‘ಕೆಜಿಎಫ್’ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ ಮಾತಿನಿಂದ ಮುಗಿಯಿತು ‘ಕಿರಿಕ್ ಪಾರ್ಟಿ’ ವಿವಾದ
‘ಕಿರಿಕ್ ಪಾರ್ಟಿ’ ಹಾಡಿನ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಲಹರಿ ವೇಲು ನಡುವೆ ಉಂಟಾಗಿದ್ದ ವಿವಾದ ಇತ್ತೀಚೆಗೆ ಬಗೆಹರಿದಿದೆ. ಅವರಿಬ್ಬರು ರಾಜಿ ಮಾಡಿಕೊಳ್ಳಲು ಕಾರಣ ಆದವರು ‘ಕೆಜಿಎಫ್’ ನಿರ್ಮಾಪಕ ವಿಜಯ್ ಕಿರಗಂದೂರು.
ವಿವಾದ ಹೇಗೆ ಬಗೆಹರಿಯಿತು ಎಂಬ ಬಗ್ಗೆ ಲಹರಿ ವೇಲು ಪ್ರತಿಕ್ರಿಯೆ ನೀಡಿದ್ದಾರೆ. ‘ನಾಲ್ಕು ತಿಂಗಳ ಮುಂಚೆ ವಿಜಯ್ ಕಿರಗಂದೂರು ಅವರು ನಮಗೆ ಒಂದು ಮಾತು ಹೇಳಿದರು. ಏನ್ ಸರ್ ಇದೆಲ್ಲ ಅಂತ ಕೇಳಿದರು. ನಾನು 45 ವರ್ಷದಿಂದ ಯಾರ ಮೇಲೂ ವಿವಾದ ಇಟ್ಟುಕೊಂಡವನಲ್ಲ. ನಾವು ಕೂಡ ನೋವು-ಅವಮಾನ ಅನುಭವಿಸಿದ್ದೇವೆ. ಹಾಗಂತ ನಾನು ಇನ್ನೊಬ್ಬನಿಗೆ ನೋವು ಕೊಡುವವನಲ್ಲ. ಇದು ದೊಡ್ಡ ವಿಷಯ ಅಲ್ಲ. 2 ನಿಮಿಷದಲ್ಲಿ ಬಗೆಹರಿಸಿಕೊಳ್ಳಬಹುದು ಅಂತ ಅವರಿಗೆ ಹೇಳಿದೆ. ರಕ್ಷಿತ್, ನಾನು, ಅಜನೀಶ್ ಮತ್ತು ನಿರ್ದೇಶಕ ಶೂನ್ಯ ಅವರು ಒಂದು ಹೋಟೆಲ್ನಲ್ಲಿ ಮಾತನಾಡಿ ಬಗೆಹರಿಸಿಕೊಂಡೆವು’ ಎಂದು ವೇಲು ಹೇಳಿದ್ದಾರೆ.
‘ಎಲ್ಲ ವ್ಯವಹಾರದಲ್ಲೂ ಒಂದು ಮೌಲ್ಯ ಇರುತ್ತದೆ. ಯಾವುದೇ ಹಾಡನ್ನು ನಾವು ಹಣ ಕೊಟ್ಟು ಖರೀದಿಸಿರುತ್ತೇವೆ. ಬೇರೆಯವರ ಹಾಡನ್ನು ನಾವು ಬಳಸಿಕೊಂಡರೆ ಅವರೂ ಬಿಡುವುದಿಲ್ಲ. ಮೌಲ್ಯಗಳನ್ನು ಇಟ್ಟುಕೊಂಡು ಜೀವನ ಮಾಡಿದರೆ ನಮ್ಮ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವುದೇ ವಿವಾದಗಳು ಇರುವುದಿಲ್ಲ’ ಎಂದಿದ್ದಾರೆ ವೇಲು.
ಇದನ್ನೂ ಓದಿ:
‘ಇದಕ್ಕೆ ಉತ್ತರ ಕೊಡುತ್ತೇನೆ’; ತೇಜೋವಧೆ ಮಾಡಿದ ಮಾಧ್ಯಮಕ್ಕೆ ರಕ್ಷಿತ್ ಶೆಟ್ಟಿ ಖಡಕ್ ಎಚ್ಚರಿಕೆ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
