ದಿನ ಭವಿಷ್ಯ: ಇಂದು ಈ ರಾಶಿಯವರು ಉದ್ವಗ್ನತೆಗೆ ಸಿಕ್ಕಿಕೊಳ್ಳುವುದು ಬೇಡ..
Horoscope Today 17 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಸೋಮವಾರದಂದು ಸುವಸ್ತುವಿನ ದಾನ, ಪ್ರೇಮದಲ್ಲಿ ಮುಜುಗರ, ಆಪ್ತರ ಕಣ್ಮರೆ, ಸಂಭ್ರಮದಲ್ಲಿ ಭಾಗಿ, ಬಂಡವಾಳಕ್ಕೆ ಹುಡುಕಾಟ, ಆಹಾರದ ಕೊರತೆ, ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ಇಂದು ನೀವು ಗೃಹನಿರ್ಮಾಣದ ಕಾರ್ಯವನ್ನು ಆರಂಭಿಸುವ ಯೋಚನೆ ಇದ್ದರೆ ಅದನ್ನು ಕೈಬಿಡುವುದು ಒಳ್ಳೆಯದು. ನಿನ್ನ ಕೋರಿಕೆಗಳು ಕೆಲವು ಈಡೇರಬಹುದು. ಸುಮ್ಮನಿರದೇ ಇನ್ನೊಬ್ಬರನ್ನು ಕೆಣಕುವುದನ್ನು ಬಿಡಬೇಕು. ಉದ್ಯೋಗವು ಅನ್ಯರ ಪಿತೂರಿಯಿಂದ ನಾಶವಾಗಬಹುದು. ಸ್ತ್ರೀಯರ ಜೊತೆ ಹೆಚ್ಚು ಹರಟೆ ಹೊಡೆಯುವಿರಿ. ನಿಮ್ಮ ಕೆಲಸಗಳನ್ನು ನೀವೇ ಹೊಗಳುತ್ತ ಆತ್ಮಪ್ರಶಂಸೆ ಮಾಡುಕೊಳ್ಳುವಿರಿ. ಕೆಲವು ಗಂಟೆಗಳ ಪ್ರಯಾಣವಾದರೂ ಅಸಮಾಧಾನದಿಂದಲೇ ಹೋಗುವಿರಿ.
ವೃಷಭ ರಾಶಿ:
ಹೊಸವಸ್ತುಗಳೇ ಆಗಿದ್ದರೂ ಅವುಗಳಿಂದ ನಷ್ಟವನ್ನು ಪಡೆಯುವಿರಿ. ಕೌಟುಂಬಿಕ ಭಿನ್ನಾಭಿಪ್ರಾಯವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಮೇಲೆ ಸದ್ಭಾವ ಬರಲು ಹಣವನ್ನು ಅಥವಾ ಸಮಯವನ್ನು ನೀಡುವಿರಿ. ನಿಮ್ಮ ಸಲಹೆಗಳನ್ನು ಸ್ವೀಕರಿಸದೇ ಇರುವುದು ನಿಮಗೆ ಬೇಸರವಾದೀತು. ಗಲಭೆಯಲ್ಲಿ ನೀವು ಇಂದು ಭಾಗವಹಿಸುವವರಿದ್ದೀರಿ. ಸಂಗಾತಿಗಳು ಮನಸ್ತಾಪಗಳನ್ನು ಸರಿ ಮಾಡಿಕೊಳ್ಳುವರು. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.
ಮಿಥುನ ರಾಶಿ:
ನಿಮ್ಮ ತೀರ್ಮಾನಗಳು ನಿಮಗೆ ಸಂತೃಪ್ತಿಯನ್ನು ಕೊಡಬಹುದು. ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭವಿಷ್ಯವು ನಿಮ್ಮನ್ನು ಅತಿಯಾಗಿ ಕಾಡಬಹುದು. ಹೊಸ ಸಂಬಂಧವನ್ನು ಬೆಳೆಸಲು ನೀವು ಸಜ್ಜಾಗಿರುವಿರಿ. ಸಂಗಾತಿಯ ನಿರ್ಧಾರಗಳನ್ನು ವಿರೋಧಿಸುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ.
ಕರ್ಕಾಟಕ ರಾಶಿ:
ನೀವು ಸ್ನೇಹಿತರ ಜೊತೆ ಹೊಸ ಉದ್ಯಮವನ್ನು ನಡೆಸಲು ಚಿಂತನೆ ನಡೆಸುವಿರಿ. ಅಧ್ಯಾತ್ಮದಲ್ಲಿ ಒಲವು ಇರಲಿದೆ. ಮಕ್ಕಳ ವರ್ತನೆಯನ್ನು ಕಂಡು ಆಶ್ಚರ್ಯಪಡುವಿರಿ. ಪ್ರತಿಷ್ಠೆಯನ್ನು ಇಟ್ಟುಕೊಳ್ಳುವುದು ಸುಲಭವಲ್ಲ. ನಿಮ್ಮ ವ್ಯಾಪಾರವು ಸಂಜೆಯ ಅನಂತರ ಚೆನ್ನಾಗಿ ನಡೆಯಲಿದೆ. ನಿಮ್ಮ ಮಾತಿಗೆ ಎದುರಾಡದಿದ್ದರೆ ನೀವು ಗೆದ್ದಿರೆಂದು ಅರ್ಥವಲ್ಲ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು.
ಸಿಂಹ ರಾಶಿ:
ಆರ್ಥಿಕತೆಯೂ ಅಭಿವೃದ್ಧಿಯತ್ತ ಹೊರಳಬಹುದು. ಅಪರಿಚಿತರು ಪರಿಚಿತರಂತೆ ಕಾಣಬಹುದು. ಇಂದು ಕೆಕಸದ ಒತ್ತಡವಿರಲಿದ್ದು ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಬಹುದು. ನಿಮ್ಮ ಪದೋನ್ನತಿ ಸುಲಭಕ್ಕೆ ಆಗದು. ಯಾವುದನ್ನೂ ನೋಡದೇ ಖರೀದಿಗೆ ಒಪ್ಪಿಗೆ ಕೊಡುವುದು ಬೇಡ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿದೆ. ನಿಮ್ಮ ಮೇಲೆ ನಂಬಿಕೆಯು ಕಡಿಮೆಯಾದೀತು.
ಕನ್ಯಾ ರಾಶಿ:
ನೀವು ಬರಹಗಾರರಾಗಿದ್ದರೆ ನಿಮ್ಮ ಸಾಹಿತ್ಯಕ್ಕೆ ಯಶಸ್ಸು ಬರಬಹುದು. ಕೃಷಿ ಉತ್ಪನ್ನ ಮಾರಾಟಗಾರರು ಹೆಚ್ಚಿನ ಲಾಭವನ್ನು ಗಳಿಸಬಹುದು. ನಿಮ್ಮ ಗುರಿಯನ್ನು ಯಾರಾದರೂ ಅಪರಿಚಿತರು ಅಪಹಾಸ್ಯ ಮಾಡಬಹುದು. ನಿಮ್ಮ ಮಾತುಗಳು ಕೆಲವರಿಗೆ ಬೇಸರವನ್ನು ತರಿಸಬಹುದು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು.
ತುಲಾ ರಾಶಿ:
ನಿಮ್ಮ ಕೆಲಸವು ನಿಮಗೆ ಆತ್ಮಸಂತೋಷವನ್ನು ತರಬಹುದು. ಪಂಡಿತರಿಗೆ ಸಣ್ಣ ಮಟ್ಟದ ಗೌರವ ಪ್ರಾಪ್ತವಾಗಲಿದೆ. ಪಾಲುದಾರಿಕೆಯನ್ನು ನೀವು ಅನುಮಾನದಿಂದ ಕಾಣುವಿರಿ. ನಿಮ್ಮ ತಪ್ಪು ನಿರ್ಧಾರಗಳೇ ನಿಮ್ಮನ್ನು ಕಾಡಬಹುದು. ಚಿತ್ತ ಚಾಂಚಲ್ಯ ನಿಮ್ಮನ್ನು ಒಂದು ಕಡೆಗೆ ಇರಲು ಬಿಡದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರಲಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ.
ವೃಶ್ಚಿಕ ರಾಶಿ:
ನಿಮ್ಮ ಮಾತುಗಳು ವರ್ಷದ ವಾದವನ್ನು ಹುಟ್ಟಿಸುವಂತೆ ಮಾಡಬಹುದು. ಇಂದು ನೀವು ಉದ್ಯೋಗವನ್ನು ಹುಡುಕುವ ಪ್ರಯತ್ನ ಮಾಡಿದರೆ ವ್ಯರ್ಥವಾಗಬಹುದು. ನಿಮ್ಮ ನಂಬಿಕೆಗಳು ಗುಸಿಯಾಗಬಹುದು. ಮನೆತನಕ್ಕೆ ಯೋಗ್ಯವಾದ ದಾನವನ್ನು ಮಾಡುವಿರಿ. ಸೌಂದರ್ಯ ವರ್ಧನೆಯ ಕಡೆ ಗಮನವಿರಲಿದೆ. ಹೂಡಿಕೆಯು ದ್ವಿಗುಣವಾಗಬಹುದು. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು. ಮಾನಸಿಕ ಅಸ್ವಾಸ್ಥ್ಯವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ.
ಧನು ರಾಶಿ:
ಶಿಕ್ಷಣವನ್ನು ನೀವು ಹೊಸ ರೀತಿಯಲ್ಲಿ ಕೊಡಲು ಪ್ರಾರಂಭಿಸಬಹುದು. ಸಂಗಾತಿಯ ಸಲಹೆಯನ್ನು ನೀವು ಸ್ವೀಕರಿಸುವಿರಿ. ಹೊಸ ಉದ್ಯಮವು ಬಹಳ ಸಂತೋಷದಿಂದ ನಡೆಯಲಿದೆ. ಶತ್ರುಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ತೊಂದರೆಯಾಗದಂತೆ ಸರಿ ಮಾಡಿಕೊಳ್ಳಿ. ಅಂದುಕೊಂಡ ಕಾರ್ಯವು ಸ್ವಲ್ಪ ಪೂರ್ಣವಾಯಿತು ಎಂಬ ಸಂತೃಪ್ತಿ ಇರಲಿದೆ. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ಪ್ರಭಾವಿ ವ್ಯಕ್ತಿಗಳ ಜೊತೆ ಸೌಹಾರ್ದದ ಮಾತನಾಡಿ.
ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ
ಮಕರ ರಾಶಿ:
ನಿಮ್ಮ ಬಳಿ ಕೆಲವರು ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ಬರಬಹುದು. ಖರ್ಚಿನ ಮೇಲೆ ನೀವು ಹಿಡಿತ ಸಾಧಿಸಲು ಪ್ರಯತ್ನಿಸುವಿರಿ. ಸ್ವಾರಸ್ಯಕರ ಸಂಗತಿಗಳು ನಿಮಗೆ ಸಹಜದಂತೆ ಆಗಬಹುದು. ಸಣ್ಣ ಅವಕಾಶವನ್ನೇ ದೊಡ್ಡದಾಗಿ ಮಡಿಕೊಳ್ಳುವಿರಿ. ಬೇಡದವರ ಸಹವಾಸದಿಂದ ಹೆಸರು ಹಾಳು. ನಿಮಗೆ ಸಹಾಯಹಸ್ತವನ್ನು ನೀಡುವ ಅವಶ್ಯಕತೆ ಇದೆ. ನಿಮ್ಮ ಅಧಿಕ ಕೋಪದಿಂದ ಸುಂದರ ಕ್ಷಣಗಳು ನಷ್ಟವಾಗಬಹುದು.
ಕುಂಭ ರಾಶಿ:
ಸ್ವೇಚ್ಛಾಚಾರವನ್ನು ಬಿಡುವುದು ಉತ್ತಮ. ಇಂದು ಸೋಲನ್ನು ಒಪ್ಪಿಕೊಳ್ಳಲು ನೀವು ತಯಾರಿರುವುದಿಲ್ಲ. ಸಂಗಾತಿಯನ್ನು ಸಂತೋಷಪಡಿಸಲು ಏನನ್ನಾದರೂ ಮಾಡಲಿದ್ದೀರಿ. ಸ್ನೇಹಿತರ ಸಹವಾಸವು ನಿನಗೆ ಸಾಕೆನಿಸಬಹುದು. ಇನ್ನೊಬ್ಬರ ಸಮಸ್ಯೆಗೆ ನೀವು ಗೋಣು ಕೊಡಬೇಕಾದೀತು. ಕೋಪದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಹೆಚ್ಚಾಗಿರುವುದು. ಅನ್ಯರ ತಪ್ಪಿನಿಂದ ಅಪಘಾತವು ಸಂಭವಿಸಬಹುದು.
ಮೀನ ರಾಶಿ:
ಆಪ್ತರಿಗೂ ನಿಮ್ಮ ಮಾತನ್ನು ಕೇಳುವ ಮನಃಸ್ಥಿತಿಯು ಇರುವುದಿಲ್ಲ. ಎಂತಹ ಎದೆಗಾರಿಕೆ ಇದ್ದರೂ ಒಮ್ಮೆ ಎದೆ ಝಲ್ ಎನ್ನುವ ಸನ್ನಿವೇಶ ಬರುವುದು. ಎಂದಿನಂತೆ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮದಲ್ಲದ ವಿಚಾರವಾದರೂ ನಿಮ್ಮಲ್ಲಿಗೆ ಅದು ಬರಲಿದೆ. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:16, ಯಮಗಂಡ ಕಾಲ 10:50 – 12:24, ಗುಳಿಕ ಕಾಲ 13:57 – 15:31
-ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




