ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?

ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?
ಆದಿತ್ಯ ಧಾರ್ ಜೊತೆ ಹಸೆಮಣೆ ಏರಿದ ಯಾಮಿ ಗೌತಮ್​

Yami Gautam Wedding: ಸೆಲೆಬ್ರಿಟಿಗಳ ಕಾಸ್ಟ್ಯೂಮ್​ ಎಂದರೆ ಅವುಗಳ ದುಬಾರಿ ಬೆಲೆಯ ಕಾರಣಕ್ಕಾಗಿ ಸುದ್ದಿ ಆಗುತ್ತವೆ. ಆದರೆ ಯಾಮಿ ಗೌತಮ್​ ಧರಿಸಿದ ಸೀರೆಯ ಬೆಲೆಯನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ.

Madan Kumar

| Edited By: Rajesh Duggumane

Jun 12, 2021 | 4:39 PM

ಸೆಲೆಬ್ರಿಟಿಗಳ ಮದುವೆ ಸಿಕ್ಕಾಪಟ್ಟೆ ಅದ್ದೂರಿಯಾಗಿ ನಡೆಯುವುದು ಕಾಮನ್​. ಆದರೆ ಈಗ ಎಲ್ಲೆಲ್ಲೂ ಲಾಕ್​ಡೌನ್​ ಇರುವುದರಿಂದ ಹಾಗೂ ಕೊರೊನಾ ವೈರಸ್​ ಹರಡುವ ಭಯದಿಂದ ಎಲ್ಲರೂ ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಯಾಮಿ ಗೌತಮ್​ ಅವರು ಗುಟ್ಟಾಗಿ ಮದುವೆಯಾದರು. ಮದುವೆ ಫೋಟೋ ಬಹಿರಂಗ ಆದ ಬಳಿಕವೇ ಈ ವಿಷಯ ಜಗತ್ತಿಗೆ ಗೊತ್ತಾಯಿತು. ಈ ಶುಭ ಸಮಾರಂಭದಲ್ಲಿ ಅವರು ಧರಿಸಿದ ಸೀರೆ ಈಗ ಟಾಕ್​ ಆಫ್​ ದಿ ಟೌನ್​ ಆಗಿದೆ.

ಬಾಲಿವುಡ್​ನ ಸೂಪರ್​ ಹಿಟ್​ ಸಿನಿಮಾ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಚಿತ್ರದ ನಿರ್ದೇಶಕ ಆದಿತ್ಯ ಧಾರ್​ ಜೊತೆ ಯಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಿತು. ಲಾಕ್​ಡೌನ್​ ಇರುವ ಕಾರಣ ಮದುವೆಗಾಗಿ ಅದ್ದೂರಿಯಾಗಿ ಶಾಪಿಂಗ್​ ಮಾಡಲು ಸಾಧ್ಯವಾಗಿಲ್ಲ. ವೃತ್ತಿಪರ ಮೇಕಪ್​ ಕಲಾವಿದರನ್ನೂ ಕರೆಸದೇ ಸ್ವತಃ ಯಾಮಿ ಗೌತಮ್​ ಅವರೇ ಮೇಕಪ್​ ಮಾಡಿಕೊಂಡರು. ಇದೆಲ್ಲದರ ನಡುವೆ ಯಾಮಿ ಧರಿಸಿದ ಸೀರೆ ಎಲ್ಲರ ಗಮನ ಸೆಳೆಯುತ್ತಿದೆ. ಅದಕ್ಕೆ ವಿಶೇಷ ಕಾರಣ ಕೂಡ ಇದೆ.

ಸೆಲೆಬ್ರಿಟಿಗಳ ಕಾಸ್ಟ್ಯೂಮ್​ ಎಂದರೆ ಅವುಗಳ ದುಬಾರಿ ಬೆಲೆಯ ಕಾರಣಕ್ಕಾಗಿ ಸುದ್ದಿ ಆಗುತ್ತವೆ. ಆದರೆ ಯಾಮಿ ಧರಿಸಿದ ಸೀರೆಯ ಬೆಲೆಯನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ. ಯಾಕೆಂದರೆ ಅದು ಅವರ ತಾಯಿಯ ಸೀರೆ. ಅಚ್ಚರಿ ವಿಚಾರ ಏನೆಂದರೆ, ಅದು 33 ವರ್ಷಗಳಷ್ಟು ಹಳೆಯ ಸೀರೆ! ಅದರೂ ಈ ತಲೆಮಾರಿನ ಫ್ಯಾಷನ್​ಗೆ ಪೈಪೋಟಿ ನೀಡುವ ರೀತಿಯಲ್ಲಿ ಅದನ್ನು ಧರಿಸಿ ಯಾಮಿ ಮಿಂಚಿದ್ದಾರೆ. 33 ವರ್ಷಗಳ ಹಳೆಯ ಸೀರೆ ಎಂಬುದು ಗೊತ್ತಾದ ಬಳಿಕ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.

‘ಕುಟುಂಬದವರ ಆಶೀರ್ವಾದದೊಂದಿಗೆ ನಾವು ಇಂದು (ಜೂ.4) ಮದುವೆ ಆದೆವು. ಕೇವಲ ನಮ್ಮ ಆಪ್ತರ ಸಮ್ಮುಖದಲ್ಲಿ ಖಾಸಗಿಯಾಗಿ ಈ ವಿವಾಹ ಸಮಾರಂಭ ನೆರವೇರಿತು. ಪ್ರೀತಿ-ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಯಾಮಿ ಗೌತಮ್​ ಕೋರಿದ್ದರು.

ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾ ಮೂಲಕ ಯಾಮಿ ಗೌತಮ್​ ಅವರು ಬಣ್ಣದ ಬದುಕು ಆರಂಭಿಸಿದ್ದರು. ಆ ಚಿತ್ರದಲ್ಲಿ ನಟ ಗಣೇಶ್​ಗೆ ಅವರು ಜೋಡಿ ಆಗಿದ್ದರು. ಬಳಿಕ ಅವರು ಪರಭಾಷೆಯಲ್ಲಿ ಮಿಂಚಲು ಆರಂಭಿಸಿದರು. ಈಗ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ‘ಭೂತ್​ ಪೊಲೀಸ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

‘ನಮ್ಮನ್ನು ಕ್ಷಮಿಸಿ’; ಮದುವೆ ಬೆನ್ನಲ್ಲೇ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದ ಪ್ರಣಿತಾ ಮತ್ತು ನಿತಿನ್

Follow us on

Related Stories

Most Read Stories

Click on your DTH Provider to Add TV9 Kannada