AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖಾಮುಖಿ ಆಗಲಿದ್ದಾರಾ ಯಶ್​-ಅಲ್ಲು ಅರ್ಜುನ್​? ಪ್ಯಾನ್​ ಇಂಡಿಯಾ ಸ್ಟಾರ್​ಗಳ ಹೊಸ ಹಣಾಹಣಿ

KGF 2 Release Date: ರಿಲೀಸ್​ ದಿನಾಂಕದ ಬಗ್ಗೆ ‘ಕೆಜಿಎಫ್​ 2’ ಮತ್ತು ‘ಪುಷ್ಪ’ ಚಿತ್ರತಂಡಗಳ ಕಡೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಆಗುವುದು ಇನ್ನೂ ಬಾಕಿ ಇದೆ. ಅದಕ್ಕೂ ಮುನ್ನವೇ ಸಿನಿಪ್ರಿಯರು ರಿಲೀಸ್​ ದಿನಾಂಕದ ಕ್ಲ್ಯಾಶ್​ ಸಾಧ್ಯತೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಮುಖಾಮುಖಿ ಆಗಲಿದ್ದಾರಾ ಯಶ್​-ಅಲ್ಲು ಅರ್ಜುನ್​? ಪ್ಯಾನ್​ ಇಂಡಿಯಾ ಸ್ಟಾರ್​ಗಳ ಹೊಸ ಹಣಾಹಣಿ
ಅಲ್ಲು ಅರ್ಜುನ್​, ಯಶ್​
TV9 Web
| Edited By: |

Updated on: Jul 07, 2021 | 9:13 AM

Share

ಕೊರೊನಾ ವೈರಸ್​ ಎರಡನೇ ಅಲೆಯ ಕಾರಣದಿಂದಾಗಿ ಎಲ್ಲ ಕ್ಷೇತ್ರಗಳಂತೆಯೇ ಸಿನಿಮಾರಂಗದ ಲೆಕ್ಕಾಚಾರಗಳು ಕೂಡ ತಲೆ ಕೆಳಗಾದವು. ಮೊದಲು ಪ್ಲ್ಯಾನ್​ ಮಾಡಿದ್ದ ಯಾವ ಕೆಲಸಗಳು ಕೂಡ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. ದೊಡ್ಡ ದೊಡ್ಡ ಸ್ಟಾರ್​ ನಟರ ಸಿನಿಮಾಗಳ ಕೆಲಸಗಳು ಕೂಡ ನಿಂತಲ್ಲೇ ನಿಲ್ಲುವಂತಾಯಿತು. ಅವುಗಳ ರಿಲೀಸ್​ ದಿನಾಂಕ ಸಹ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟವು. ಇದೇ ಈಗ ಕ್ಲ್ಯಾಶ್​ಗೆ ಕಾರಣ ಆಗುವ ಸಾಧ್ಯತೆ ಇದೆ. ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಮತ್ತು ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಚಿತ್ರಗಳು ರಿಲೀಸ್​ ದಿನಾಂಕಕ್ಕಾಗಿ ಹಣಾಹಣಿ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಎಲ್ಲವೂ ಸರಿ ಇದ್ದಿದ್ದರೆ ಇದೇ ಜುಲೈ 16ರಂದು ‘ಕೆಜಿಎಫ್​ 2’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಬೇಕಿತ್ತು. ಆದರೆ, ಕೊವಿಡ್​ ಎರಡನೇ ಅಲೆಯ ಕಾರಣ ಚಿತ್ರಮಂದಿರಗಳು ತೆರೆಯದೇ ಇರುವುದರಿಂದ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ. ಮತ್ತೊಂದು ಸೂಕ್ತ ದಿನಾಂಕವನ್ನು ನಿಗದಿ ಮಾಡಲು ಚಿತ್ರತಂಡ ಲೆಕ್ಕಾಚಾರ ಹಾಕುತ್ತಿದೆ. ಕ್ರಿಸ್​ ಮಸ್​ ಸಂದರ್ಭದ ಮೇಲೆ ‘ಕೆಜಿಎಫ್​ 2’ ತಂಡ ಕಣ್ಣಿಡುವ ಸಾಧ್ಯತೆ ಇದೆ. ಅದೇ ಸಮಯಕ್ಕೆ ಸರಿಯಾಗಿ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಕೂಡ ರಿಲೀಸ್​ ಆಗುವ ಸಾಧ್ಯತೆ ಇದೆ.

ಹೀಗೆ ಒಂದೇ ಸಮಯಕ್ಕೆ ‘ಪುಷ್ಪ’ ಮತ್ತು ‘ಕೆಜಿಎಫ್​ 2’ ಚಿತ್ರಗಳು ಬಿಡುಗಡೆಯಾದರೆ ಖಂಡಿತವಾಗಿಯೂ ಬಾಕ್ಸ್​ಆಫೀಸ್​ ಕ್ಲ್ಯಾಶ್​ ಆಗಲಿದೆ. ಅಂದಹಾಗೆ, ಈ ಎರಡೂ ಸಿನಿಮಾಗಳು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿವೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್​ ಆಗಿ ದೇಶಾದ್ಯಂತ ಬಿಡುಗಡೆ ಆಗಲಿವೆ. ರಿಲೀಸ್​ ಡೇಟ್​ ಬಗ್ಗೆ ಚಿತ್ರತಂಡಗಳ ಕಡೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಆಗುವುದಕ್ಕಿಂತಲೂ ಮುನ್ನವೇ ಸಿನಿಪ್ರಿಯರು ರಿಲೀಸ್​ ದಿನಾಂಕದ ಕ್ಲ್ಯಾಶ್​ ಸಾಧ್ಯತೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಐಎಂಡಿಬಿ (ಇಂಟರ್​ನೆಟ್​ ಮೂವೀ ಡೇಟಾಬೇಸ್​) ವೆಬ್​ಸೈಟ್​ ಪ್ರಕಟಿಸಿರುವ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಪುಷ್ಪ’ ಚಿತ್ರ ಮೊದಲ ಸ್ಥಾನದಲ್ಲಿದೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿದೆ. ಆ ಕಾರಣದಿಂದಲೂ ಈ ಎರಡು ಸಿನಿಮಾಗಳ ಬಗ್ಗೆ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ. ‘ಕೆಜಿಎಫ್​ 2’ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿರುವ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್ ಅವರು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ‘ಹಾಲ್​ನಲ್ಲಿ ಗ್ಯಾಂಗ್​ಸ್ಟರ್​ಗಳು ತುಂಬಿರುವಾಗ ಮಾತ್ರ ಮಾನ್​ಸ್ಟರ್​ ಬರುತ್ತಾನೆ. ಅವನು ಬರೋ ಹೊಸ ಡೇಟ್​ ಶೀಘ್ರದಲ್ಲೇ ಘೋಷಣೆ ಮಾಡಲಿದ್ದೇವೆ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

‘ಯಶ್​ ಕೂಡ ನಮ್ಮಂತೆ ಸೊನ್ನೆಯಿಂದ ಬಂದವರು’; ರಾಕಿಂಗ್​ ಸ್ಟಾರ್​ ಬಗ್ಗೆ ವೇಲು ಮಾತು

ಯಶ್​-ರಾಧಿಕಾ ಪಂಡಿತ್​ ದಂಪತಿ ಮನೆ ಪ್ರವೇಶದ ಫೋಟೋಗಳು

Follow Us
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ