ಮಂಜು ವಿಚಾರಕ್ಕೆ ದಿವ್ಯಾ ಸುರೇಶ್​ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಚಕ್ರವರ್ತಿ ಚಂದ್ರಚೂಡ್​

Manju Pavagada | Divya Suresh: ‘ಹೆಣ್ಣನ್ನು ಆಟಕ್ಕೆ ಬಳಸಬಾರದು. ಅದು ಹೆಣ್ಣಿಗೆ ಕೊಡುವ ಗೌರವ ಅಲ್ಲ. ಗೌರವ ಕೊಡಬೇಕು ಎಂದು ಕಾನೂನಿನ ಮೂಲಕ ನಾನು ಎರಡು ಮದುವೆ ಬಿಟ್ಟು ಬಂದವನು’ ಎಂದು ಚಕ್ರವರ್ತಿ ಚಂದ್ರಚೂಡ್​ ಹೇಳಿದರು.

ಮಂಜು ವಿಚಾರಕ್ಕೆ ದಿವ್ಯಾ ಸುರೇಶ್​ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಚಕ್ರವರ್ತಿ ಚಂದ್ರಚೂಡ್​
ಚಕ್ರವರ್ತಿ ಚಂದ್ರಚೂಡ್​, ದಿವ್ಯಾ ಸುರೇಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Jun 28, 2021 | 12:36 PM

ಚಕ್ರವರ್ತಿ ಚಂದ್ರಚೂಡ್ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ಕ್ಕೆ ಕಾಲಿಟ್ಟ ಮೊದಲ ದಿನವೇ ಎಲ್ಲರನ್ನೂ ದಂಗುಬಡಿಸಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ಮೆತ್ತಗಾಗಿದ್ದರು. ಆದರೆ ಈಗ ಎರಡನೇ ಇನ್ನಿಂಗ್ಸ್​ಗೆ ಬಂದಿರುವ ಚಕ್ರವರ್ತಿ ಸಿಕ್ಕಾಪಟ್ಟೆ ವೈಲೆಂಟ್​ ಆಗಿದ್ದಾರೆ. ತಮ್ಮೆದುರು ನಡೆಯುತ್ತಿರುವ ನಾಟಕಗಳನ್ನು ನೇರಾನೇರ ಖಂಡಿಸುತ್ತಿದ್ದಾರೆ. ಅದಕ್ಕೆ ಮೊದಲು ಗುರಿಯಾಗಿರುವುದು ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ. ಈ ಜೋಡಿಯ ಲವ್​, ಮದುವೆ ನಾಟಕದ ಬಗ್ಗೆ ಚಕ್ರವರ್ತಿ ತೀವ್ರ ಟೀಕೆ ಮಾಡಿದ್ದಾರೆ.

ಜೂ.27ರ ‘ಸೂಪರ್​ ಸಂಡೇ ವಿತ್​ ಸುದೀಪ’ ಎಪಿಸೋಡ್​ನಲ್ಲಿ ಚಕ್ರವರ್ತಿ ಚಂದ್ರಚೂಡ್​ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಮಂಜು ಮತ್ತು ದಿವ್ಯಾ ಸುರೇಶ್​ ನಡುವಿನ ಸಂಬಂಧದ ಬಗ್ಗೆ ಅವರು ಏರುಧ್ವನಿಯಲ್ಲಿ ಆಕ್ಷೇಪ ಎತ್ತಿದರು. ಅದನ್ನು ಕೇಳಿಸಿಕೊಂಡ ದಿವ್ಯಾ ಸುರೇಶ್​ ಗಳಗಳನೆ ಅಳಲು ಆರಂಭಿಸಿದರು. ಮನೆಯವರೆಲ್ಲ ಸಮಾಧಾನ ಮಾಡಲು ಬಂದರೂ ಕೂಡ ಒಂದಷ್ಟು ಸಮಯದವರೆಗೆ ದಿವ್ಯಾ ಕಣ್ಣೀರು ನಿಲ್ಲಲೇ ಇಲ್ಲ. ‘ಇದನ್ನೆಲ್ಲ ಹ್ಯಾಂಡಲ್​ ಮಾಡಲು ನಾನು ತುಂಬ ಚಿಕ್ಕವಳು’ ಎಂದು ಅವರು ಕಂಬನಿ ಸುರಿಸಿದರು.

ಅಷ್ಟಕ್ಕೂ ದಿವ್ಯಾ-ಮಂಜು ಸಂಬಂಧದ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಆಡಿದ ಮಾತುಗಳೇನು? ‘ಮಂಜು ಪಾವಗಡ ಒಂದು ಹೆಣ್ಣುಮಗಳಿಗೆ ನಿನ್ನೆ ನುಗ್ಗೆಕಾಯಿ ತಿನ್ನಿಸಿದೆ, ಇವತ್ತು ಮಾವಿನ ಹಣ್ಣು ತಿನಿಸುತ್ತಿದ್ದೇನೆ ಎಂದರೆ ಅದು ಗಂಡ-ಹೆಂಡತಿಯ ನಾಟಕ. ಬಾರೆ ಸರಸಕ್ಕೆ ಅಂತ ಯಾರೂ ಸ್ನೇಹಿತರನ್ನು ಕರೆಯುವುದಿಲ್ಲ. ದಿವ್ಯಾ ಸುರೇಶ್​ ನನ್ನ ತಂಗಿ ಆಗಿದ್ದಕ್ಕೆ ಮಂಜು ನನ್ನನ್ನು ಭಾವವನ್ನಾಗಿ ಮಾಡಿಕೊಂಡಿದ್ರು. ಅದರ ಬಗ್ಗೆ ನಾನು ಹೊರಗಡೆ ಮಾತನಾಡಿದ್ದೀನಿ. ಒಂದು ಶೋಗೋಸ್ಕರ ಈ ಮನುಷ್ಯ ಒಂದು ಹೆಣ್ಣನ್ನು ಹೇಗೆ ಹೆಂಡತಿಯಾಗಿ ಮಾಡಿಕೊಳ್ಳುತ್ತಾನೆ’ ಎಂದು ಟೀಕಿಸಿದರು.

‘ಅದು ಅವರ ಇಷ್ಟ. ಹೇಗಾದರೂ ಇರಬಹುದು. ನಾನು ಈ ಮನೆಯ ಸದಸ್ಯ ಎಂದಮೇಲೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಒಂದು ಹೆಣ್ಣನ್ನು ಸರಸಕ್ಕೆ ಕರೆಯೋದು, ಮಾವಿನಹಣ್ಣಿನ ಜೋಕ್​ ಮಾಡೋದು, ಪತ್ರವಳ್ಳಿ ಅಂತ ಪದಬಳಸೋದು ನನ್ನ ತಂದೆ-ತಾಯಿ ನನಗೆ ಹೇಳಿಕೊಟ್ಟಿಲ್ಲ. ಪತ್ರವಳ್ಳಿ ಎಂದರೆ ಬೇಲಿ ಸಂದಿಯಲ್ಲಿ ನಡೆಯುವಂತಹ ಕಾಮ ಅಂತ ಅರ್ಥ. ಇದು ನಾನು ಹುಟ್ಟುಹಾಕಿದ ಪದ ಅಲ್ಲ. ಬಿಗ್​ ಬಾಸ್​ ಮನೆಯಲ್ಲಿ ಮಂಜು ಕರೆಯುತ್ತಿರುವುದು ಅದು’ ಎಂದು ಚಕ್ರವರ್ತಿ ಕೂಗಾಡಿದರು. ಈ ಮಾತುಗಳಿಂದ ದಿವ್ಯಾ ಸುರೇಶ್​ಗೆ ತುಂಬ ನೋವಾದಂತೆ ಕಂಡಿತು.

ಇದನ್ನೂ ಓದಿ:

ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ

Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ