ಆ ಆರು ಸಚಿವರಿಗೆ ಕಾಡ್ತಿದೆಯಾ ‘ಮುಂಬೈ ಡೈರೀಸ್’ ನೆನಪು! ದಿನೇಶ್ ಕಲ್ಲಹಳ್ಳಿ ವಿರುದ್ಧ ಕಂಪ್ಲೇಂಟ್ ನೀಡುವಂತೆ ರಮೇಶ್ ಜಾರಕಿಹೊಳಿ ಮೇಲೆ ಒತ್ತಡ
6 ಮಂದಿ ಹಾಲಿ ಸಚಿವರು ಬಿಜೆಪಿ ಸರ್ಕಾರ ರಚನೆ ವೇಳೆ 15 ದಿನಗಳ ಕಾಲ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೆ ಮೂರು ಬಾರಿ, ವಾಸ್ತವ್ಯ ಹೂಡಿದ್ದ ಹೊಟೇಲ್ಗಳನ್ನು ಪದೇ ಪದೇ ಬದಲಾವಣೆ ಮಾಡಿದ್ದರು.
ಬೆಂಗಳೂರು: ತಮ್ಮ ಆಪ್ತ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಹೊರಬರುತ್ತಿದ್ದಂತೆ, ರಮೇಶ್ ಆಪ್ತರಾದ ಆರು ಮಂದಿ ಸಚಿವರು ರಾಜಕೀಯ ಷಡ್ಯಂತ್ರದ ಗುಮಾನಿ ಬಂದ ಕಾರಣದಿಂದಾಗಿ ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಈ ಆರು ಮಂದಿ ಸಚಿವರಿಗೆ ಮುಂಬೈ ಡೈರೀಸ್ ನೆನಪುಗಳ ಆತಂಕ ಕಾಡ್ತಿದೆಯಾ ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿದೆ.
15 ದಿನಗಳ ಕಾಲ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು.. ಈ 6 ಮಂದಿ ಹಾಲಿ ಸಚಿವರು ಬಿಜೆಪಿ ಸರ್ಕಾರ ರಚನೆ ವೇಳೆ 15 ದಿನಗಳ ಕಾಲ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೆ ಮೂರು ಬಾರಿ, ವಾಸ್ತವ್ಯ ಹೂಡಿದ್ದ ಹೊಟೇಲ್ಗಳನ್ನು ಪದೇ ಪದೇ ಬದಲಾವಣೆ ಮಾಡಿದ್ದರು. 17 ಮಂದಿಯ ದೇಖರೇಖಿ ನೋಡಿಕೊಳ್ಳಲು ಮುಂಬೈ ನಾಯಕರನ್ನ ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಹಾಲಿ ಸಚಿವರುಗಳಿಗೆ ಮುಂಬೈನ ಬಿಜೆಪಿ ಪರಿಷತ್ ಸದಸ್ಯರೊಬ್ಬರು ಸಕಲ ವ್ಯವಸ್ಥೆ ಮಾಡಿದ್ದರು. ಬಿಜೆಪಿ ಯುವ ಘಟಕದ ನಾಯಕರಿಂದಲೂ ರೆಸಾರ್ಟ್ ವಾಸ್ತವ್ಯದಲ್ಲಿದ್ದವರಿಗೆ 24 ಗಂಟೆ ಪಹರೆ ಮಾಡಲಾಗಿತ್ತು.
ಈ ವೇಳೆ ಮೂರ್ನಾಲ್ಕು ಬಾರಿ ರೂಂಗಳನ್ನು ಬದಲಾಯಿಸಲಾಗಿತ್ತು. ಅದೇ ಸಂದರ್ಭದಲ್ಲಿ ಎಡವಟ್ಟು ನಡೆದಿರುವ ಬಗ್ಗೆ ಹಾಲಿ ಸಚಿವರಿಗೆ ಆತಂಕ ಶುರುವಾಗಿದೆ. ಅಲ್ಲದೆ ದಿನೇಶ್ ಕಲ್ಲಹಳ್ಳಿ ಬಳಿಯೇ ಎಲ್ಲ ಸಚಿವರ ಬಗ್ಗೆಯೂ ಕೆಲವೊಂದು ಖಾಸಗಿ ಮಾಹಿತಿ ಇರುವ ಆತಂಕ ಸಚಿವರಿಗೆ ಶುರುವಾಗಿದೆ. ಹೀಗಾಗಿ ದಿನೇಶ್ ಕಲ್ಲಹಳ್ಳಿ ವಿರುದ್ದವೇ ದೂರು ನೀಡುವಂತೆಯೂ ಮಿತ್ರ ಮಂಡಳಿ ಸಚಿವರಿಂದ ಜಾರಕಿಹೊಳಿಗೆ ಒತ್ತಡ ಹಾಕಲಾಗುತ್ತಿದೆ.
ಸಿಡಿ ಸ್ಫೋಟಿಸಿದ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಂಪ್ಲೇಂಟ್ ನೀಡುವಂತೆ ಒತ್ತಡ ಸಿಡಿ ಸ್ಫೋಟಿಸಿದ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಂಪ್ಲೇಂಟ್ ನೀಡುವಂತೆ ರಮೇಶ್ ಜಾರಕಿಹೊಳಿ ಮೇಲೆ ಮುಂಬೈ ಮಿತ್ರ ಮಂಡಳಿಯಿಂದ ಭಾರಿ ಒತ್ತಡ ಹಾಕಲಾಗುತ್ತಿದೆಯಂತೆ. ಸಿಡಿ ಸ್ಫೋಟಿಸಿ ಖಾಸಗಿತನ ಖುಲ್ಲಂ ಖುಲ್ಲಾ ಮಾಡಿದ್ದಕ್ಕೆ ದೂರು ಕೊಡಿ, ಇದರಿಂದ ಪೊಲೀಸ್ ತನಿಖೆಯಲ್ಲಿ ಷಡ್ಯಂತ್ರ ಬಯಲಾಗುತ್ತೆ. ಈಗ ನೀವು..! ಮುಂದಕ್ಕೆ ಇನ್ನಷ್ಟು ಸಚಿವರ ಮೇಲೂ ಷಡ್ಯಂತ್ರ ಮಾಡಬಹುದು. ಹೀಗಾಗಿ ಅಜ್ಞಾತ ಸ್ಥಳದಲ್ಲಿರುವ ರಮೇಶ್ ಜಾರಕಿಹೊಳಿಗೆ ಮುಂಬೈ ಮಿತ್ರಮಂಡಳಿ ನಾಯಕರು ದೂರು ನೀಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.