‘ಯಶ್ ಕೂಡ ನಮ್ಮಂತೆ ಸೊನ್ನೆಯಿಂದ ಬಂದವರು’; ರಾಕಿಂಗ್ ಸ್ಟಾರ್ ಬಗ್ಗೆ ವೇಲು ಮಾತು
KGF Chapter 2: ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಸಂಸ್ಥೆ ಖರೀದಿಸಿದೆ. ಈ ಬಗ್ಗೆ ಮಾತನಾಡುವಾಗ ಯಶ್ ಕುರಿತು ಲಹರಿ ವೇಲು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಆಡಿಯೋ ಹಕ್ಕುಗಳು ಬರೋಬ್ಬರಿ 7.2 ಕೋಟಿ ರೂ.ಗಳಿಗೆ ಮಾರಾಟ ಆಗಿವೆ. ‘ಯಶ್ ಅವರ ಬಗ್ಗೆ ನನಗೆ ಅಪಾರವಾದ ಪ್ರೀತಿ. ಯಾಕೆಂದರೆ ಅವರು ಕೂಡ ನಮ್ಮಂತೆ ಸೊನ್ನೆಯಿಂದ ಬಂದವರು. ಅವರ ಇಡೀ ಟೀಮ್ ಅದ್ಭುತವಾಗಿದೆ. ಅವರ ಜೊತೆ ವ್ಯವಹಾರ ಮಾಡಲು ಬಹಳ ಖುಷಿ ಆಗುತ್ತದೆ. ಈ ಹಿಂದೆ ನಾವು ‘ಬಾಹುಬಲಿ 1’ ಚಿತ್ರಕ್ಕೆ 3.6 ಕೋಟಿ ಮತ್ತು ‘ಬಾಹುಬಲಿ 2’ ಚಿತ್ರಕ್ಕೆ 5.4 ಕೋಟಿ ರೂ. ನೀಡಿ ಆಡಿಯೋ ಹಕ್ಕು ಪಡೆಯುವ ಮೂಲಕ ಕನ್ನಡದ ಭಾವುಟವನ್ನು ಆಂಧ್ರದಲ್ಲಿ ಹಾರಿಸಿದ್ದೆವು. ಈಗ ಆ ದಾಖಲೆಯನ್ನೂ ‘ಕೆಜಿಎಫ್ 2’ ಮೀರಿಸಿದೆ’ ಎಂದು ವೇಲು ಹೇಳಿದ್ದಾರೆ.
‘ಇಡೀ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಮೊತ್ತಕ್ಕೆ ಆಡಿಯೋ ಮಾರಾಟವಾದ ಸಿನಿಮಾ ‘ಕೆಜಿಎಫ್ 2’ ಎಂಬುದು ಎಲ್ಲರಿಗೂ ಹೆಮ್ಮೆ ತರುವಂತಹ ವಿಚಾರ. 7.20 ಕೋಟಿ ಕೊಟ್ಟು ಹಕ್ಕುಗಳನ್ನು ಕೊಂಡುಕೊಳ್ಳುತ್ತೇವೆ ಎಂಬ ನಿರೀಕ್ಷೆಯೇ ಇರಲಿಲ್ಲ. ನಮ್ಮ 45 ವರ್ಷಗಳ ಅನುಭವದಲ್ಲಿ ಈ ರೀತಿ ಆಗಿದ್ದು ಇದೇ ಮೊದಲು. ನಮ್ಮ ಕನ್ನಡದ ಮಾರುಕಟ್ಟೆ ಈ ಮಟ್ಟಕ್ಕೆ ಬೆಳೆದಿರುವುದು ಸಂತೋಷ ತರುವಂತಹ ವಿಷಯ’ ಎಂಬುದು ವೇಲು ಮಾತುಗಳು.
ಇದನ್ನೂ ಓದಿ:
ಮುಗಿಯಿತು ರಕ್ಷಿತ್ Vs ಲಹರಿ ಕಿರಿಕ್; ಮತ್ತೆ ಸ್ನೇಹ ಚಿಗುರಿದ್ದಕ್ಕೆ ಹೊಸ ಸೆಲ್ಫೀ ಸಾಕ್ಷಿ
Published on: Jul 03, 2021 09:59 AM
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
