ಶಾರುಖ್ ಖಾನ್ ಮುಂದಿನ ಚಿತ್ರಕ್ಕೆ ‘ಸೂಪರ್’ ಸಿನಿಮಾ ಹೀರೋಯಿನ್
ವಿಜಯ್ ನಟನೆಯ ‘ಬಿಗಿಲ್’, ‘ಮೆರ್ಸಲ್’ ಹಾಗೂ ‘ತೇರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅಟ್ಲೀ ಅವರಿಗಿದೆ. ಈಗ ಶಾರುಖ್ ಮುಂದಿನ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
‘ಜೀರೋ’ ಚಿತ್ರ ಸೋತ ನಂತರದಲ್ಲಿ ಶಾರುಖ್ ಒಂದು ಗ್ಯಾಪ್ ತೆಗೆದುಕೊಂಡಿದ್ದರು. ಈಗ ಅವರ ಮುಂದಿನ ಸಿನಿಮಾ ‘ಪಠಾಣ್’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದ ಶೂಟಿಂಗ್ ಸದ್ಯ ಪ್ರಗತಿಯಲ್ಲಿದೆ. ಇದಲ್ಲದೆ, ಖ್ಯಾತ ನಿರ್ದೇಶಕ ಅಟ್ಲೀ ಜತೆ ಶಾರುಖ್ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ನಯನತಾರಾ ನಾಯಕಿಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ವಿಜಯ್ ನಟನೆಯ ‘ಬಿಗಿಲ್’, ‘ಮೆರ್ಸಲ್’ ಹಾಗೂ ‘ತೇರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅಟ್ಲೀ ಅವರಿಗಿದೆ. ಈ ಮೂರು ಚಿತ್ರಗಳು ಹಿಟ್ ಚಿತ್ರಗಳು. ಈಗ ಶಾರುಖ್ ಮುಂದಿನ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಪ್ರಗತಿಯಲ್ಲಿದೆ. ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರನ್ನು ಈ ಸಿನಿಮಾಗೆ ಹೀರೋಯಿನ್ ಆಗಿ ಫೈನಲ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಟ್ಲೀ-ಶಾರುಖ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿದೆ. ಈ ಕಾರಣಕ್ಕೆ ದಕ್ಷಿಣ ಭಾರತದ ನಟಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಚಿತ್ರತಂಡದ ಆಲೋಚನೆ. ಇನ್ನು, ನಯನತಾರಾ ನಟನೆ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ‘ಬಿಗಿಲ್’ ಚಿತ್ರದಲ್ಲಿ ನಯನತಾರಾ ಹಾಗೂ ಅಟ್ಲೀ ಒಟ್ಟಾಗಿ ಕೆಲಸ ಮಾಡಿದ್ದರು. ನಯನತಾರಾ ಕಾರ್ಯವೈಖರಿ ಅಟ್ಲೀ ಅವರಿಗೆ ಇಷ್ಟವಾಗಿದೆ.
ಸದ್ಯ, ಶಾರುಖ್ ಖಾನ್ ‘ಪಠಾಣ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದಕ್ಕಿಂತ ಮೊದಲೇ ಅಟ್ಲೀ-ಶಾರುಖ್ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಆರಂಭವಾಗೋದು ತಡವಾಗಿದೆ. ಹೀಗಾಗಿ, ಶಾರುಖ್ ‘ಪಠಾಣ್’ ನಂತರ ಈ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ.
2010ರಲ್ಲಿ ತೆರೆಗೆ ಬಂದ ಉಪೇಂದ್ರ ನಟನೆಯ ‘ಸೂಪರ್’ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಇದು. ಈ ಚಿತ್ರ ತೆರೆಕಂಡ ನಂತರದಲ್ಲಿ ತಮಿಳು ಚಿತ್ರರಂಗದಲ್ಲಿ ನಯನತಾರಾ ಬ್ಯುಸಿ ಆದರು. ಅಲ್ಲಿ ಹಿಟ್ ಚಿತ್ರಗಳನ್ನು ನೀಡಿದರು. ಸದ್ಯ, ರಜನಿಕಾಂತ್ ನಟನೆಯ ಅಣ್ಣಾಥೆ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:
ಶಾರುಖ್ ನಟನೆಯ ಪಠಾಣ್ ಸಿನಿಮಾ ರಿಲೀಸ್ಗೆ ಫಿಕ್ಸ್ ಆಯ್ತು ದಿನಾಂಕ
Thalapathy Vijay: ಒಂದೇ ಮಾತಿನಲ್ಲಿ ದಳಪತಿ ವಿಜಯ್ಗೆ ಶಾರುಖ್ ಖಾನ್ ಹೊಗಳಿಕೆ; ಯಾವುದು ಆ ಮಾತು?
Published On - 4:04 pm, Sat, 26 June 21