Horoscope Today 19 August : ಇಂದು ಈ ರಾಶಿಯವರ ಪ್ರಭಾವದಿಂದ ಅತಿಮುಖ್ಯ ಕಾರ್ಯಗಳು ಸಂಪನ್ನ…
ನಿತ್ಯ ಭವಿಷ್ಯ: ಆಗಸ್ಟ್ 19, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು, ಸಂಬಂಧಗಳಲ್ಲಿ ಸುಧಾರಣೆ, ಮತ್ತು ದಿನದ ಶುಭ-ಅಶುಭ ಕಾಲದ ಕುರಿತು ಮಾರ್ಗದರ್ಶನ ನೀಡುತ್ತದೆ. ಇಂದಿನ ಗ್ರಹಗಳ ಪ್ರಭಾವವು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಬುಧವಾರದಂದು ಅನ್ವೇಷಣೆ, ಉನ್ನತ ಸ್ಥಾನದಿಂದ ಸಂತಸ, ಸಂತಾನ, ಸೃಜನಾತ್ಮಕತೆ, ರಾಜಕೀಯ, ಕಾನೂನು ಹೋರಾಟ ಇದೆಲ್ಲ ಈ ದಿನದ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಶುಕ್ಲ, ಕರಣ : ಬಾಲವ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:23 – 13:57, ಯಮಗಂಡ ಕಾಲ 07:42 – 09:16, ಗುಳಿಕ ಕಾಲ 10:50 – 12:23
ಮೇಷ ರಾಶಿ :
ಇಂದಿನ ಕಠಿಣ ಸಂದರ್ಭದಲ್ಲಿ ನಿಮ್ಮ ವರ್ತನೆಯೂ ಲೆಕ್ಕಕ್ಕೆ ಬರಲಿದೆ. ನಿಮ್ಮ ಕೆಲಸಗಳು ನಿಮ್ಮನ್ನು ಯಾರೆಂದು ಹೇಳುವುದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ನಿಮ್ಮ ಮನಸ್ಸು ತೆರೆದುಕೊಳ್ಳಬಹುದು. ದಾನದಲ್ಲಿ ಇಂದು ಹೆಚ್ಚಿನ ಖುಷಿಯನ್ನು ಕಾಣುವಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬೇರೆಯವರ ಮೇಲೆ ಒತ್ತಡ ತರುವುದು ಬೇಡ. ವಹಿಸಿಕೊಂಡ ಕಾರ್ಯವನ್ನು ಸಕಾಲಕ್ಕೆ ಮುಗಿಸಿ ನಿಶ್ಚಿಂತರಾಗುವಿರಿ.
ವೃಷಭ ರಾಶಿ :
ಅನ್ಯರು ನಿಮ್ಮನ್ನು ಗೇಲಿ ಮಾಡಿಯಾರು. ಕಛೇರಿಯ ಕಾರ್ಯಗಳು ಕೆಲವು ನಿಧಾನವಾಗಿ ಸಾಗುವುದು. ಪತ್ನಿಯೊಂದಿಗೆ ಭಾವನಾತ್ಮಕ ಸಂಬಂಧ ಗಾಢವಾಗುತ್ತದೆ. ಸ್ನೇಹಿತರೊಂದಿಗೆ ಸಂತೋಷದ ಕ್ಷಣ. ಹೊಸ ಸಂಪರ್ಕಗಳಿಂದ ಲಾಭ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟವಾದೀತು. ಅವ್ಯವಹಾರದ ಬಗ್ಗೆ ಗಮನ ಬೇಡ. ಅನಾರೋಗ್ಯದ ನಿವಾರಣೆಗೆ ದೈವದ ಮೊರೆಹೋಗುವುದು ಉಚಿತ.
ಮಿಥುನ ರಾಶಿ :
ಒಂದು ಗುಣದಿಂದ ಉಅರ ಸ್ವಭಾವವನ್ನು ಅಳೆಯಲು ಆಗದು. ಸ್ವಲ್ಪ ದಿನ ಕಾದುನೋಡುವುದು ಒಳ್ಳೆಯದು. ಆತುರದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಬಹುದು. ಆರ್ಥಿಕ ಲಾಭದ ಸಾಧ್ಯತೆ ಇದೆ. ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಇಂದಿನ ಒತ್ತಡವನ್ನು ಸಹಿಸಿಕೊಂಡು ಇರುವುದು ಕಷ್ಟವಾದೀತು. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು.
ಕರ್ಕಾಟಕ ರಾಶಿ :
ಮನಸ್ತಾಪಗಳನ್ನು ಹೊರಹಾಕುವಲ್ಲಿ ಹಾಕಿ ಮತ್ತು ಅದಕ್ಕೆ ರೀತಿಯೂ ಇರಲಿ. ನಿಮ್ಮ ಉತ್ಸಾಹವು ಸಂಜೆಯ ಸಮಯಕ್ಕೆ ಅತಿಯಾಗಿ ಇರುವುದು. ಕುಟುಂಬದಲ್ಲಿ ಪರಸ್ಪರ ವಿಶ್ವಾಸ ಹೆಚ್ಚಾಗುತ್ತದೆ. ಸ್ನೇಹಿತರ ಬೆಂಬಲ ಲಭಿಸುತ್ತದೆ. ಹೊಸ ಹೂಡಿಕೆ ಯೋಚನೆಗೆ ಅನುಕೂಲಕರ ಕಾಲ. ಕೃಷಿಯನ್ನು ನಂಬಿದವರಿಗೆ ಸ್ವಲ್ಪ ಕಷ್ಟವಾಗಲಿದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಕಣ್ತಪ್ಪಿನಿಂದ ಆದ ಸಣ್ಣ ಅನಾಹುತವೂ ದೊಡ್ಡ ರೂಪವನ್ನು ಪಡೆಯಬಹುದು.
ಸಿಂಹ ರಾಶಿ :
ಸಂದರ್ಭಕ್ಕೆ ತಕ್ಕಹಾಗೆ ನಿಮ್ಮನ್ನು ಪರಿವರ್ತನೆ ಮಾಡಿಕೊಂಡರೆ ಯಾವುದೂ ಕಷ್ಟವಾಗದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ಎದುರಾಗಬಹುದು. ಆರೋಗ್ಯದಲ್ಲಿ ದಣಿವು ಮತ್ತು ಒತ್ತಡ ಕಾಡಬಹುದು. ಮನೆಯಲ್ಲಿ ಸಣ್ಣ ಗೊಂದಲ ಮೂಡುವ ಸಾಧ್ಯತೆ. ಹಿರಿಯರ ಸಲಹೆ ಪಾಲಿಸಿದರೆ ಲಾಭ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು. ಅದಕ್ಕೆ ಏನನ್ನಾದರೂ ಹೇಳಬೇಡಿ. ಗೆಲುವಿಗಾಗಿ ಅಧಿಕ ಶ್ರಮದ ಅವಶ್ಯಕತೆ ಇರಲಿದೆ.
ಕನ್ಯಾ ರಾಶಿ :
ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರಾದರೂ ಅವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ. ಸಾಲವನ್ನು ತೀರಿಸಲು ಕೆಲವು ದಿನದ ಸಮಯಾವಕಾಶ ಕೇಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆರೋಗ್ಯದಲ್ಲಿ ಸಾಮಾನ್ಯ ಚುರುಕುತನ ಕಂಡುಬರುತ್ತದೆ. ಸಂಗಾತಿಯೊಂದಿಗೆ ಸಿಹಿ ಕ್ಷಣ ಕಳೆಯುವಿರಿ. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿಮ್ಮ ಬಳಿ ಬಂದವರಿಗೆ ಸಾಂತ್ವನದ ಸುಖವು ಬೇಕಾಗಿರಬಹುದು.
ತುಲಾ ರಾಶಿ :
ಸಂಗಾತಿಯ ನಡುವಿನ ವೈಮನಸ್ಯವು ಮಕ್ಕಳಿಂದ ದೂರಾಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ಶಿಸ್ತಿನಿಂದ ಇರಲಿ. ಕರ್ತವ್ಯದ ವಿಚಾರದಲ್ಲಿ ನೀವು ಸೋಲುವಿರಿ. ಯಾವುದನ್ನೂ ಮೇಲ್ನೋಟದಿಂದ ತೀರ್ಮಾನಿಸುವುದು ಬೇಡ. ಹಳೆಯ ಸಂಪರ್ಕಗಳು ಉದ್ಯೋಗ ಕ್ಷೇತ್ರದಲ್ಲಿ ಸಹಕಾರ ನೀಡಬಹುದು. ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮಗಿರುವ ಹೊಣೆಗಾರಿಕೆ ತಪ್ಪಬಹುದು.
ವೃಶ್ಚಿಕ ರಾಶಿ :
ಕೃಷಿಯಲ್ಲಿ ಆಸಕ್ತಿ ಇರುವವರು ಹೊಸತನ್ನು ಮಾಡುವರು. ಸ್ನೇಹಿತರೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಿರಿ. ದಿನಾಂತ್ಯದಲ್ಲಿ ಕುಟುಂಬದೊಂದಿಗೆ ಹರ್ಷಭರಿತ ವಾತಾವರಣ ಸಿಗಲಿದೆ. ಇಂದು ನಿಮ್ಮ ನಾಯಕತ್ವ ಗುಣ ಹೊರಹೊಮ್ಮುತ್ತದೆ. ಸಂಗಾತಿಯ ಕೆಲವು ವರ್ತನೆಗಳು ನಿಮಗೆ ವಿಚಿತ್ರ ಎನಿಸಬಹುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು. ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ. ಕೆಲವನ್ನು ನೀವು ಸಣ್ಣವರಿಂದ ಕಲಿಯಬೇಕಾಗುವುದು.
ಧನು ರಾಶಿ :
ಇಂದಿನ ಪ್ರಯಾಣದ ದಣಿವು ನಿಮ್ಮನ್ನು ಬಾಧಿಸೀತು. ನೀವು ಯಾರಿಗಾದರೂ ಮಾದರಿಯಾಗಬೇಕು ಎಂದುಕೊಳ್ಳಬೇಕಿಲ್ಲ. ಮಕ್ಕಳಿಗೆ ಆದರೆ ಸಾಕು. ಸಂಗಾತಿಯ ತಪ್ಪನ್ನು ಹೇಳುವ ರೀತಿಯಲ್ಲಿ ಹೇಳಿ. ಇಲ್ಲವಾದರೆ ಸುಮ್ಮನೇ ವೈಮನಸ್ಯ ಉಂಟಾಗಬಹುದು. ಆರೋಗ್ಯದಲ್ಲಿ ಚುರುಕುತನ ಮತ್ತು ಶಕ್ತಿ ಕಂಡುಬರುತ್ತದೆ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಖರ್ಚಿನ ಬಗ್ಗೆ ಅಂದಾಜು ಇಲ್ಲದೇ ಕಾರ್ಯವನ್ನು ಒಪ್ಪಿಕೊಳ್ಳುವಿರಿ.
ಇದನ್ನೂ ಓದಿ: ದಕ್ಷಿಣಾಯನ ಮತ್ತು ಸಿಂಹಸಂಕ್ರಾಂತಿ; ಆಧ್ಯಾತ್ಮಿಕ ಮಹತ್ವ, ಹಬ್ಬ ಹಾಗೂ ಆಚರಣೆಗಳು
ಮಕರ ರಾಶಿ :
ಅಪರಿಚಿತರು ನಿಮ್ಮ ನಡುವೆ ಏನಾದರೂ ಆಗುವಂತೆ ನೋಡಬಹುದು. ಪಾಲುದಾರಿಕೆಯಲ್ಲಿ ಇರುವವರು ಪರಸ್ಪರರ ಮಾತನ್ನು ಮಾತ್ರ ನಂಬಿ. ಅನ್ಯರ ಮಾತನ್ನು ಕೇಳಿಸಿಕೊಳ್ಳುವುದು ಬೇಡ. ಪ್ರಾಮಾಣಿಕತೆ ಕಾಪಾಡಿಕೊಳ್ಳುವುದು ಅವಶ್ಯ. ಹಿರಿಯರ ಮಾತುಗಳನ್ನು ಗೌರವಿಸುವುದು ಒಳಿತು. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ.
ಕುಂಭ ರಾಶಿ :
ನಿಮ್ಮವರನ್ನು ನೀವು ಕಳೆದುಕೊಂಡು ದುಃಖಪಡಬೇಕಾದೀತು. ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ ಎದುರಾಗಬಹುದು. ಆದರೆ ತಾಳ್ಮೆ ಕಾಪಾಡಿದರೆ ಉತ್ತಮ ಫಲ. ಕುಟುಂಬದಲ್ಲಿ ಸಣ್ಣ ಅಸಮಾಧಾನಗಳಿದ್ದರೂ ಸಂಜೆ ವೇಳೆಗೆ ಶಾಂತಿ ಸ್ಥಾಪನೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ.
ಮೀನ ರಾಶಿ :
ನಿಮ್ಮ ಎಲ್ಲ ಮಂತ್ರಕ್ಕೆಊ ಮಾವಿನ ಕಾಯಿ ಬೀಳದು. ಪ್ರಯತ್ನ ಬಹಳ ಮುಖ್ಯ. ನಿಮ್ಮ ವಿರುದ್ಧ ಯಾರಾದರೂ ಮಾತನಾಡಬಹುದು. ಹಿತಶತ್ರುಗಳ ನಿಮ್ಮ ವಿರುದ್ಧ ಸಂಚುರೂಪಿಸುವರು. ಸಹೋದ್ಯೋಗಿಗಳ ಸಹಕಾರದಿಂದ ಕೆಲವು ನಿರೀಕ್ಷಿತ ಫಲಗಳು ದೊರೆಯಬಹುದು. ಹಣಕಾಸಿನಲ್ಲಿ ಸಣ್ಣ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ. ಮಾತನ್ನು ಕಡಿಮೆ ಮಾಡಿ. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ.
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




