ಇಂದ್ರಜಿತ್​ ಲಂಕೇಶ್ ಸುದ್ದಿಗೋಷ್ಠಿ: ಗಂಡಸುತನ ಸಾಬೀತು ಮಾಡಲು ನೀವು ಹೋಟೆಲ್‌ಗೆ ಹೋಗಿದ್ರಾ? ದರ್ಶನ್​ ಹೇಳಿಕೆಗೆ ಇಂದ್ರಜಿತ್ ತಿರುಗೇಟು

Indrajit Lankesh Press Meet: ಇಂದ್ರಜಿತ್ ಲಂಕೇಶ್ ಅವರು ತಮ್ಮ ಬಳಿ ದರ್ಶನ್ ಆಡಿಯೋ ಇದೆ ಎಂದಿದ್ದರು. ​ಗಂಡಸಾಗಿದ್ದರೆ ಅದನ್ನು ರಿಲೀಸ್​ ಮಾಡಲಿ ಎಂದು ಇಂದ್ರಜಿತ್​ ಲಂಕೇಶ್​ಗೆ ದರ್ಶನ್​ ಸವಾಲು ಹಾಕಿದ್ದರು. ಈ ವಿಚಾರಕ್ಕೆ ಕೌಂಟರ್​ ಕೊಡೋಕೆ ಇಂದ್ರಜಿತ್​ ಸುದ್ದಿಗೋಷ್ಠಿ ನಡೆಸಿದ್ದಾರೆ.

ಇಂದ್ರಜಿತ್​ ಲಂಕೇಶ್ ಸುದ್ದಿಗೋಷ್ಠಿ: ಗಂಡಸುತನ ಸಾಬೀತು ಮಾಡಲು ನೀವು ಹೋಟೆಲ್‌ಗೆ ಹೋಗಿದ್ರಾ? ದರ್ಶನ್​ ಹೇಳಿಕೆಗೆ ಇಂದ್ರಜಿತ್ ತಿರುಗೇಟು
ಇಂದ್ರಜಿತ್​ ಲಂಕೇಶ್​


ಇಂದ್ರಜಿತ್ ಲಂಕೇಶ್ ಅವರು ತಮ್ಮ ಬಳಿ ದರ್ಶನ್ ಆಡಿಯೋ ಇದೆ ಎಂದಿದ್ದರು. ​ಗಂಡಸಾಗಿದ್ದರೆ ಅದನ್ನು ರಿಲೀಸ್​ ಮಾಡಲಿ ಎಂದು ಇಂದ್ರಜಿತ್​ ಲಂಕೇಶ್​ಗೆ ದರ್ಶನ್​ ಸವಾಲು ಹಾಕಿದ್ದರು. ಈ ವಿಚಾರಕ್ಕೆ ಕೌಂಟರ್​ ಕೊಡೋಕೆ ಇಂದ್ರಜಿತ್​  ಇಂದು ಸಂಜೆ (ಜುಲೈ 17) ಸುದ್ದಿಗೋಷ್ಠಿ ನಡೆಸಿದ್ದಾರೆ.

‘ಘಟನೆ ಬಳಿಕ ದರ್ಶನ್ ವಿಚಲಿತರಾಗಿದ್ದಾರೆ. ನಟ ದರ್ಶನ್ ವಿಚಲಿತರಾಗಬೇಕಿಲ್ಲ. ದರ್ಶನ್‌ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದ್ರೆ ಸಾಕು. ಅವರ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಹೋಟೆಲ್‌ನಲ್ಲಿ ಸಿಬ್ಬಂದಿಗೆ ಹಲ್ಲೆ ಮಾಡಿದ್ದೀರೋ, ಇಲ್ಲವೋ? ಅರುಣಾ ಕುಮಾರಿಯನ್ನು ತೋಟಕ್ಕೆ ಕರೆಸಿಕೊಂಡಿದ್ದು ಏಕೆ?  ಈ ಪ್ರಶ್ನೆಗಳಿಗೆ ನಟ ದರ್ಶನ್ ಉತ್ತರಿಸಿದ್ರೆ ಸಾಕು’ ಎಂದಿದ್ದಾರೆ ಇಂದ್ರಜಿತ್​​.

‘ಲಾಯರ್‌ ಕೂರಿಸಿಕೊಂಡಿದ್ದು ಗಂಡಸುತನದ ಪ್ರಶ್ನೆಯಲ್ಲ. ಗಂಡಸುತನ ಪ್ರೂವ್ ಮಾಡಲು ದರ್ಶನ್​ ಹೋಟೆಲ್‌ಗೆ ಹೋಗಿದ್ದರಾ? ಈ ಡೈಲಾಗ್‌ಗಳೆಲ್ಲಾ ಸಿನಿಮಾದಲ್ಲಿ ತೋರಿಸಲಿ. ಸಾಕ್ಷ್ಯ ಬಿಡುಗಡೆ ಮಾಡಿದ್ರೆ ಮಾತ್ರ ಗಂಡಸುತನನಾ? ನನ್ನ ಬಳಿಯಿರುವ ಸಾಕ್ಷ್ಯ ಪೊಲೀಸರಿಗೆ ನೀಡುತ್ತೇನೆ’ ಎಂದಿದ್ದಾರೆ ಅವರು.

‘ಗೂಂಡಾಗಿರಿ ಎಂದು ಹೇಳಿದ್ದೆ,  ನಟ ದರ್ಶನ್ ಹೇಳಿದಂತೆ ನಾನು ಅಸಭ್ಯ ಪದ ಬಳಸಿಲ್ಲ. ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದಿದ್ದೆ. ನಿಮ್ಮ ಪದ ಬಳಕೆ, ಶಬ್ದ ನಿಮ್ಮ ಸಂಸ್ಕೃತಿಯನ್ನು ತಿಳಿಸುತ್ತದೆ.  ನಟ ದರ್ಶನ್​ ಡ್ರಗ್​​ ವಿಷಯ ಎಲ್ಲಿಗೆ ಬಂತು ಎಂದಿದ್ದಾರೆ. ಡ್ರಗ್​​ ವಿಷಯದಲ್ಲಿ ನಿಮಗೆ ತೊಂದರೆ ಆಯ್ತಾ ದರ್ಶನ್​?’ ಎಂದು ಇಂದ್ರಜಿತ್​ ಪ್ರಶ್ನೆ ಮಾಡಿದರು.

‘ದರ್ಶನ್ ಯುವ ಪ್ರತಿಭೆಯಾಗಿದ್ದಾಗಲೇ  ನಾನು ಸಿನಿಮಾ ಮಾಡಿದ್ದೆ. ನನ್ನ ಹಲವು ಸಿನಿಮಾಗಳಿಗೆ ಪ್ರಶಸ್ತಿ ಸಿಕ್ಕಿದೆ.
ನಾವು ಮಾತನಾಡುತ್ತಿರುವುದು ಸಿನಿಮಾ ವಿಷಯವಲ್ಲ. ನಾನು ಮಾಡಿದ್ದ ಸಿನಿಮಾ 25 ವಾರ ಪ್ರದರ್ಶನಗೊಂಡಿವೆ’ ಎಂದು ದರ್ಶನ್​ಗೆ ತಿರುಗೇಟು ನೀಡಿದರು ಇಂದ್ರಜಿತ್​.

‘ನೀವು ಹಲ್ಲೆ ಮಾಡಿದ್ರೋ, ಇಲ್ಲವೋ ಎನ್ನುವ ಬಗ್ಗೆ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡೋಣ. ನಾನು ಸಂದರ್ಶನಕ್ಕೋಸ್ಕರ ದರ್ಶನ್​ಗೆ ಕರೆ ಮಾಡಿದ್ದೆ. ದರ್ಶನ್​ ಕ್ಷಮೆ ಕೇಳಿದ್ರೆ ದರ್ಶನ್​ ದೊಡ್ಡವರಾಗುತ್ತಿದ್ದರು. ಬಡವರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಸಿಗಬೇಕು. ದರ್ಶನ್​ ಅಸಂಬದ್ಧ ಪದಗಳನ್ನ ಬಳಕೆ ಮಾಡುವುದು ಬೇಡ. ಘಟನೆಯಿಂದ ನಟ ದರ್ಶನ್​ ಬಹಳ ವಿಚಲಿತರಾಗಿದ್ದಾರೆ. ಅವರು​ ಚಿಕಿತ್ಸೆಯನ್ನು ಪಡೆದುಕೊಳ್ಳಲಿ’ ಎಂದಿದ್ದಾರೆ ಇಂದ್ರಜಿತ್​.

ಇದನ್ನೂ ಓದಿ: ‘ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ನನ್ನ ಆಡಿಯೋ ಕ್ಲಿಪ್ ಬಿಡಲಿ’; ದರ್ಶನ್ ಸವಾಲು

ರಾಜ್​ಕುಮಾರ್​ ಕುಟುಂಬಕ್ಕೂ ಇದಕ್ಕೂ ಸಂಬಂಧವಿಲ್ಲ; ಎಳೆಎಳೆಯಾಗಿ ಬಿಚ್ಚಿಟ್ಟ ದರ್ಶನ್​