 8’ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಕೊವಿಡ್​ನಿಂದ ಅರ್ಧಕ್ಕೆ ನಿಂತಿದ್ದ ದೊಡ್ಮನೆ ಶೋ ಮತ್ತೆ ಶುರುವಾಗಿರೋದು ಪ್ರೇಕ್ಷಕರಿಗೆ ಖುಷಿ ನೀಡಿದೆ. ಎಲ್ಲಾ ಸ್ಪರ್ಧಿಗಳು ಹೊಸ ಲೆಕ್ಕಾಚಾರದೊಂದಿಗೆ ಮನೆ ಸೇರಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸಂಬಂಧಿಕರು ಇರುವ ವಿಚಾರ ಬಯಲಾಗಿದೆ.

ಶಮಂತ್ ಬ್ರೋ ಗೌಡ ಹಾಗೂ ಪ್ರಶಾಂತ್ ಸಂಬರಗಿ ರಿಲೇಟಿವ್ಸ್. ಈ ವಿಚಾರವನ್ನು ಪ್ರಶಾಂತ್ ಹೇಳಿಕೊಂಡಿದ್ದಾರೆ. ಬಿಗ್ ಬಾಸ್​ ಮೊದಲ ಇನ್ನಿಂಗ್ಸ್​ ಆರಂಭವಾದಾಗ ಪ್ರಶಾಂತ್ ಪರ ಇದ್ದವರು ಕೆಲವೇ ಕೆಲವು ಮಂದಿ. ಡಲ್ ಆಗಿದ್ದ ಶಮಂತ್​ಗೆ ಹೊಸ ಹುರುಪು ತುಂಬುವ ಮೂಲಕ ಅವರನ್ನು ಪ್ರಶಾಂತ್ ತಮ್ಮೆಡೆ ಸೆಳೆದುಕೊಂಡಿದ್ದರು. ಮೊದಲ ಇನ್ನಿಂಗ್ಸ್ ಕೊನೆ ಕೊನೆಯಲ್ಲಿ ಪ್ರಶಾಂತ್ ಪರ ನಿಲ್ಲುವ ಕೆಲಸವನ್ನು ಶಮಂತ್​ ಮಾಡಿದ್ದರು. ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಿಗೆ ತಾವು ನೆಂಟರು ಎನ್ನುವ ವಿಚಾರ ಗೊತ್ತಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕೂರ್ಚಿ ಪಾಲಿಟಿಕ್ಸ್ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್​ನ ನಿಯಮದ ಪ್ರಕಾರ ಮನೆಯಲ್ಲಿರುವ ಎರಡು ತಂಡಗಳ ಸದಸ್ಯರು ಚೇರ್ ಮೇಲೆ ಕೂರಬೇಕು. ಎರಡೂ ತಂಡದ ತಲಾ ಮೂರು ಸದಸ್ಯರು ಕೂತಿದ್ದಾರೆ. ಶಮಂತ್-ಪ್ರಶಾಂತ್ ಅಕ್ಕಪಕ್ಕದಲ್ಲೇ ಕುಳಿತಿದ್ದಾರೆ.

ಈ ವೇಳೆ ಏನೋ ಚರ್ಚೆ ಬಂದಾಗ, ‘ಸಂಬಂಧಿಕರು ಅನ್ನೋದೆಲ್ಲ ಬಿಗ್ ಬಾಸ್ ಮನೆಯ ಹೊರಗೆ’ ಎಂದು ಪ್ರಶಾಂತ್​ಗೆ ಶಮಂತ್​ ಹೇಳಿದರು. ಆಗ ಮಂಜು ಪಾವಗಡ, ಯಾರು ರಿಲೇಟಿವ್ಸ್ ಎಂದು ಪ್ರಶ್ನೆ ಮಾಡಿದರು. ಅಲ್ಲೇ ಇದ್ದ ಚಕ್ರವರ್ತಿ ಚಂದ್ರಚೂಡ್, ‘ಅವರಿಬ್ಬರೂ ರಿಲೇಟಿವ್ಸ್. ಬ್ರೋ ಗೌಡ ದಾವಣಗೆರೆಯವನು. ಇವರು ನೆಂಟಸ್ತನ ಬೆಳೆಸಿದ್ದಲ್ಲ. ಅದಾಗಿಯೇ ಬೆಳೆದುಬಿಟ್ಟಿದೆ’ ಎಂದು ವಿವರಣೆ ನೀಡಿದರು. ಈ ವಿಚಾರದ ಬಗ್ಗೆ ಮಾತನಾಡಿದ ಪ್ರಶಾಂತ್, ‘ಒಂದೇ ಬೀಗರ ಕಡೆಯಿಂದ ಗಂಡು-ಹೆಣ್ಣು ಪಡೆದುಕೊಳ್ಳಲಾಗಿದೆ ಅಷ್ಟೇ’ ಎಂದು ಹೇಳುವ ಮೂಲಕ ತಾವಿಬ್ಬರೂ ನೆಂಟರು ಎಂಬುದನ್ನು ಒಪ್ಪಿಕೊಂಡರು.

ಈ ವಿಚಾರ ಕೇಳಿದ ಮನೆಯ ಅನೇಕ ಸದಸ್ಯರು ಅಚ್ಚರಿ ಹೊರ ಹಾಕಿದರು. ಅಷ್ಟೇ ಅಲ್ಲ, ವೀಕ್ಷಕರ ಪಾಲಿಗೂ ಇದು ಹೊಸ ವಿಷಯವೇ.

ಇದನ್ನೂ ಓದಿ:

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಕನ್ನಡ ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಎಲಿಮಿನೇಟ್​ ಆಗೋರು ಇವರೇನಾ?

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ