ಮಾತನಾಡುವ ಭರದಲ್ಲಿ ಪ್ರೇಮ್ ಬಗ್ಗೆ ಸುಳ್ಳು ಹೇಳಿದ್ರಾ ದರ್ಶನ್? ಕಟುವಾಗಿ ಉತ್ತರಿಸಿದ ಜೋಗಿ ಪ್ರೇಮ್

ರಾಜ್​ ಫ್ಯಾಮಿಲಿ ಪ್ರಾಪರ್ಟಿ ವಿಚಾರ ಮುನ್ನೆಲೆಗೆ ಬಂದಿತ್ತು. ಈ ಬಗ್ಗೆ ಮಾತನಾಡಿದ್ದು ನಿರ್ಮಾಪಕ ಉಮಾಪತಿ ಶ್ರೀನಿವಾಸ್​. ಈ ವಿಚಾರದಲ್ಲಿ ಸ್ಪಷ್ಟನೆ ನೀಡೋಕೆ ದರ್ಶನ್​ ಇಂದು ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ದರ್ಶನ್​ ಪ್ರೇಮ್​ ಹೆಸರನ್ನು ಪ್ರಸ್ತಾಪ ಮಾಡಿದ್ದರು.

ಮಾತನಾಡುವ ಭರದಲ್ಲಿ ಪ್ರೇಮ್ ಬಗ್ಗೆ ಸುಳ್ಳು ಹೇಳಿದ್ರಾ ದರ್ಶನ್? ಕಟುವಾಗಿ ಉತ್ತರಿಸಿದ ಜೋಗಿ ಪ್ರೇಮ್
ಮಾತನಾಡುವ ಭರದಲ್ಲಿ ಪ್ರೇಮ್ ಬಗ್ಗೆ ಸುಳ್ಳು ಹೇಳಿದ್ರಾ ದರ್ಶನ್? ಕಟುವಾಗಿ ಉತ್ತರಿಸಿದ ಜೋಗಿ ಪ್ರೇಮ್
TV9kannada Web Team

| Edited By: Rajesh Duggumane

Jul 17, 2021 | 9:40 PM

ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್​ ಮಧ್ಯದ ತಿಕ್ಕಾಟದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಹೆಸರನ್ನು ಎಳೆದು ತಂದಿದ್ದರು ಡಿ ಬಾಸ್​. ಈ ಹೇಳಿಕೆಯಿಂದ ಪ್ರೇಮ್​ಗೆ ಬೇಸರವಾಗಿದೆ. ಈ ವಿಚಾರದಲ್ಲಿ ಜೋಗಿ ಪ್ರೇಮ್​ ಕಟುವಾಗಿ ಉತ್ತರ ನೀಡಿದ್ದಾರೆ.

ರಾಜ್​ ಫ್ಯಾಮಿಲಿ ಪ್ರಾಪರ್ಟಿ ವಿಚಾರ ಮುನ್ನೆಲೆಗೆ ಬಂದಿತ್ತು. ಈ ಬಗ್ಗೆ ಮಾತನಾಡಿದ್ದು ನಿರ್ಮಾಪಕ ಉಮಾಪತಿ ಶ್ರೀನಿವಾಸ್​. ಈ ವಿಚಾರದಲ್ಲಿ ಸ್ಪಷ್ಟನೆ ನೀಡೋಕೆ ದರ್ಶನ್​ ಇಂದು ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ದರ್ಶನ್​ ಪ್ರೇಮ್​ ಹೆಸರನ್ನು ಪ್ರಸ್ತಾಪ ಮಾಡಿದ್ದರು.

ಉಮಾಪತಿ ಭೇಟಿ ಆಗಿದ್ದು ಪ್ರೇಮ್​ ಅವರಿಂದ ಎಂದು ದರ್ಶನ್​ ಹೇಳಿಕೊಂಡಿದ್ದರು. ‘ಸಿನಿಮಾ ಮಾಡೋ ಉದ್ದೇಶದಿಂದ ನಾನು, ಉಮಾಪತಿ ಹಾಗೂ ಜೋಗಿ ಪ್ರೇಮ್​ ಒಟ್ಟಾಗಿದ್ದೆವು. ಜೋಗಿ ಪ್ರೇಮ್​ 100 ದಿನ ಕಾಲ್​ಶೀಟ್​ ಕೇಳಿದರು. ನಾನು ಯಾವುದೇ ನಿರ್ದೇಶಕರಿಗಾದರೂ 70 ದಿನಗಳ ಮೇಲೆ ಕಾಲ್​ಶೀಟ್​ ಕೊಡಲ್ಲ. ಪ್ರೇಮ್​ಗೆ 100 ದಿನ ಕಾಲ್​ಶೀಟ್​ ಕೊಡೋಕೆ ಅವರೇನು ದೊಡ್ಡ ಪುಡಂಗನೂ ಅಲ್ಲ. ಅವರಿಗೆ ಕೊಂಬೂ ಇಲ್ಲ’ ಎಂದಿದ್ದರು ದರ್ಶನ್​.

ಪ್ರೇಮ್​ ಹಾಗೂ ದರ್ಶನ್​ ಕರಿಯ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ದರ್ಶನ್​ ಈ ಹೇಳಿಕೆಗೆ ಪ್ರೇಮ್​ ಉತ್ತರಿಸಿದ್ದಾರೆ. ‘ದರ್ಶನ್ ಅವರೇ, ನಾನು ಕರಿಯ ಸಿನಿಮಾ ಮಾಡೇಕಾದರೆ ನಾನು ಯಾವ ಪುಡಂಗುನೂ ಆಗಿರಲಿಲ್ಲ, ನಂಗೆ ಕೊಂಬೂ ಇರಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನನ್ನನ್ನು ಓರ್ವ ಒಳ್ಳೆ ನಿರ್ದೇಶಕ ಎಂದು ಬೆನ್ನು ತಟ್ಟಿದ್ರು’ ಎಂದು ಪತ್ರ ಆರಂಭಿಸಿದ್ದಾರೆ ಪ್ರೇಮ್​.

‘ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಎಂದು ಬಿರುದು ಕೊಟ್ಟಾಗು ನನಗೆ ಕೊಂಬು ಬರಲಿಲ್ಲ.  ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್​​ನಲ್ಲಿ ಯಾವಾಗ ಚಿತ್ರ ಮಾಡುತ್ತೀರಿ ಅಂತ ಕೇಳ್ತಾನೆ ಇದ್ರು. ಇದರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್​​ನಲ್ಲಿ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್​​ನಲ್ಲಿ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು’ ಎಂದಿದ್ದಾರೆ ಪ್ರೇಮ್​.

‘ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ, ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ. ಆದ್ರೆ ನನ್ನ ‘ದಿ ವಿಲ್ಲನ್’ ಸಿನಿಮಾ ಲೇಟ್ ಆಗಿತ್ತು. ಹೀಗಾಗಿ, ನಾನೇ ಉಮಾಪತಿಯವರಿಗೆ ಬೇರೆ ನಿರ್ದೇಶಕರನ್ನು ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ. ನನ್ನ ಸಂಭಾವನೆಯನ್ನು ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾಗೆ ಹಾರೈಸಿದವನು ನಾನು. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು. ಎಲ್ಲರ ಹಾಗೇ ನಾನು ಖುಷಿ ಪಟ್ಟೆ’ ಎಂದಿದ್ದಾರೆ ಪ್ರೇಮ್​.

‘ಇವೆಲ್ಲದರ ಮಧ್ಯೆ ನನ್ನ ಹೆಸರು ಯಾಕೆ? ನಿರ್ದೇಶಕರು ಯಾವ್ ಪುಡಂಗಿ ಅಲ್ಲಾ, ಅವರಿಗೆ ಕೊಂಬು ಇರಲ್ಲ. ತೆರೆಮೇಲೆ ಒಬ್ಬ ನಟನನ್ನು ಹುಟ್ಟಾಕಿದಕ್ಕೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಎಂಬುದು ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದು ನಿಮ್ಮ ಗೊತ್ತು. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ಪ್ರೇಮ್​ ಪತ್ರ ಮುಗಿಸಿದ್ದಾರೆ.

ಇದನ್ನೂ ಓದಿ:  ದರ್ಶನ್​ ವಿಚಲಿತರಾಗಿದ್ದಾರೆ, ಅವರು ಚಿಕಿತ್ಸೆ ಪಡೆದುಕೊಳ್ಳಲಿ; ಇಂದ್ರಜಿತ್​ ಲಂಕೇಶ್​

ಇಂದ್ರಜಿತ್​ ಲಂಕೇಶ್ ಸುದ್ದಿಗೋಷ್ಠಿ: ಗಂಡಸುತನ ಸಾಬೀತು ಮಾಡಲು ನೀವು ಹೋಟೆಲ್‌ಗೆ ಹೋಗಿದ್ರಾ? ದರ್ಶನ್​ ಹೇಳಿಕೆಗೆ ಇಂದ್ರಜಿತ್ ತಿರುಗೇಟು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada