ಕಿರಣ್ ಜತೆ ಆಮಿರ್ ಮದುವೆ ಆಗೋ ಬಗ್ಗೆ 15 ವರ್ಷಗಳ ಹಿಂದೆಯೇ ಅಸಮಾಧಾನ ಹೊರ ಹಾಕಿದ್ದರು ಈ ನಟಿ

ತಮ್ಮ ವಿಚಿತ್ರ ಹೇಳಿಕೆ ಮೂಲಕ ರಾಖಿ ಯಾವಾಗಲೂ ಸುದ್ದಿಯಾಗುತ್ತಿರುತ್ತಾರೆ. ಅವರು ವಿವಾದಿತ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ. ಈಗ ಆಮಿರ್​-ಕಿರಣ್​ ವಿಚ್ಛೇದನ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಕಿರಣ್ ಜತೆ ಆಮಿರ್ ಮದುವೆ ಆಗೋ ಬಗ್ಗೆ 15 ವರ್ಷಗಳ ಹಿಂದೆಯೇ ಅಸಮಾಧಾನ ಹೊರ ಹಾಕಿದ್ದರು ಈ ನಟಿ
‘ವಿಚ್ಛೇದನವನ್ನು ಸಂಭ್ರಮಿಸಬೇಕು’; ಆಮಿರ್​-ಕಿರಣ್​ಗೆ ಕಿವಿಮಾತು ಹೇಳಿದ ಖ್ಯಾತ ನಿರ್ದೇಶಕ
TV9kannada Web Team

| Edited By: Rajesh Duggumane

Jul 03, 2021 | 7:46 PM

ಆಮಿರ್ ಖಾನ್​ ಹಾಗೂ ಕಿರಣ್​ ರಾವ್​ ತಮ್ಮ ದಾಂಪತ್ಯವನ್ನು ಕೊನೆಗೊಳಿಸಿಕೊಂಡಿದ್ದಾರೆ. 15 ವರ್ಷಗಳ ಇವರ ಸಂಬಂಧ ಮುರಿದು ಬೀಳೋಕೆ ಕಾರಣ ಏನು ಎಂಬುದನ್ನು ಯಾರೊಬ್ಬರೂ ಹೇಳಿಕೊಂಡಿಲ್ಲ. ಈ ಮಧ್ಯೆ, ಹಿಂದಿ ಬಿಗ್​ ಬಾಸ್​ ಸೀಸನ್​ 14ರ ಸ್ಪರ್ಧಿ ಹಾಗೂ ವಿವಾದಿತ ನಟಿ ರಾಖಿ ಸಾವಂತ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ತಮ್ಮ ವಿಚಿತ್ರ ಹೇಳಿಕೆ ಮೂಲಕ ರಾಖಿ ಯಾವಾಗಲೂ ಸುದ್ದಿಯಾಗುತ್ತಿರುತ್ತಾರೆ. ಅವರು ವಿವಾದಿತ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ. ಈಗ ಆಮಿರ್​-ಕಿರಣ್​ ವಿಚ್ಛೇದನ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಕಿರಣ್​ ಅವರನ್ನು ಮದುವೆ ಆಗೋದು ಇಷ್ಟವಿಲ್ಲ ಎಂದು ಆಮಿರ್​ಗೆ ರಾಖಿ ಆಗಲೇ ಹೇಳಿದ್ದರಂತೆ.

‘15 ವರ್ಷಗಳ ಹಿಂದೆ ನಾನು ಆಮಿರ್​ ಖಾನ್ ಅವರ ಸಂದರ್ಶನ ಮಾಡಿದ್ದೆ. ಈ ಸಂದರ್ಶನದಲ್ಲಿ, ನಿಮ್ಮ ಪತ್ನಿಯನ್ನು ಬಿಟ್ಟು ಕಿರಣ್​ ಅವರನ್ನು ಮದುವೆ ಆಗೋದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ. ಇದನ್ನು ಆಮಿರ್​ ಗಂಭೀರವಾಗಿ ಸ್ವೀಕರಿಸಿದರಾ? ಆಮಿರ್​ ಅವರೇ ನಾನಿನ್ನೂ ಕುಮಾರಿ. ನನ್ನ ಬಗ್ಗೆ ಅವರು​ ಏನು ಯೋಚಿಸುತ್ತಾರೇನೋ ಎಂದಿರುವ ರಾಖಿ, ಆಮಿರ್​-ಕಿರಣ್​ ಬೇರೆ ಆಗುತ್ತಿರುವುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ಹೊರ ಹಾಕಿದ್ದಾರೆ.

ಬಾಲಿವುಡ್​ ನಟ ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​ ವಿಚ್ಛೇದನ ಪಡೆದುಕೊಂಡಿದ್ದಾರೆ. 15 ವರ್ಷಗಳ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ. ‘ಈ 15 ವರ್ಷಗಳ ಜೀವನವನ್ನು ನಾವು ಖುಷಿ ಮತ್ತು ಸಂತೋಷದಿಂದ ಕಳೆದಿದ್ದೇವೆ. ನಂಬಿಕೆ, ಪ್ರೀತಿ ಮತ್ತು ಗೌರವದಿಂದ ನಮ್ಮ ಸಂಬಂಧ ಬೆಳೆದಿತ್ತು. ಈಗ ನಾವು ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ಇನ್ಮುಂದೆ ನಾವು ಪತಿ-ಪತ್ನಿ ಅಲ್ಲ. ಆದರೆ ಅಜಾದ್​ನ ಪಾಲಕರಾಗಿ, ಆ ಮೂಲಕ ಕುಟುಂಬದವರಾಗಿ ಇರುತ್ತೇವೆ. ಬೇರೆಯಾಗುವ ಬಗ್ಗೆ ಕೆಲವು ಸಮಯದ ಹಿಂದೆಯೇ ಯೋಚಿಸಿದ್ದೆವು. ಮಗನನ್ನು ಜೊತೆಯಾಗಿ ಬೆಳೆಸುತ್ತೇವೆ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Aamir Khan: ಆಮಿರ್​​ ಖಾನ್​-ಕಿರಣ್​ ರಾವ್​ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ

‘ನಟಿ ಫಾತಿಮಾಗಾಗಿ ಆಮಿರ್​ ವಿಚ್ಛೇದನ ಪಡೆದರು’; ಮತ್ತೆ ಚರ್ಚೆ ಆಗುತ್ತಿದೆ ಹಳೆಯ ವದಂತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada