ಹೆಚ್ಚಾಯ್ತು ಹಕ್ಕಿಜ್ವರ ಆತಂಕ.. ಮೈಸೂರು-ಕೇರಳ ಗಡಿಯಲ್ಲಿ DC ಸಿಂಧೂರಿಯಿಂದ ಕಟ್ಟೆಚ್ಚರದ ಆದೇಶ
ಮೈಸೂರು-ಕೇರಳ ಗಡಿಯಲ್ಲಿ ಕೋಳಿ, ಪಕ್ಷಿಗಳ ಸಾಗಾಟವನ್ನು ನಿಷೇಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಹಾಗೂ H.D.ಕೋಟೆಯ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಕೇರಳದಿಂದ ಬರುವ ಪ್ರತಿ ವಾಹನವನ್ನು ರೋಹಿಣಿ ಸಿಂಧೂರಿ ಪರಿಶೀಲನೆ ನಡೆಸಿ, ಸ್ಯಾನಿಟೈಸ್ ಮಾಡುತ್ತಿದ್ದಾರೆ.
ಮೈಸೂರು: ಮಹಾಮಾರಿ ಕೊರೊನಾ ನಡುವೆ ಈಗ ಹಕ್ಕಿಜ್ವರದ ಆತಂಕ ಹೆಚ್ಚಾಗಿದೆ. ಕೇರಳ ರಾಜ್ಯದಲ್ಲಿಯೂ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಕ್ಕಿಜ್ವರ ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಘೋಷಿಸಿದೆ. ರೋಗ ಹರಡುವಿಕೆಯನ್ನು ತಡೆಗಟ್ಟಲು 12,000ಕ್ಕೂ ಹೆಚ್ಚು ಪಕ್ಷಿಗಳನ್ನು ಆ ರಾಜ್ಯದಲ್ಲಿ ನಾಶಪಡಿಸಲಾಗಿದೆ.
ಅಂತೆಯೇ, ಮೈಸೂರಿನಲ್ಲಿ ಹಕ್ಕಿಜ್ವರ ಭೀತಿ ಆತಂಕ ಮನೆ ಮಾಡಿದ್ದು ಮೈಸೂರು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಕಳೆದ ಮಾರ್ಚ್‌ನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಇದೀಗ, ಮತ್ತೆ ಹಕ್ಕಿಜ್ವರದಿಂದ ಮೃಗಾಲಯದ ಕಡೆ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ.
ಮೈಸೂರು-ಕೇರಳ ಗಡಿಯಲ್ಲಿ ಕೋಳಿ, ಪಕ್ಷಿಗಳ ಸಾಗಾಟವನ್ನು ನಿಷೇಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಹಾಗೂ H.D.ಕೋಟೆಯ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಕೇರಳದಿಂದ ಬರುವ ಪ್ರತಿ ವಾಹನವನ್ನು ರೋಹಿಣಿ ಸಿಂಧೂರಿ ಪರಿಶೀಲನೆ ನಡೆಸಿ, ಸ್ಯಾನಿಟೈಸ್ ಮಾಡುತ್ತಿದ್ದಾರೆ. ಮೈಸೂರಿನ ಕೋಳಿ ಫಾರಂ, ನಾಟಿಕೋಳಿ, ವಲಸೆ ಪಕ್ಷಿ ಸೇರಿ ಯಾವುದೇ ಪಕ್ಷಿಗಳ ಸಾವು ಕಂಡರೆ ಮಾಹಿತಿ ನೀಡುವಂತೆ ಡಿಸಿ ಮನವಿ ಮಾಡಿಕೊಂಡಿದ್ದಾರೆ.
ಹಕ್ಕಿಜ್ವರದ ಪ್ರತಿನಿತ್ಯದ ಮಾಹಿತಿ ಪಡೆಯಲು ಕಂಟ್ರೋಲ್ ರೂಂ ಹಕ್ಕಿಜ್ವರ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಹಕ್ಕಿಜ್ವರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಕ್ಕಿಜ್ವರದ ಪ್ರತಿನಿತ್ಯದ ಮಾಹಿತಿ ಪಡೆಯಲು ನವದೆಹಲಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲಪ್ರದೇಶ, ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ಕಂಟ್ರೋಲ್ ರೂಂ ಆರಂಭಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಗೆಗಳ ನಿಗೂಢ ಸಾವು.. ಹಕ್ಕಿಜ್ವರ ಸಾಧ್ಯತೆ?
Published On - 10:21 am, Wed, 6 January 21