AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಟಿ ಫಾತಿಮಾಗಾಗಿ ಆಮಿರ್​ ವಿಚ್ಛೇದನ ಪಡೆದರು’; ಮತ್ತೆ ಚರ್ಚೆ ಆಗುತ್ತಿದೆ ಹಳೆಯ ವದಂತಿ

2016ರಲ್ಲಿ ತೆರೆಗೆ ಬಂದ ‘ದಂಗಲ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ನಿತೇಶ್​ ತಿವಾರಿ ನಿರ್ದೇಶನದ ಈ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಚಿತ್ರದಲ್ಲಿ ಫಾತಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು

‘ನಟಿ ಫಾತಿಮಾಗಾಗಿ ಆಮಿರ್​ ವಿಚ್ಛೇದನ ಪಡೆದರು’; ಮತ್ತೆ ಚರ್ಚೆ ಆಗುತ್ತಿದೆ ಹಳೆಯ ವದಂತಿ
ಆಮಿರ್​ ಖಾನ್​-ಫಾತಿಮಾ
TV9 Web
| Edited By: |

Updated on: Jul 03, 2021 | 6:18 PM

Share

ನಟ ಆಮಿರ್​ ಖಾನ್​ ಹಾಗೂ ನಿರ್ಮಾಪಕಿ ಕಿರಣ್​ ರಾವ್​ ಬೇರೆ ಆಗುತ್ತಿರುವುದಾಗಿ ಇಂದು ಘೋಷಣೆ ಮಾಡಿದ್ದಾರೆ. 15 ವರ್ಷಗಳ ದಾಂಪತ್ಯಕ್ಕೆ ದಂಪತಿ ಕೊನೆ ಹಾಡುತ್ತಿರುವ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇಬ್ಬರೂ ವಿಚ್ಛೇದನ ಪಡೆಯುತ್ತಿರುವ ಬೆನ್ನಲ್ಲೇ ಫಾತಿಮಾ ಸೈನಾ ಷೇಖ್​ ಹೆಸರು ಮುನ್ನೆಲೆಗೆ ಬಂದಿದೆ. ಫಾತಿಮಾಗಾಗಿಯೇ ಆಮಿರ್​ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

2016ರಲ್ಲಿ ತೆರೆಗೆ ಬಂದ ‘ದಂಗಲ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ನಿತೇಶ್​ ತಿವಾರಿ ನಿರ್ದೇಶನದ ಈ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಚಿತ್ರದಲ್ಲಿ ಫಾತಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ದಂಗಲ್’​ ನಂತರ ಆಮಿರ್ ನಟನೆಯ ‘ಥಗ್ಸ್​ ಆಫ್​ ಹಿಂದುಸ್ತಾನ್​’ ಸಿನಿಮಾದಲ್ಲೂ ಫಾತಿಮಾ ನಟಿಸಿದರು. ಇದಾದ ಬೆನ್ನಲ್ಲೇ ಅನೇಕರು ಇಬ್ಬರ ನಡುವೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳೋಕೆ ಆರಂಭಿಸಿದರು.

‘ಆಮಿರ್​-ಫಾತಿಮಾ ರೊಮ್ಯಾನ್ಸ್​ ಮಾಡುತ್ತಿದ್ದಾರೆ. ಇದರಿಂದ ಕಿರಣ್​ ಅಪ್ಸೆಟ್​ ಆಗಿದ್ದಾರೆ’ ಎಂದು ವರದಿಗಳು ಬಿತ್ತರಗೊಂಡವು. ಇದು ಫಾತಿಮಾಗೆ ಬೇಸರ ತರಿಸಿತ್ತು. ಹೀಗಾಗಿ, ಖುದ್ದು ಅವರೇ ಈ ಬಗ್ಗೆ ಮೌನ ಮುರಿದರು. ‘ನಾನು ಭೇಟಿ ಮಾಡದೇ ಇರುವ ವ್ಯಕ್ತಿಗಳು ನನ್ನ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. ಇದರಲ್ಲಿ ಸತ್ಯ ಇದೆಯೇ ಅಥವಾ ಇಲ್ಲವೇ ಎಂಬುದು ಅವರಿಗೂ ಕೂಡ ಗೊತ್ತಿಲ್ಲ. ಜನರು ಇದನ್ನು ಓದಿ ನಾನು ಒಳ್ಳೆಯ ವ್ಯಕ್ತಿ ಅಲ್ಲ ಎಂದು ನಿರ್ಧರಿಸುತ್ತಾರೆ. ನಾನು ಇದನ್ನು ನಿರ್ಲಕ್ಷಿಸೋಕೆ ಪ್ರಯತ್ನಿಸಿದೆ. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ’ ಎಂದು ಫಾತಿಮಾ ಹೇಳಿದ್ದರು.

ಬಾಲಿವುಡ್​ ನಟ ಆಮಿರ್​ ಖಾನ್​ ಇಂದು ವಿಚ್ಛೇದನ ಘೋಷಣೆ ಮಾಡಿದ್ದಾರೆ. 10 ವರ್ಷದ ಪುತ್ರ ಆಜಾದ್​ ರಾವ್​ ಖಾನ್​ನ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಈ ಸುದ್ದಿ ಹೊರಬಿದ್ದ ನಂತರ ಫಾತಿಮಾ ವಿಚಾರ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ.

ಇದನ್ನೂ ಓದಿ: ಆಮಿರ್​​ ಖಾನ್​ ಸಂಬಂಧಿ ಇಮ್ರಾನ್​ ಖಾನ್​ ಮೂರು ಮತ್ತೊಂದು ಸಿನಿಮಾ ಮಾಡಿ ನಟನೆಗೆ ಗುಡ್​ಬೈ ಹೇಳಿದ್ದು ಯಾಕೆ?

Aamir Khan: ಆಮಿರ್​​ ಖಾನ್​-ಕಿರಣ್​ ರಾವ್​ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ