Sonu Sood: ದೂಕುಡು ಸಿನಿಮಾದಲ್ಲಿ ಸೋನು ಸೂದ್​ಗೆ ಹೊಡೆದದ್ದಕ್ಕೆ ಸಿಟ್ಟಿನಿಂದ ಮನೆಯ ಟಿವಿ ಕುಟ್ಟಿ ಪುಡಿ ಮಾಡಿದ ಪೋರ

TV9 Digital Desk

| Edited By: shivaprasad.hs

Updated on:Jul 14, 2021 | 6:21 PM

ದೂಕುಡು ಸಿನಿಮಾವನ್ನು ನೋಡುತ್ತಿದ್ದ ಹುಡುಗನೊಬ್ಬ ಅದರಲ್ಲಿ ಸೋನು ಸೂದ್​ಗೆ ಹೀರೋ ಹೊಡೆದದ್ದಕ್ಕೆ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋನು ಸೂದ್, ನಿಮ್ಮ ತಂದೆ ನನ್ನ ಬಳಿಯೇ ಹೊಸ ಟಿವಿ ತಂದುಕೊಡಲು ಹೇಳದಿದ್ದರೆ ಸಾಕು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Sonu Sood: ದೂಕುಡು ಸಿನಿಮಾದಲ್ಲಿ ಸೋನು ಸೂದ್​ಗೆ ಹೊಡೆದದ್ದಕ್ಕೆ ಸಿಟ್ಟಿನಿಂದ ಮನೆಯ ಟಿವಿ ಕುಟ್ಟಿ ಪುಡಿ ಮಾಡಿದ ಪೋರ
ಸೋನು ಸೂದ್ (ಸಂಗ್ರಹ ಚಿತ್ರ)

Follow us on

ಸಣ್ಣ ಮಕ್ಕಳು ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ಹೀರೋ ವಿಲನ್​ಗಳನ್ನು ಸದೆ ಬಡಿಯುವುದನ್ನು ನೋಡಿ ಖುಷಿಪಡುತ್ತಾರೆ. ಆದರೆ ತೆರೆಯ ಮೇಲಿನ ವಿಲನ್ ನಿಜ ಜೀವನದಲ್ಲಿ ಹೀರೋ ಆಗಿದ್ದನ್ನು ಗಮನಿಸಿದ್ದ ಬಾಲಕನಿಗೆ ಚಿತ್ರ ನೋಡುವಾಗ ತಲೆಬಿಸಿಯಾಗಿದೆ. ಅಷ್ಟೆಲ್ಲಾ ಜನಕ್ಕೆ ಸಹಾಯ ಮಾಡುವ ಅಷ್ಟು ಒಳ್ಳೆಯವರಿಗೇ ಈ ಹೀರೋ ಹೊಡೆಯುತ್ತಿದ್ದಾನಲ್ಲಾ ಎಂದು ಕೋಪಗೊಂಡ ಆ ಪೋರ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ. ಆ ನಿಜ ಜೀವನದ ಹೀರೋ ಯಾರು, ಆ ಸಿನಿಮಾ ಯಾವುದು ಮೊದಲಾದ ಸಂಪೂರ್ಣ ವಿವರ ಇಲ್ಲಿದೆ.

ಸಂಗರೆಡ್ಡಿ ಊರಿನ ಏಳು ವರ್ಷದ ಬಾಲಕ ವಿರಾಟ್. ಆತನಿಗೆ ಸಿನಿಮಾವೆಂದರೆ ಪ್ರಾಣ. ಹಾಗೆಯೇ ಆತ ಕರೊನಾ ಸಂದರ್ಭದಲ್ಲಿ ನಟ ಸೋನುಸೂದ್ ಸಹಾಯ ಬಯಸಿ ಬಂದವರಿಗೆ ನೆರವಾಗುವುದನ್ನು ಆತ ನೋಡಿದ್ದಾನೆ. ಆತನ ಮನಸ್ಸಿನಲ್ಲಿ ಸೋನು ಸೂದ್ ಆದರ್ಶ ವ್ಯಕ್ತಿಯಾಗಿ ಕೂತುಬಿಟ್ಟಿದ್ದಾನೆ. ಆದರೆ ಬಾಲಕ ವಿರಾಟ್​ಗೆ ‘ದೂಕುಡು’ ಚಿತ್ರ ನೋಡುವಾಗ ಕಕ್ಕಾಬಿಕ್ಕಿಯಾಗಿದೆ. ಮಹೇಶ್ ಬಾಬು ಅಭಿನಯದ ಆ ಚಿತ್ರದಲ್ಲಿ ಸೋನು ಸೂದ್ ಖಳನಾಯಕನಾಗಿ ಅಭಿನಯಿಸಿದ್ದಾರೆ. ಅದರಲ್ಲಿ ಮಹೇಶ್ ಬಾಬು ಸೋನು ಸೂದ್​ರನ್ನು ಸದೆಬಡಿಯುವದನ್ನು ನೋಡಿದ ಬಾಲಕನಿಗೆ ಕೋಪ ಬಂದಿದೆ.

ಆಪತ್ತಿನ ಸಂದರ್ಭದಲ್ಲಿ ಎಲ್ಲರಿಗೂ ನೆರವಾಗುವ ಸೋನು ಸೂದ್​ಗೆ ಹೊಡೆಯುವುದನ್ನು ಸಹಿಸಲಾಗದೇ ಕೋಪ ಬಂದ ಬಾಲಕ ಬಾಲಕ ಟಿವಿಯನ್ನು ಪುಡಿಮಾಡಿದ್ಧಾನೆ. ಅದನ್ನು ಸೋನು ಸೂದ್ ಅವರೇ ಹಂಚಿಕೊಂಡಿದ್ಧಾರೆ.

ಟಿವಿ ಒಡೆಯಬೇಡ ಮಾರಾಯ, ನಿಮ್ಮ ತಂದೆ ಹೊಸದನ್ನು ತಂದು ಕೊಡಲು ಹೇಳುತ್ತಾರೆ: ಸೋನು ಸೂದ್

ಬಾಲಕ ವಿರಾಟ್ ಟಿವಿ ಪುಡಿ ಮಾಡಿದ ವಿಡಿಯೊವನ್ನು ಹಂಚಿಕೊಂಡ ನಟ ಸೋನು ಸೂದ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ಧಾರೆ. ‘‘ಅರ್ರೆ, ಟಿವಿ ಪುಡಿ ಮಾಡಬೇಡ ಮಾರಾಯ. ನಿಮ್ಮ ತಂದೆ ನನಗೆ ಹೊಸ ಟಿವಿಯನ್ನು ತಂದು ಕೊಡಲು ಹೇಳಿಯಾರು!’’ ಎಂದು ಸೋನು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸದ್ಯ ಅವರ ಈ ಟ್ವೀಟ್ ವೈರಲ್ ಆಗಿದೆ.

ಸೋನು ಸೂದ್​ ಅವರು ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿರುವುದು ಅವರ ಅಭಿಮಾನಿ ಬಳಗವನ್ನು ಹೆಚ್ಚಿಸಿದೆ. ಈ ಹಿಂದೆ ಹೈದರಾಬಾದ್​ನಿಂದ ಒಬ್ಬ ವ್ಯಕ್ತಿ ಸೋನು ಅವರನ್ನು ಭೇಟಿಯಾಗಲು ಕಾಲ್ನಡಿಗೆಯಲ್ಲಿ ಮುಂಬೈಗೆ ಪ್ರಯಾಣಿಸಿದ್ದ. ಅದನ್ನು ಹಂಚಿಕೊಂಡಿದ್ದ ಸೋನು ಸೂದ್, ಇದರಿಂದ ನನ್ನ ಹೃದಯ ತುಂಬಿ ಬಂದಿದೆ. ಆದರೆ ಇಂಥದ್ದನ್ನು ನಾನು ಒಪ್ಪುವುದಿಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

(Actor Sonu Sood’s 7 years old fan from Sangareddy hits TV after watching Dookudu)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada