ದರ್ಶನ್​ ವಿಚಲಿತರಾಗಿದ್ದಾರೆ, ಅವರು ಚಿಕಿತ್ಸೆ ಪಡೆದುಕೊಳ್ಳಲಿ; ಇಂದ್ರಜಿತ್​ ಲಂಕೇಶ್​

ದರ್ಶನ್​ ಅಸಂಬದ್ಧ ಪದಗಳನ್ನ ಬಳಕೆ ಮಾಡುವುದು ಬೇಡ. ಘಟನೆಯಿಂದ ನಟ ದರ್ಶನ್​ ಬಹಳ ವಿಚಲಿತರಾಗಿದ್ದಾರೆ. ಅವರು​ ಚಿಕಿತ್ಸೆಯನ್ನು ಪಡೆದುಕೊಳ್ಳಲಿ ಎಂದಿದ್ದಾರೆ ಇಂದ್ರಜಿತ್.


ಇಂದ್ರಜಿತ್ ಲಂಕೇಶ್ ಅವರು ತಮ್ಮ ಬಳಿ ದರ್ಶನ್ ಆಡಿಯೋ ಇದೆ ಎಂದಿದ್ದರು. ​ಗಂಡಸಾಗಿದ್ದರೆ ಅದನ್ನು ರಿಲೀಸ್​ ಮಾಡಲಿ ಎಂದು ಇಂದ್ರಜಿತ್​ ಲಂಕೇಶ್​ಗೆ ದರ್ಶನ್​ ಸವಾಲು ಹಾಕಿದ್ದರು. ಈ ವಿಚಾರಕ್ಕೆ ಕೌಂಟರ್​ ಕೊಡೋಕೆ ಇಂದ್ರಜಿತ್​  ಇಂದು ಸಂಜೆ (ಜುಲೈ 17) ಸುದ್ದಿಗೋಷ್ಠಿ ನಡೆಸಿದ್ದಾರೆ.

‘ನೀವು ಹಲ್ಲೆ ಮಾಡಿದ್ರೋ, ಇಲ್ಲವೋ ಎನ್ನುವ ಬಗ್ಗೆ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡೋಣ. ನಾನು ಸಂದರ್ಶನಕ್ಕೋಸ್ಕರ ದರ್ಶನ್​ಗೆ ಕರೆ ಮಾಡಿದ್ದೆ. ದರ್ಶನ್​ ಕ್ಷಮೆ ಕೇಳಿದ್ರೆ ದರ್ಶನ್​ ದೊಡ್ಡವರಾಗುತ್ತಿದ್ದರು. ಬಡವರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಸಿಗಬೇಕು. ದರ್ಶನ್​ ಅಸಂಬದ್ಧ ಪದಗಳನ್ನ ಬಳಕೆ ಮಾಡುವುದು ಬೇಡ. ಘಟನೆಯಿಂದ ನಟ ದರ್ಶನ್​ ಬಹಳ ವಿಚಲಿತರಾಗಿದ್ದಾರೆ. ಅವರು​ ಚಿಕಿತ್ಸೆಯನ್ನು ಪಡೆದುಕೊಳ್ಳಲಿ’ ಎಂದಿದ್ದಾರೆ ಇಂದ್ರಜಿತ್​. ಪೂರ್ತಿ ಮಾಹಿತಿ ವಿಡಿಯೋದಲ್ಲಿದೆ.

ಇದನ್ನೂ ಓದಿ: ಇಂದ್ರಜಿತ್​ ಲಂಕೇಶ್ ಸುದ್ದಿಗೋಷ್ಠಿ: ಗಂಡಸುತನ ಸಾಬೀತು ಮಾಡಲು ನೀವು ಹೋಟೆಲ್‌ಗೆ ಹೋಗಿದ್ರಾ? ದರ್ಶನ್​ ಹೇಳಿಕೆಗೆ ಇಂದ್ರಜಿತ್ ತಿರುಗೇಟು