ನಗರದಲ್ಲಿ ನಕಲಿ ಛಾಪಾ ಕಾಗದ ಹಗರಣ; ರಾಜ್ಯ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ

ಪೃಥ್ವಿಶಂಕರ

| Edited By: ಸಾಧು ಶ್ರೀನಾಥ್​

Updated on: Jan 06, 2021 | 11:28 AM

ಕಂಡವರ ಆಸ್ತಿ ಹೊಡೆಯಲು ನಕಲಿ ಫ್ರಾಂಕಿಂಗ್ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಈ ಅಕ್ರಮ ಕೂಟದ ಬಗ್ಗೆ ತನಿಖೆ ನಡೆಸುವಂತೆ ಐಜಿಆರ್‌ಗೆ ಎಂ.ಮಂಜುಳ ಎಂಬುವವರು ದೂರು ಸಲ್ಲಿಸಿದ್ದರು. ದೂರಿನನ್ವಯ ಐಜಿಆರ್ ನಿರ್ದೇಶನದ ಮೇರೆಗೆ ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿ ತನಿಖೆ ನಡೆಸಿದ್ದರು.

ನಗರದಲ್ಲಿ ನಕಲಿ ಛಾಪಾ ಕಾಗದ ಹಗರಣ; ರಾಜ್ಯ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ

ಬೆಂಗಳೂರು: ನಕಲಿ ಛಾಪಾ ಕಾಗದ, ಉಬ್ಬಚ್ಚು ಯಂತ್ರ ಹಾಗೂ ಉಪ ನೋಂದಣಾಧಿಕಾರಿಗಳ ಮುದ್ರೆ ಬಳಸಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಂಡವರ ಆಸ್ತಿ ಹೊಡೆಯಲು ನಕಲಿ ಫ್ರಾಂಕಿಂಗ್ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಈ ಅಕ್ರಮ ಕೂಟದ ಬಗ್ಗೆ ತನಿಖೆ ನಡೆಸುವಂತೆ ಐಜಿಆರ್‌ಗೆ ಎಂ.ಮಂಜುಳ ಎಂಬುವವರು ದೂರು ಸಲ್ಲಿಸಿದ್ದರು. ದೂರಿನನ್ವಯ ಐಜಿಆರ್ ನಿರ್ದೇಶನದ ಮೇರೆಗೆ ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿ ತನಿಖೆ ನಡೆಸಿದ್ದರು. ತನಿಖೆ‌ಯಲ್ಲಿ ನಕಲಿ ಫ್ರಾಂಕಿಂಗ್ ಹಗರಣ ನಡೆದಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಮಂಜುಳಾ‌ ಎಂಬುವವರ ಆಸ್ತಿಯನ್ನ ಡಿ.ಎ ಶ್ರೀನಿವಾಸ್, ಪ್ರದೀಪ್ ಪಡಗಾಲ, ಎ ಸಿ ನಾಗರಾಜ್ ಎಂಬುವವರು ನಕಲಿ ಛಾಪಾ ಕಾಗದ ಬಳಕೆ ಮಾಡಿ ಆಸ್ತಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಮಂಜುಳಾ‌ ಎಂಬುವವರು ಐಜಿಆರ್‌ಗೆ ದೂರು ನೀಡಿದ್ದರು. ಈ ಬಗೆ ತನಿಖೆ ನಡೆಸಿ ವರದಿ ನೀಡಿರುವ ಅಧಿಕಾರಿಗಳು ವಂಚನೆ ನಡೆದಿರುವುದು ಸತ್ಯ ಎಂದು ವರದಿ ನೀಡಿದ್ದಾರೆ.

ಫ್ರಾಂಕಿಂಗ್ ಯಂತ್ರದಿಂದ ಮುದ್ರಿತವಾಗುವ ಪತ್ರಗಳಲ್ಲಿ ಆಯಾ ದಿನ ಉಬ್ಬಚ್ಚು ಮಾಡಿರುವ ಬಗ್ಗೆ ಕ್ರಮ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ನಿರ್ದಿಷ್ಟ ಪುಸ್ತಕದಲ್ಲಿ ಉಬ್ಬಚ್ಚು ಪತ್ರದ ಕ್ರಮ ಸಂಖ್ಯೆ, ಮೊಬಲಗು, ದಿನಾಂಕವನ್ನು ದಾಖಲು ಮಾಡಲಾಗುತ್ತದೆ. ಪರಿಶೀಲನೆಗೆ ಸಲ್ಲಿಸಲಾಗಿರುವ ಉಬ್ಬಚ್ಚು ಪತ್ರ ಹಾಗೂ ಛಾಪಾ ಕಾಗದಗಳನ್ನು ಪರಿಶೀಲಿಸಿದಾಗ ಗಾಂಧಿ ನಗರದ ಉಪನೋಂದಣಾಧಿಕಾರಿ (ಪಿಬಿ 6924) ಮುದ್ರಾಂಕ ಉಬ್ಬಚ್ಚು ಯಂತ್ರದಲ್ಲಿ ಮುದ್ರಿತಗೊಂಡಿದೆ ಎಂದು ಅದರ ಮೇಲೆ ಉಲ್ಲೇಖವಿದೆ.

ಛಾಪಾ ಕಾಗದ ನಕಲಿ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಯಲಹಂಕ, ಕೆಂಗೇರಿ, ಶಿವಾಜಿನಗರದ ಮೊಹರು ಹಾಗೂ ಉಪನೋಂದಣಾಧಿಕಾರಿ ಸಹಿ ಇದೆ. ಈ ಎಲ್ಲ ಪತ್ರಗಳು ನಕಲಿಯಾಗಿರುತ್ತವೆ ಎಂದು ಹಿಂಬರಹ ನೀಡಲಾಗಿದೆ. ಹೀಗಾಗಿ ಪಿಬಿ 6924 ಉಲ್ಲೇಖಿತ ಛಾಪಾ ಕಾಗದ ನಕಲಿ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಅಲ್ಲದೆ ಡಿ. ಎ ಶ್ರೀನಿವಾಸ್ ಹಾಗೂ ಇತರರು ನಕಲಿ ಛಾಪಾ ಕಾಗದ ಸೃಷ್ಟಿಸಿರೋದು ದೃಢವಾಗಿದೆ.

ಬೆಂಗಳೂರಿನಲ್ಲಿ ಪ್ರಮುಖವಾಗಿ ಆಸ್ತಿ ನೋಂದಣಿಯಾಗುವ ಕಚೇರಿಗಳು ಫ್ರಾಂಕಿಂಗ್‌ ಯಂತ್ರ ಬಳಸಿ ಕ್ರಯಪತ್ರ, ಕರಾರು ಪತ್ರ, ತಕರಾರು ದಾವೆಗೆ ದಾಖಲು ಪತ್ರ, ಉಯಿಲು, ಜಿಪಿಎ, ಆಸ್ತಿ ಪರಭಾರೆ ಒಪ್ಪಂದ ಪತ್ರಗಳನ್ನು ನಕಲಿಯಾಗಿ ಸೃಷ್ಟಿ ಮಾಡಲಾಗುತ್ತಿದೆ. ಇದನ್ನು ಬಳಸಿಕೊಂಡು ಬಡವರು, ಮಧ್ಯಮವರ್ಗದವರ ಆಸ್ತಿಯನ್ನು ಕಬಳಿಸಲಾಗುತ್ತಿದೆ. ಆಸ್ತಿ ತಮ್ಮ ಹೆಸರಿಗೆ ಮಾಡಿಕೊಟ್ಟಿದ್ದಾರೆ ಎಂದು ನಾಲ್ಕೈದು ವರ್ಷಗಳ ಹಿಂದಿನ ದಾಖಲೆ ಸೃಷ್ಟಿಸಿ, ಹೆದರಿಸುವ ಕೆಲಸವೂ ನಡೆಯುತ್ತಿದೆ. ಸಧ್ಯ ಮಂಜುಳಾ ಕೇಸ್​ನಲ್ಲಿ ನಕಲಿ‌ ಛಾಪಾ ಕಾಗಾದ ಬಳಕೆಯಾಗಿರುವುದು ಪತ್ತೆಯಾಗಿದ್ದು, ರಾಜಸ್ವಕ್ಕೆ ನಷ್ಟವಾಗಿರುವ ಬಗ್ಗೆ ಐಜಿಆರ್ Inspector General of Registration, Stamps and Registration Department, Government of Karnataka ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಐಜಿಪಿ ರೂಪಾ ಮುಂದೆ ಹೊಸ ಸವಾಲು: ಕರಕುಶಲ ನಿಗಮದ ಲೂಟಿಕೋರನ ಹಿಡಿಯುವುದು..ಯಾರು ಅವರು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada