ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003

Abdul Karim Telgi | ಕರ್ನಾಟಕ ಸೇರಿದಂತೆ ಭಾರತದ ನಾನಾ ರಾಜ್ಯಗಳಲ್ಲಿನ ರೂ. 20,000 ಕೋಟಿಗೂ ಹೆಚ್ಚಿನ ನಕಲಿ ಛಾಪಾ ಕಾಗದ ಹಗರಣ ರೂವಾರಿ ಅಬ್ದುಲ್ ಕರೀಂ ತೆಲಗಿ ಜೀವನಗಾಥೆ ತೆರೆ ಮೇಲೆ ವೆಬ್ ಸಿರೀಸ್ ರೂಪದಲ್ಲಿ ಬರಲಿದೆ. ಸ್ಕ್ಯಾಮ್ 1992 ನಿರ್ದೇಶಿಸಿದ್ದವರೇ ಇದನ್ನೂ ತೆರೆ ಮೇಲೆ ತರಲಿದ್ದಾರೆ.

ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003
ಸ್ಕ್ಯಾಮ್ 1992 ದೃಶ್ಯಾವಳಿ
Follow us
Srinivas Mata
| Updated By: ಸಾಧು ಶ್ರೀನಾಥ್​

Updated on: Mar 06, 2021 | 2:54 PM

SonyLIV ನಲ್ಲಿ ಪ್ರಸಾರವಾದ ಕ್ರೈ ಡ್ರಾಮಾ ವೆಬ್ ಸಿರೀಸ್ ಸ್ಕ್ಯಾಮ್ 1992- ದ ಹರ್ಷದ್ ಮೆಹ್ತಾ ಸ್ಟೋರಿಯ ಯಶಸ್ಸಿನಿಂದ ಉತ್ತೇಜಿತವಾಗಿರುವ ಆದಿತ್ಯ ಬಿರ್ಲಾ ಮಾಲೀಕತ್ವದ ನಿರ್ಮಾಣ ಸಂಸ್ಥೆಯಾದ ಅಪ್ಲಾಸ್ ಎಂಟರ್​ಟೇನ್​ಮೆಂಟ್ (Applause Entertainment) ಈಗ ಆ ಸರಣಿಯಲ್ಲಿ ಎರಡನೇ ಭಾಗದ ನಿರ್ಮಾಣ ಮಾಡುವ ಘೋಷಣೆ ಮಾಡಿದೆ. ಎರಡನೇ ಸೀಸನ್​ನಲ್ಲಿ 2003ನೇ ಇಸವಿಯಲ್ಲಿ ನಡೆದ ಛಾಪಾ ಕಾಗದ ಹಗರಣದ ಅಬ್ದುಲ್ ಕರೀಂ ತೆಲಗಿ ಕಥೆಯನ್ನು ತೆರೆಯ ಮೇಲೆ ತರಲಾಗುತ್ತದೆ. ಅದಕ್ಕೆ “ಸ್ಕ್ಯಾಮ್ 2003: ದ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಂ ತೆಲಗಿ” ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದೆ.

ಪತ್ರಕರ್ತ ಸಂಜಯ್ ಸಿಂಗ್ ಬರೆದ ರಿಪೋರ್ಟರ್ ಕೀ ಡೈರಿ ಹಿಂದಿ ಪುಸ್ತಕವನ್ನು ಆಧರಿಸಿ ಈಗಿನ ವೆಬ್ ಸಿರೀಸ್ ತೆರೆ ಮೇಲೆ ಬರಲಿದೆ. ಅಂದ ಹಾಗೆ ತೆಲಗಿ ಪ್ರಕರಣವನ್ನು ಮೊದಲಿಗೆ ಜಗತ್ತಿನ ಮುಂದೆ ತಂದ ಶ್ರೇಯ ಸಂಜಯ್ ಅವರಿಗಿದೆ. ಅಂದಹಾಗೆ ತೆಲಗಿ ಸರಣಿಯನ್ನು ಸಹ ಹನ್ಸಲ್ ಮೆಹ್ತಾ ಅವರೇ ತೆರೆ ಮೇಲೆ ತರಲಿದ್ದಾರೆ. ಮೊದಲ ಕಂತಾದ ಹರ್ಷದ್ ಮೆಹ್ತಾ ಕಥೆಯನ್ನು ಅವರೇ ನಿರ್ದೇಶಿಸಿದ್ದರು. ಮರಾಠಿ ಸಿನಿಮಾ ಲೇಖಕ ಕಿರಣ್ ಯದ್ನ್ಯೋಪವಿತ್ ಅವರು ಸಿಂಗ್ ಜತೆಗೂಡಿ ಕಥೆ ವಿಸ್ತರಣೆ ಹಾಗೂ ಬರವಣಿಗೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಅಂದಾಜು 20 ಸಾವಿರ ಕೋಟಿ ರೂಪಾಯಿ ಹಗರಣ: ಕರೀಂ ತೆಲಗಿ ಹುಟ್ಟಿದ್ದು ಕರ್ನಾಟಕದ ಬೆಳಗಾವಿಯಲ್ಲಿರುವ ಖಾನಾಪುರದಲ್ಲಿ. ಹಲವು ರಾಜ್ಯಗಳಿಗೆ ವಿಸ್ತರಿಸಿದ್ದ ಛಾಪಾ ಕಾಗದ ಹಗರಣದ ಮೌಲ್ಯ ಅಂದಾಜು 20 ಸಾವಿರ ಕೋಟಿ ರೂಪಾಯಿಗಳದಾಗಿತ್ತು. ಆ ಹಗರಣದ ಮಾಸ್ಟರ್ ಮೈಂಡ್ ಈ ತೆಲಗಿ ಆಗಿದ್ದ. ಕೆಲ ವರ್ಷದ ಹಿಂದೆ ಆತ ಬಂಧನದಲ್ಲಿ ಇರುವಾಗಲೇ ಅನಾರೋಗ್ಯ ಕಾರಣಕ್ಕೆ ಸಾವನ್ನಪ್ಪಿದ.

“ಸ್ಕ್ಯಾಮ್ 1992 ಮೂಲಕ ಈ ದೇಶ ಕಂಡ ಹಲವು ಹಗರಣಗಳು, ಆ ಹಗರಣಗಳ ಹಿಂದಿರುವವರು, ಅವರ ಉದ್ದೇಶ ಹಾಗೂ ಕಾರ್ಯ ನಿರ್ವಹಣೆ ಬಗ್ಗೆ ತಿಳಿಸಬೇಕು ಎಂಬ ನಮ್ಮ ಗುರಿಗೆ ಗಟ್ಟಿಯಾದ ನೆಲೆ ಸಿಕ್ಕಂತಾಗಿದೆ. ಸ್ಕ್ಯಾಮ್ 1992ರ ಯಶಸ್ಸು ಪ್ರೇಕ್ಷಕರ ಬಗ್ಗೆ ನಮಗಿರುವ ನಂಬಿಕೆಯನ್ನು ದೃಢಪಡಿಸಿದೆ,” ಅಪ್ಲಾಸ್ ಎಂಟರ್​ಟೇನ್​ಮೆಂಟ್ ಸಿಇಒ ಸಮೀರ್ ನಾಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Abdul Karim Telgi

ಅಬ್ದುಲ್ ಕರೀಂ ತೆಲಗಿ

ಸೇಕ್ರೆಡ್ ಗೇಮ್ಸ್, ಮಿರ್ಜಾಪುರ್, ಫೋರ್ ಮೋರ್ ಶಾಟ್ಸ್ ಪ್ಲೀಸ್! ಆರ್ಯ ಹೀಗೆ ಬಹುತೇಕ ಒಟಿಟಿ ಪ್ಲಾಟ್​ಫಾರ್ಮ್​ಗಳು ಹಲವು ಸೀಸನ್​ಗಳಿಗೆ ವಿಸ್ತರಿಸುವ ದೀರ್ಘರೂಪದ ಸರಣಿಗಳ ಮೇಲೆ ಹೂಡಿಕೆ ಮಾಡುತ್ತಿವೆ. ಅಮೆಜಾನ್ ಪ್ರೈಮ್​​ನಿಂದ ಕ್ರೈಮ್ ಥ್ರಿಲ್ಲರ್ ಬ್ರೀಥ್, ಡಿಸ್ನಿ+ ಹಾಟ್ ಸ್ಟಾರ್​ನಲ್ಲಿ ಕ್ರಿಮಿನಲ್ ಜಸ್ಟೀಸ್ ಹೆಸರು ಮಾಡಿದೆ.

ಇದನ್ನೂ ಓದಿ: ನಗರದಲ್ಲಿ ನಕಲಿ ಛಾಪಾ ಕಾಗದ ಹಗರಣ; ರಾಜ್ಯ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ