ತಪ್ಪು ಮಾಡದೆ ಇದ್ರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋದ್ರಿ? ವಿಧಾನಸಭೆ ಕಲಾಪದಲ್ಲಿ ಇದನ್ನ ಪ್ರಶ್ನಿಸುತ್ತೇವೆ: ಸಾ.ರಾ.ಮಹೇಶ್
ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಹಿರಂಗ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಎನ್.ಚಲುವರಾಯಸ್ವಾಮಿ ಈ ಪ್ರಕರಣ ಬಗ್ಗೆ ಸಾಕಷ್ಟು ಗೊಂದಲ ಮೂಡಿಸುತ್ತಿದೆ. ಪ್ರಕರಣದ ಬಗ್ಗೆ ವಿಚಾರಣೆಯಾಗಬೇಕು ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಮಾತನಾಡಿದ್ದಾರೆ.
ಮೈಸೂರು: ಆರು ಸಚಿವರು ಕೋರ್ಟ್ಗೆ ಮೊರೆ ಹೋದ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಯಾರು ಯಾರು ಕೋರ್ಟ್ ಮೊರೆ ಹೋಗಿದ್ದಾರೋ ಅವರನ್ನು ಸಂಪುಟದಿಂದ ವಜಾ ಮಾಡಿ. ಇದನ್ನು ವಿಧಾನಸಭೆ ಕಲಾಪದಲ್ಲಿಯೂ ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ತಪ್ಪು ಮಾಡದೆ ಇದ್ದರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋದ್ರಿ? ಎಂದು ಪ್ರಶ್ನಿಸಿದ ಸಾ.ರಾ.ಮಹೇಶ್ ಸಚಿವರು ಕೋರ್ಟ್ ಮೊರೆ ಹೋಗಿದ್ದು ತಲೆ ತಗ್ಗಿಸುವ ವಿಚಾರ. ಬಾಂಬೆಯಲ್ಲು ಅಷ್ಟು ಟೈಟ್ ಸೆಕ್ಯೂರಿಟಿ ಇಟ್ಟುಕೊಂಡಿದ್ದವರು ಯಾಕೇ ಅರ್ಜಿ ಹಾಕಿದ್ದೀರಿ ? ಇವರನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ? ಸಚಿವರನ್ನೆ ಬ್ಲಾಕ್ ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು? ಎಂದು ಕೇಳಿದ್ದಾರೆ.
ಕೋರ್ಟ್ ಮೊರೆ ಹೋದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸ್ನೇಹಿತರು ಈ ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡಿದ್ದೆ. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೆಯುವುದಾಗಿ ನಮ್ಮ ಸ್ನೇಹಿತರು ಹೇಳಿದ್ದರು. ಆ ಪುಸ್ತಕದಲ್ಲಿ ಇದರ ಬಗ್ಗೆ ಉಲ್ಲೇಖ ಮಾಡಬಹುದು. ಜನಪರ ಸರ್ಕಾರ ತರುವುದಕ್ಕೆ ಬಾಂಬೆಗೆ ಹೋಗಿದ್ದೀವಿ ಎಂದರು. ಬಾಂಬೆಯಲ್ಲಿ ಏನ್ ಮಾಡುತ್ತಿದ್ದರು ಎಂದು ಈಗ ಹೇಳಲಿ. ಮೊನ್ನೆ ಆನೇಕ ಶಾಸಕರ ವಿಡಿಯೋ ಇದೆ ಅಂತ ಹೇಳಿದ್ದರು. ಆ ಹೇಳಿಕೆ ನೀಡಿದವರನ್ನ ತಕ್ಷಣ ಏಕೆ ಅರೆಸ್ಟ್ ಮಾಡಲಿಲ್ಲ. ಈ ಘಟನೆಯಿಂದ ನಮ್ಮ ಕುಟುಂಬದವರೇ ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಬಾಂಬೆಗೆ ಹೋದವರ ಬಗ್ಗೆ ಇನ್ನೂ ಏನೇನು ಇದೆಯೋ? ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.
ನಾಳೆ ಕಲಾಪವಿದೆ, ಈಗ ಅವರೇ ವಿವಾದ ಮಾಡಿಕೊಂಡಿದ್ದಾರೆ ಇನ್ನು ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಹಿರಂಗ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಎನ್.ಚಲುವರಾಯಸ್ವಾಮಿ ಈ ಪ್ರಕರಣ ಬಗ್ಗೆ ಸಾಕಷ್ಟು ಗೊಂದಲ ಮೂಡಿಸುತ್ತಿದೆ. ಪ್ರಕರಣದ ಬಗ್ಗೆ ವಿಚಾರಣೆಯಾಗಬೇಕು ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಮಾತನಾಡಿದ್ದಾರೆ.
ಯಾವ ಕಾರಣಕ್ಕೆ ಆರು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ? ಇದರ ಅವಶ್ಯಕತೆ ಇತ್ತಾ ಎನ್ನುವುದು ನಮಗೂ ಗೊಂದಲವಿದೆ. ಈ ವಿಚಾರ ಇಲಾಖೆದಾ ಅಥವಾ ವೈಯಕ್ತಿಕ ವಿಚಾರನ ಅಂತಾ ಅವರೇ ಸ್ಪಷ್ಟೀಕರಿಸಬೇಕು. ಸ್ಪಷ್ಟೀಕರಣ ನೀಡದೆ ಈ ಬಗ್ಗೆ ತಿಳಿಯದೆ ನಾವು ಮಾತನಾಡುವುದು ಸೂಕ್ತವಲ್ಲ. ಕೋರ್ಟ್ಗೆ ಹೋದವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಹೇಳಿದ ಎನ್.ಚಲುವರಾಯಸ್ವಾಮಿ ಈಗ ಕಲಾಪವಿದೆ. ಅವರೇ ವಿವಾದ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಪಕ್ಷ ಹಾಗೂ ಸರ್ಕಾರದಲ್ಲಿ ಚರ್ಚೆ ಆಗಿದೆ: ಡಾ.ಕೆ.ಸುಧಾಕರ್ ತಿರುಗೇಟು ಪಕ್ಷದ ಪ್ರಮುಖರ ನಿರ್ಧಾರದಂತೆ ನಾವು ಕೋರ್ಟ್ಗೆ ಹೋಗುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕೋರ್ಟ್ ಮೊರೆ ಹೋಗುವುದು ಉತ್ತಮ ಬೆಳವಣಿಗೆಯಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೇಂದ್ರ ಸಚಿವರಿಗೆ ಈ ಬಗ್ಗೆ ಮಾಹಿತಿ ಕೊರತೆ ಇರಬಹುದು ಎಂದು ಹೇಳಿದರು.
ಇದನ್ನೂ ಓದಿ
6 ಸಚಿವರು ಕೋರ್ಟ್ಗೆ ಮೊರೆ: ಅನಾವಶ್ಯಕವಾಗಿ ಕೋರ್ಟ್ಗೆ ಹೋಗುವುದು ಒಳ್ಳೆಯದಲ್ಲ -ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ