ಬಿಗ್​ ಬಾಸ್​ ವೂಟ್ ನಿರೂಪಣೆಗೆ ಬರಲಿದ್ದಾರೆ ಹೊಸ ನಿರೂಪಕರು

ಹಿಂದಿ ಬಿಗ್​ ಬಾಸ್​ನವರು ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಒಂದು ಕಾರಣವಿದೆ. ಈ ಬಾರಿ ಹಿಂದಿಯಲ್ಲಿ ಬಿಗ್​ ಬಾಸ್​ ಬೇರೆ ರೀತಿಯಲ್ಲಿ ಪ್ರಸಾರವಾಗಲಿದೆ. ವೂಟ್​ ಆ್ಯಪ್​ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.

ಬಿಗ್​ ಬಾಸ್​ ವೂಟ್ ನಿರೂಪಣೆಗೆ ಬರಲಿದ್ದಾರೆ ಹೊಸ ನಿರೂಪಕರು
ಬಿಗ್​ ಬಾಸ್
TV9kannada Web Team

| Edited By: Rajesh Duggumane

Jul 17, 2021 | 9:55 PM

ಹಿಂದಿ, ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯ ಪ್ರೇಕ್ಷಕರ ವರ್ಗದಲ್ಲಿ ಬಿಗ್​​ ಬಾಸ್​ಗೆ ಬೇಡಿಕೆ ಇದೆ. ಈ ಎಲ್ಲಾ ಭಾಷೆಗಳಲ್ಲಿ ವಾಹಿನಿಯವರು ವೀಕ್ಷಕರನ್ನು ಸೆಳೆಯಲು ಹೊಸಹೊಸ ಪ್ರಯೋಗ ಮಾಡುತ್ತಲೇ ಬರುತ್ತಿದ್ದಾರೆ. ಈಗ ಹಿಂದಿ ಬಿಗ್​ ಬಾಸ್​ ಸೀಸನ್​ 15ರ ಆರಂಭಕ್ಕೆ ಎಲ್ಲಾ ಸಿದ್ಧತೆ ನಡೆದಿದೆ. ಈ ರಿಯಾಲಿಟಿ ಶೋನಲ್ಲಿ ಎರಡು ನಿರೂಪಕರು ಇರಲಿದ್ದಾರಂತೆ!

ಹಿಂದಿ ಬಿಗ್​ ಬಾಸ್​ನವರು ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಒಂದು ಕಾರಣವಿದೆ. ಈ ಬಾರಿ ಹಿಂದಿಯಲ್ಲಿ ಬಿಗ್​ ಬಾಸ್​ ಬೇರೆ ರೀತಿಯಲ್ಲಿ ಪ್ರಸಾರವಾಗಲಿದೆ. ವೂಟ್​ ಆ್ಯಪ್​ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಬಿಗ್​ ಬಾಸ್​ ಒಟಿಟಿಯನ್ನು ವೂಟ್​ ಪರಿಚಯಿಸಿದೆ. ಮೊದಲು ಆರು ವಾರದ ಎಪಿಸೋಡ್​ಗಳು ವೂಟ್​ನಲ್ಲಿ ಮಾತ್ರ ಪ್ರಸಾರವಾಗಲಿದ್ದು ನಂತರ ಟಿವಿಗೆ ಶಿಫ್ಟ್​ ಆಗಲಿದೆ.

ಟಿವಿಯಲ್ಲಿ ಪ್ರಸಾರವಾಗುವ ಶೋಅನ್ನು ಸಲ್ಮಾನ್​ ಖಾನ್​ ಅವರೇ ನಡೆಸಿಕೊಡಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆಯನ್ನು ವಾಹಿನಿ ಮಾಡುತ್ತಿಲ್ಲ. ಆದರೆ, ಒಟಿಟಿ ವರ್ಷನ್​ಗೆ ಬೇರೆ ನಿರೂಪಕರನ್ನು ಹುಡುಕಬೇಕು ಎನ್ನುವ ಆಲೋಚನೆ ವಾಹಿನಿಯದ್ದು. ಈಗಾಗಲೇ ಇಬ್ಬರನ್ನು ವಾಹಿನಿ ಫೈನಲ್​ ಮಾಡಿದೆ ಎನ್ನಲಾಗುತ್ತಿದೆ!

ಮೂಲಗಳ ಪ್ರಕಾರ ಸಿದ್ಧಾರ್ಥ್​ ಶುಕ್ಲಾ ಹಾಗೂ ಅವರ  ಪ್ರೇಯಸಿ ಶೆಹ್ನಾಜ್​ ಗಿಲ್​ ಒಟಿಟಿ ಅವತರಣಿಕೆಯಲ್ಲಿ ನಿರೂಪಣೆ ಮಾಡಲಿದ್ದಾರಂತೆ. ಇಬ್ಬರೂ ಹಿಂದಿ ಬಿಗ್​ ಬಾಸ್​ ಸೀಸನ್​ 13ರಲ್ಲಿ ಕಾಣಿಸಿಕೊಂಡಿದ್ದರು. ಇವರ ಫೇಮ್​ ದೊಡ್ಡಮಟ್ಟದಲ್ಲಿದೆ.  ಈ ಕಾರಣಕ್ಕೆ ಒಟಿಟಿ ನಿರೂಪಣೆಗೆ ಇವರನ್ನುಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿ ವಾಹಿನಿ ಇದೆ.

ಸಾಮಾನ್ಯವಾಗಿ ಬಿಗ್​ ಬಾಸ್ ಪ್ರತೀ ಸೀಸನ್​ 100ರಿಂದ 120 ದಿನಗಳ ಕಾಲ ನಡೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೆ ಬಿಗ್​ ಬಾಸ್​ ಪೂರ್ಣಗೊಳ್ಳುತ್ತದೆ. ಆದರೆ, ಈಗ ಇದನ್ನು ಎರಡು ತಿಂಗಳು ಹೆಚ್ಚುವರಿಯಾಗಿ ನಡೆಸೋಕೆ ವಾಹಿನಿ ನಿರ್ಧರಿಸಿದೆ. ‘ಹಿಂದಿ ಬಿಗ್​ ಬಾಸ್​ ಸೀಸನ್ 14’ ಉತ್ತಮ ಟಿಆರ್​ಪಿ ತಂದುಕೊಟ್ಟಿತ್ತು. ಪ್ರೇಕ್ಷಕರು ಇದನ್ನು ಇಷ್ಟಪಟ್ಟಿದ್ದರು. ಈ ಕಾರಣಕ್ಕೆ ಈ ಸೀಸನ್​ 180 ದಿನಗಳ ಕಾಲ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತು. ಇದು ತುಂಬಾನೇ ದೀರ್ಘ ಎನಿಸಿರುವುದರಿಂದ ಮೊದಲ ಆರು ವಾರ ಈ ಶೋ ಅನ್ನು ಒಟಿಟಿಯಲ್ಲಿ ಪ್ರಸಾರ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

ದರ್ಶನ್​ ವಿಚಲಿತರಾಗಿದ್ದಾರೆ, ಅವರು ಚಿಕಿತ್ಸೆ ಪಡೆದುಕೊಳ್ಳಲಿ; ಇಂದ್ರಜಿತ್​ ಲಂಕೇಶ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada