ನನ್ನ ತೋಟದಲ್ಲಿ ಗಂಜಲು ವಾಸನೆ ಬಿಟ್ರೆ ಮತ್ತೇನಿದೆ? ದರ್ಶನ್ ನೇರಾನೇರ ಪ್ರಶ್ನೆ
ತಮ್ಮ ಫಾರ್ಮ್ಹೌಸ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಪಾರ್ಟಿ ಮಾಡಬೇಕು ಅಂದಿದ್ರೆ ಇದೇ ತೋಟದಲ್ಲಿ ಲಾನ್ಗಳನ್ನು ಮಾಡಿಸಿ, ರೂಂಗಳನ್ನು ಕಟ್ಟಿಸುತ್ತಿದೆ. ರೇವ್ಪಾರ್ಟಿ ಮಾಡುವ ಸ್ಥಳ ಹೀಗಿರುತ್ತಾ? ಎಂದು ಅವರು ಖಡಕ್ ಪ್ರಶ್ನಿಸಿದರು.
ದರ್ಶನ್ ಫಾರ್ಮ್ಹೌಸ್ನಲ್ಲಿ ರೇವ್ಪಾರ್ಟಿ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಹಾಗೇನಾದರೂ ರೇವ್ ಪಾರ್ಟಿ ಮಾಡ್ಬೇಕು ಅಂತಿದ್ರೆ ನಾನು ನನ್ನ ಫಾರ್ಮ್ಹೌಸ್ನ್ನು ಹೀಗೆ ಇಟ್ಟುಕೊಳ್ಳುತ್ತಿದ್ದೆನಾ? ನನ್ನ ಫಾರ್ಮ್ಹೌಸ್ನಲ್ಲಿ ಎಷ್ಟು ದನಕರುಗಳು ಇದೆ ಎಂದು ನೋಡಿದ್ದೀರಾ ? ನನ್ನ ತೋಟದಲ್ಲಿ ರೇವ್ ಪಾರ್ಟಿ ಮಾಡಲು ಆಗುತ್ತಾ? ಇಲ್ಲಿ ಬರುವ ಗಂಜಲಿನ ವಾಸನೆಯನ್ನು ಎಂದಾದರು ಉಸಿರಾಡಿದ್ದೀರಾ? ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಇಂದ್ರಜಿತ್ ಲಂಕೇಶ್ಗೆ ನೇರಾನೇರ ಸವಾಲು ಹಾಕಿದರು.
ಆದರೆ ತಮ್ಮ ಫಾರ್ಮ್ಹೌಸ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಪಾರ್ಟಿ ಮಾಡಬೇಕು ಅಂದಿದ್ರೆ ಇದೇ ತೋಟದಲ್ಲಿ ಲಾನ್ಗಳನ್ನು ಮಾಡಿಸಿ, ರೂಂಗಳನ್ನು ಕಟ್ಟಿಸುತ್ತಿದೆ. ರೇವ್ಪಾರ್ಟಿ ಮಾಡುವ ಸ್ಥಳ ಹೀಗಿರುತ್ತಾ? ಎಂದು ಅವರು ಖಡಕ್ ಪ್ರಶ್ನಿಸಿದರು. ಕಳೆದ ಸಲ ಡ್ರಗ್ ಕೇಸ್ ವಿಚಾರ ಮುನ್ನೆಲೆಗೆ ಬಂದಾಗ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೈಸೂರಿನಲ್ಲಿ ತೋಟ ಇರುವ ಸ್ಟಾರ್ ಒಬ್ಬರು ರೇವ್ ಪಾರ್ಟಿ ಮಾಡುತ್ತಾರೆ ಎಂದು ಅರೋಪಿಸಿದ್ದರು. ನಂತರ ಆ ಸ್ಟಾರ್ ನಾನು ಎಂದು ಗುಸುಗುಸು ಎದ್ದಿತ್ತು. ಮೈಸೂರಿನಲ್ಲಿ ಮತ್ಯಾವ ಸೆಲೆಬ್ರೆಟಿಯದ್ದು ಫಾರ್ಮ್ಹೌಸ್ ಇದೆ ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಫಾರ್ಮ್ಹೌಶ್ ಇರುವ ಕಾರಣ ನಾನು ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ದರ್ಶನ್ ಸುದ್ದಿಗೋಷ್ಠಿ: ದೊಡ್ಮನೆ ಆಸ್ತಿ ವಿವಾದದಲ್ಲಿ ದರ್ಶನ್ ಹೆಸರು: ಸ್ಪಷ್ಟನೆ ನೀಡಿದ ಡಿ ಬಾಸ್
‘ನಿಮ್ಮ ಪಯಣ ನರಕವಾಗಲಿ’: ಇಂದ್ರಜಿತ್ ಫೋಟೋ ಇಟ್ಟು ಶ್ರದ್ಧಾಂಜಲಿ ಕೋರಿದ ದರ್ಶನ್ ಅಭಿಮಾನಿಗಳು
(Challenging Star Darshan question Indrajit Lankesh Is there anything else in my garden to make rave party)
Published On - 5:52 pm, Sat, 17 July 21