ಶಾರುಖ್​ ನಟನೆಯ ಪಠಾಣ್​ ಸಿನಿಮಾ ರಿಲೀಸ್​ಗೆ ಫಿಕ್ಸ್​ ಆಯ್ತು ದಿನಾಂಕ 

ಕೊವಿಡ್​ ಕಾರಣದಿಂದ ಪಠಾಣ್​ ಸಿನಿಮಾ ಶೂಟಿಂಗ್​ ನಿಂತಿತ್ತು. ಈಗ ಶಾರುಖ್​ ಚಿತ್ರರಂಗಕ್ಕೆ ಕಾಲಿಟ್ಟು 29 ವರ್ಷ ಕಳೆದಿದೆ. ಇದೇ ವಿಶೇಷ ಸಂದರ್ಭದಂದು ಪಠಾಣ್​ ಚಿತ್ರೀಕರಣ ಆರಂಭಗೊಂಡಿದೆ

ಶಾರುಖ್​ ನಟನೆಯ ಪಠಾಣ್​ ಸಿನಿಮಾ ರಿಲೀಸ್​ಗೆ ಫಿಕ್ಸ್​ ಆಯ್ತು ದಿನಾಂಕ 
ಶಾರುಖ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 25, 2021 | 8:17 PM

ಸಿದ್ಧಾರ್ಥ್​ ಆನಂದ್ ನಿರ್ದೇಶನ ಮಾಡುತ್ತಿರುವ ‘ಪಠಾಣ್​’ ಚಿತ್ರದ ಮೂಲಕ ಶಾರುಖ್​ ಖಾನ್​ ಕಂಬ್ಯಾಕ್​ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿಯೊಂದು ಹರಿದಾಡಿದೆ.

2013ರಲ್ಲಿ ತೆರೆಗೆ ಬಂದಿದ್ದ ಶಾರುಖ್​ ನಟನೆಯ ‘ಚೆನ್ನೈ ಎಕ್ಸ್​ಪ್ರೆಸ್’​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಅವರ ಅಭಿನಯದ ‘ಹ್ಯಾಪಿ ನ್ಯೂ ಇಯರ್’​ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದ್ದರೂ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ನಂತರ ತೆರೆಕಂಡ ಅವರ ನಟನೆಯ ಎಲ್ಲಾ ಚಿತ್ರಗಳೂ ನೆಲ ಕಚ್ಚಿದ್ದವು. ಈಗ ಶಾರುಖ್​ ‘ಪಠಾಣ್’​ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಮುಂದಿನ ಈದ್​ಗೆ ಈ ಸಿನಿಮಾ ತೆರೆಗೆ ಬರಲಿದೆಯಂತೆ.

ಕೊವಿಡ್​ ಕಾರಣದಿಂದ ಪಠಾಣ್​ ಸಿನಿಮಾ ಶೂಟಿಂಗ್​ ನಿಂತಿತ್ತು. ಈಗ ಶಾರುಖ್​ ಚಿತ್ರರಂಗಕ್ಕೆ ಕಾಲಿಟ್ಟು 29 ವರ್ಷ ಕಳೆದಿದೆ. ಇದೇ ವಿಶೇಷ ಸಂದರ್ಭದಂದು ಪಠಾಣ್​ ಚಿತ್ರೀಕರಣ ಆರಂಭಗೊಂಡಿದೆ. ಅಂದಹಾಗೆ, ವೃತ್ತಿಜೀವನದಲ್ಲಿ ಶಾರುಖ್​ ಇಷ್ಟು ದೊಡ್ಡ ಬ್ರೇಕ್​ ತೆಗೆದುಕೊಂಡಿದ್ದು ಇದೇ ಮೊದಲು.

ಮುಂಬೈನ ಯಶ್ ರಾಜ್​ ಸ್ಟುಡಿಯೋದಲ್ಲಿ ಪಠಾಣ್​ ಶೂಟಿಂಗ್​ ನಡೆಯುತ್ತಿದೆ. ಮುಂದಿನ 18 ದಿನಗಳ ಕಾಲ ಚಿತ್ರತಂಡ ಇಲ್ಲಿಯೇ ಬೀಡು ಬಿಡಲಿದೆ. ವಾರ್​​ ಸಿನಿಮಾ ನಿರ್ದೇಶನ ಮಾಡಿದ ಖ್ಯಾತಿ ಸಿದ್ಧಾರ್ಥ್​ ಆನಂದ್​ಗೆ ಇದೆ. ಆ್ಯಕ್ಷನ್​ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ ಅವರದ್ದು. ಹೀಗಾಗಿ ಪಠಾಣ್​ ಚಿತ್ರದಲ್ಲೂ ದೊಡ್ಡ ಮಟ್ಟದಲ್ಲಿ ಆ್ಯಕ್ಷನ್​ ಇರಲಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಪಠಾಣ್​ ಚಿತ್ರತಂಡ ದುಬೈನಲ್ಲಿ ಶೂಟಿಂಗ್​ ನಡೆಸಿತ್ತು.ಇದರ ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗಿದ್ದವು. ಇದಲ್ಲದೆ, ಯುರೋಪ್​ ಹಾಗೂ ರಷ್ಯಾದಲ್ಲಿಯೂ ಪಠಾಣ್​ ಶೂಟಿಂಗ್​ ನಡೆಸೋಕೆ ಪ್ಲ್ಯಾನ್ ರೂಪಿಸಲಾಗಿದೆ.

ಇದನ್ನೂ ಓದಿ: ಹಲವು ವರ್ಷಗಳ ಶಾರುಖ್-ಸಲ್ಮಾನ್ ಜಗಳಕ್ಕೆ ಮದುವೆ ವಿಚಾರ ಕಾರಣ; ಕಿಂಗ್ ಖಾನ್ ಬಿಚ್ಚಿಟ್ಟ ರಹಸ್ಯ

Shah Rukh Khan: ‘ನೀವು ನಿರುದ್ಯೋಗಿ ಆಗಿಬಿಟ್ರಾ’ ಎಂದು ನೇರವಾಗಿ ಕೇಳಿದ ನೆಟ್ಟಿಗನಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?

Published On - 8:13 pm, Fri, 25 June 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ