ಪ್ರಜ್ವಲ್​ ಹುಟ್ಟುಹಬ್ಬದಂದೇ ಹೊರಬಿತ್ತು ‘ಮಾಫಿಯಾ’ ವಿಷಯ; ಡೈನಾಮಿಕ್​ ಪ್ರಿನ್ಸ್​ ಕೈಗೆ ಬೇಡಿ

ಮದನ್​ ಕುಮಾರ್​

|

Updated on: Jul 04, 2021 | 12:12 PM

Prajwal Devaraj Birthday: ದಕ್ಷಿಣ ಭಾರತದ ಸ್ಟಾರ್​ ನಟರು ‘ಮಾಫಿಯಾ’ ಚಿತ್ರಕ್ಕೆ ಸಾಥ್​ ನೀಡಿದ್ದಾರೆ. ಅಂದರೆ, ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಪ್ರಜ್ವಲ್ ದೇವರಾಜ್​​ಗೆ ಶುಭ ಹಾರೈಸಿದ್ದಾರೆ.

ಪ್ರಜ್ವಲ್​ ಹುಟ್ಟುಹಬ್ಬದಂದೇ ಹೊರಬಿತ್ತು ‘ಮಾಫಿಯಾ’ ವಿಷಯ; ಡೈನಾಮಿಕ್​ ಪ್ರಿನ್ಸ್​ ಕೈಗೆ ಬೇಡಿ
ಮಾಫಿಯಾ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​
Follow us

‘ಡೈನಾಮಿಕ್​ ಪ್ರಿನ್ಸ್​’ ಪ್ರಜ್ವಲ್​ ದೇವರಾಜ್​ ಅವರಿಗೆ ಇಂದು (ಜು.4) ಜನ್ಮದಿನ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ಅವರ ಹೊಸ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಪ್ರಜ್ವಲ್​ ನಟನೆಯ 35ನೇ ಸಿನಿಮಾ ಇದಾಗಿದ್ದು, ‘ಮಾಫಿಯಾ’ ಎಂದು ಟೈಟಲ್​ ಇಡಲಾಗಿದೆ. ಈ ಚಿತ್ರಕ್ಕೆ ಗುರುದತ್​ ಗಾಣಿಗ ನಿರ್ದೇಶನ ಮಾಡಲಿದ್ದಾರೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಅವರು ನಿರ್ಮಿಸುತ್ತಿರುವ ಈ‌ ಚಿತ್ರದ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಪ್ರಜ್ವಲ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ‘ಮಾಫಿಯಾ’ ಚಿತ್ರತಂಡದ ಜೊತೆ ಪ್ರಜ್ವಲ್​ ಅವರು ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಸ್ಟಾರ್​ ನಟರು ‘ಮಾಫಿಯಾ’ ಚಿತ್ರಕ್ಕೆ ಸಾಥ್​ ನೀಡಿದ್ದಾರೆ. ಅಂದರೆ, ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಪ್ರಜ್ವಲ್​ಗೆ ಶುಭ ಹಾರೈಸಿದ್ದಾರೆ. ವಿಜಯ್​ ಸೇತುಪತಿ, ಆರ್ಯ ಮುಂತಾದ ನಟರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ‘ಮಾಫಿಯಾ’ದ ಮೋಷನ್​ ಪೋಸ್ಟರ್ ಹಂಚಿಕೊಂಡಿದ್ದಾರೆ.

‘ಹ್ಯಾಪಿ ಬರ್ತ್​ಡೇ ಪ್ರಜ್ವಲ್​. ನೀವು ತುಂಬ ಲಕ್ಕಿ. ಯಾಕೆಂದರೆ, ನಿಮ್ಮ ಬರ್ತ್​ಡೇ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಮಾಫಿಯಾ ಟೈಟಲ್​ ಕೇಳಿ ಖುಷಿ ಆಯಿತು. ನಿರ್ದೇಶಕ ಗುರುದತ್​ ಗಾಣಿಗ ಅವರಿಗೆ ಗುಡ್​ಲಕ್​. ಎಲ್ಲರಿಗೂ ಒಳ್ಳೆಯದಾಗಲಿ. ನನ್ನ ಮೂಲಕ ಇದು ಲಾಂಚ್​ ಆಗುತ್ತಿರುವುದು ಬಹಳ ಖುಷಿಯ ವಿಚಾರ’ ಎಂದು ಶಿವರಾಜ್​ಕುಮಾರ್​ ಶುಭ ಹಾರೈಸಿದ್ದಾರೆ.

(ಚಿತ್ರತಂಡಕ್ಕೆ ಶುಭ ಹಾರೈಸಿದ ಶಿವರಾಜ್​ಕುಮಾರ್​)

ಈ ಹಿಂದೆ ಅಂಬರೀಷ್​, ಕಿಚ್ಚ ಸುದೀಪ್​, ಶ್ರುತಿ ಹರಿಹರನ್​, ಸುಹಾಸಿನಿ ನಟನೆಯ ‘ಅಂಬಿ ನಿಂಗ್​ ವಯಸ್ಸಾಯ್ತೋ’ ಚಿತ್ರಕ್ಕೆ ಗುರುದತ್​ ಗಾಣಿಗ ನಿರ್ದೇಶನ ಮಾಡಿದ್ದರು. ಈಗ ಅವರು ‘ಮಾಫಿಯಾ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲು ಸಜ್ಜಾಗಿದ್ದು, ಪೋಸ್ಟರ್​ ಮೂಲಕ ನಿರೀಕ್ಷೆ ಮೂಡಿಸಿದ್ದಾರೆ. ಈ ಪೋಸ್ಟರ್​ನಲ್ಲಿ ಪ್ರಜ್ವಲ್​ ಅವರು ಪೊಲೀಸ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಕೈಗೆ ಬೇಡಿ ತೊಡಿಸಲಾಗಿರುವುದರಿಂದ ಚಿತ್ರದ ಕಥೆ ಬಗ್ಗೆ ಕೌತುಕ ಹೆಚ್ಚುವಂತಾಗಿದೆ.

ಇದನ್ನೂ ಓದಿ:

ಗೋಲ್ಡನ್ ಸ್ಟಾರ್​ ಗಣೇಶ್​ ಜನ್ಮದಿನ; ‘ಸಖತ್​’, ‘ಗಾಳಿಪಟ 2’ ಚಿತ್ರಗಳಿಂದ ಸಿಕ್ಕ ಗಿಫ್ಟ್​ಗಳೇನು?

ಇಷ್ಟೊಂದು ಸಾವು-ನೋವಿನಲ್ಲಿ ಸಂಭ್ರಮಿಸುವುದು ಸರಿಯಲ್ಲ; ಅಭಿಮಾನಿಗಳಿಗೆ ಗಣೇಶ್​ ವಿಶೇಷ ಮನವಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada