‘ಪತ್ರವಳ್ಳಿ ಪದಕ್ಕೆ ನೀವು ಹೇಳಿದ ಅರ್ಥ ಯಾವ ಡಿಕ್ಷನರಿಯಲ್ಲೂ ಸಿಕ್ಕಿಲ್ಲ’; ಚಕ್ರವರ್ತಿಗೆ ಸುದೀಪ್​ ತಿರುಗೇಟು

ವಾರದ ಪಂಚಾಯ್ತಿಯಲ್ಲಿ ಸುದೀಪ್​ ಈ ಬಗ್ಗೆ ತಿರುಗೇಟು ನೀಡಿದ್ದಾರೆ. ಕರ್ನಾಕದ ಬೇರೆಬೇರೆ ಭಾಷೆಯಲ್ಲಿ ಪತ್ರವಳ್ಳಿ ಶಬ್ದದ ಬಳಕೆ ಇದೆ ಎಂದು ನೀವು ಹೇಳಿದಿರಿ. ಆದರೆ, ಯಾವ ಡಿಕ್ಷನರಿಯಲ್ಲೂ ಆ ಪದದ ಅರ್ಥ ನಮಗೆ ಸಿಕ್ಕಿಲ್ಲ’ ಎಂದಿದ್ದಾರೆ ಸುದೀಪ್​.

‘ಪತ್ರವಳ್ಳಿ ಪದಕ್ಕೆ ನೀವು ಹೇಳಿದ ಅರ್ಥ ಯಾವ ಡಿಕ್ಷನರಿಯಲ್ಲೂ ಸಿಕ್ಕಿಲ್ಲ’; ಚಕ್ರವರ್ತಿಗೆ ಸುದೀಪ್​ ತಿರುಗೇಟು
ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು
Follow us
| Updated By: Digi Tech Desk

Updated on:Jul 06, 2021 | 7:41 PM

ಕಳೆದ ವಾರ ನಡೆದ ಬಿಗ್​ ಬಾಸ್​ ಪಂಚಾಯ್ತಿಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಏರುಧ್ವನಿಯಲ್ಲಿ ಮಾತನಾಡಿದ್ದರು. ಈ ವೇಳೆ ಚಕ್ರವರ್ತಿ ಕೆಲವು ವಿಚಾರಗಳನ್ನು ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್​ ಈ ವಾರದ ಪಂಚಾಯ್ತಿ ಕಟ್ಟೆಯಲ್ಲಿ ಮಾತನಾಡಿದ್ದಾರೆ. ಅವರು ಬಳಕೆ ಮಾಡಿದ ಶಬ್ದದ ಬಗ್ಗೆ ಸುದೀಪ್ ಹೇಳಿದ್ದಾರೆ.

‘ಬಿಗ್​ ಬಾಸ್​ ಮನೆಯಲ್ಲಿ ಮಂಜು ಪತ್ರವಳ್ಳಿ ಶಬ್ದ ಬಳಕೆ ಮಾಡಿದ್ದಾರೆ. ಪತ್ರವಳ್ಳಿ ಅಂತ ಪದಬಳಸೋದು ನನ್ನ ತಂದೆ-ತಾಯಿ ನನಗೆ ಹೇಳಿಕೊಟ್ಟಿಲ್ಲ. ಪತ್ರವಳ್ಳಿ ಎಂದರೆ ಬೇಲಿ ಸಂದಿಯಲ್ಲಿ ನಡೆಯುವಂತಹ ಕಾಮ ಅಂತ ಅರ್ಥ. ಇದು ನಾನು ಹುಟ್ಟುಹಾಕಿದ ಪದ ಅಲ್ಲ. ಬಿಗ್​ ಬಾಸ್​ ಮನೆಯಲ್ಲಿ ಮಂಜು ಕರೆಯುತ್ತಿರುವುದು’ ಎಂದು ಚಕ್ರವರ್ತಿ ಕೂಗಾಡಿದ್ದರು. ಇದೊಂದು ವಿಚಾರ ಇಡೀ ಮನೆಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು.

ವಾರದ ಪಂಚಾಯ್ತಿಯಲ್ಲಿ ಸುದೀಪ್​ ಈ ಬಗ್ಗೆ ತಿರುಗೇಟು ನೀಡಿದ್ದಾರೆ. ‘ಕರ್ನಾಟಕದ ಬೇರೆಬೇರೆ ಭಾಷೆಯಲ್ಲಿ ಪತ್ರವಳ್ಳಿ ಶಬ್ದದ ಬಳಕೆ ಇದೆ ಎಂದು ನೀವು ಹೇಳಿದಿರಿ. ಆದರೆ, ಯಾವ ಡಿಕ್ಷನರಿಯಲ್ಲೂ ಆ ಪದದ ಅರ್ಥ ನಮಗೆ ಸಿಕ್ಕಿಲ್ಲ. ಮೈಸೂರು ವಿಶ್ವವಿದ್ಯಾಲಯದವರ ಅರ್ಥಕೋಶ ನೋಡಿದ್ರೂ ಈ ಪದ ಸಿಕ್ಕಿಲ್ಲ. ಸ್ಪಷ್ಟತೆ ಇಲ್ಲದೆ ಈ ಮಾತು ಆಡಿದ್ದಕ್ಕೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ’ ಎಂದಿದ್ದಾರೆ ಸುದೀಪ್​.

ಇದಕ್ಕೆ ಚಕ್ರವರ್ತಿ ಸಮರ್ಥನೆ ಕೊಡೋಕೆ ಹೋಗಿದ್ದಾರೆ. ‘ಡಿಕ್ಷನರಿಯಲ್ಲಿ ಇಲ್ಲ. ಹಳ್ಳಿ ಭಾಷೆಯಲ್ಲೂ ಇರಲಿಲ್ಲ. ಇದರ ಅರ್ಥ ತುಂಬಾ ಕೆಟ್ಟದಾಗಿತ್ತು. ಹೀಗಿರುವಾಗ, ಅದರ ಬಳಕೆಯ ಅವಶ್ಯಕತೆ ಏನಿತ್ತು? ಇದರಲ್ಲಿ ಒಂದು ಹೆಣ್ಣು ಭಾಗಿಯಾಗಿದ್ದಾರೆ. ಇನ್ನೊಬ್ಬರ ಹೆಣ್ಮಕ್ಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ’ ಎಂದು ಸುದೀಪ್​ ವಾರ್ನಿಂಗ್​ ನೀಡಿದರು.

ಕೊನೆಯಲ್ಲಿ ಚಕ್ರವರ್ತಿ ಮತ್ತು ಮಂಜು ಶೇಕ್​ ಹ್ಯಾಂಡ್​ ಮಾಡಿಕೊಳ್ಳುವ ಮೂಲಕ ಒಂದು ವಾರದ ತಿಕ್ಕಾಟಕ್ಕೆ ಕೊನೆ ಹಾಡಿದರು.

ಇದನ್ನೂ ಓದಿ: ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಮಂಜು ವಿಚಾರಕ್ಕೆ ದಿವ್ಯಾ ಸುರೇಶ್​ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಚಕ್ರವರ್ತಿ ಚಂದ್ರಚೂಡ್​

Published On - 10:26 pm, Sat, 3 July 21