ನವರಸನಾಯಕ ಜಗ್ಗೇಶ್ ಅವರ ಬಾಳ ಪಯಣವನ್ನು ಚಿತ್ರಗಳಲ್ಲಿ ನೋಡುವ ಕುತೂಹಲವಿದೆಯೇ?; ಇಲ್ಲಿದೆ ನೋಡಿ

Jaggesh: ಜಗ್ಗೇಶ್ ಸಿನಿ ಪಯಣದ ಚಿತ್ರಾವಳಿ ಇಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಅವರು ಇತ್ತೀಚೆಗೆ ತಾವು ಚಿತ್ರರಂಗದಲ್ಲಿ ಬೆಳೆದು ಬಂದ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಬಾಳ ಪಯಣ ಚಿತ್ರಗಳಲ್ಲಿ ತೆರೆದಿಡಲಾಗಿದೆ.

Jul 18, 2021 | 12:13 PM
TV9kannada Web Team

| Edited By: shivaprasad.hs

Jul 18, 2021 | 12:13 PM

ಜಗ್ಗೇಶ್ ಅವರು ಹತ್ತು ತಿಂಗಳ ಮಗುವಿದ್ದಾಗ(1964)

ಜಗ್ಗೇಶ್ ಅವರು ಹತ್ತು ತಿಂಗಳ ಮಗುವಿದ್ದಾಗ(1964)

1 / 16
ಜಗ್ಗೇಶ್ ಯುವಕನಾಗಿದ್ದಾಗ ತೆಗೆಸಿಕೊಂಡ ಈ ಚಿತ್ರವನ್ನು ಅವರೇ ಸ್ವತಃ ಹಂಚಿಕೊಂಡಿದ್ದರು.

ಜಗ್ಗೇಶ್ ಯುವಕನಾಗಿದ್ದಾಗ ತೆಗೆಸಿಕೊಂಡ ಈ ಚಿತ್ರವನ್ನು ಅವರೇ ಸ್ವತಃ ಹಂಚಿಕೊಂಡಿದ್ದರು.

2 / 16
ಸಿನಿ ಪಯಣದ ಪ್ರಾರಂಭದ ಕಾಲಘಟ್ಟದಲ್ಲಿ ಜಗ್ಗೇಶ್ ತೆಗೆಸಿಕೊಂಡಿರುವ ಚಿತ್ರ. ಇದನ್ನು ಸ್ವತಃ ಜಗ್ಗೇಶ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಇಬ್ಬನಿ ಕರಗಿತು ಚಿತ್ರದಿಂದ. ಜಗ್ಗೇಶ್ ಅವರ ಊರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ.

3 / 16
ಜಗ್ಗೇಶ್ ‘ಬುಲೆಟ್ ಪೋಸ್’

ಹಾಸ್ಯ ಪ್ರಧಾನ ಚಿತ್ರಗಳಿಗೆ ಹೆಸರಾದ ಜಗ್ಗೇಶ್ ನಾಯಕ ನಟನಾಗಿ ಮೊದಲು ಅಭಿನಯಿಸಿದ್ದು ‘ತರ್ಲೆ ನನ್ ಮಗ’ ಚಿತ್ರದಲ್ಲಿ. ಅದನ್ನು ನಿರ್ದೇಶಿಸಿದ್ದು ಉಪೇಂದ್ರ.

4 / 16
ಜಗ್ಗೇಶ್ ಫೇಸ್​​ಬುಕ್​ನಲ್ಲಿ ಹಂಚಿಕೊಂಡ ಹಳೆಯ ನೆನಪಿನ ಒಂದು ಚಿತ್ರ

ಜಗ್ಗೇಶ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ತಾವು ಚಿತ್ರರಂಗದಲ್ಲಿ ಪಟ್ಟ ಕಷ್ಟ, ನಿರ್ದೇಶಕ, ನಿರ್ಮಾಪಕರ ಸಹಾಯದಿಂದ ಬೆಳೆದು ನಿಂತ ಪರಿಯನ್ನು ಬರೆಯುತ್ತಾ, ಈ ಚಿತ್ರ ಹಂಚಿಕೊಂಡಿದ್ದದರು.

5 / 16
‘ಹಾವಾದ ಹೂವು’ ಚಿತ್ರಕ್ಕೆ ನಿರ್ದೇಶನ ತಂಡದಲ್ಲಿ ಕೆಲಸ ಮಾಡುವಾಗ ನಟ ಕೋಕಿಲ ಮೋಹನ್ ಜೊತೆ ತೆಗೆಸಿಕೊಂಡ ಚಿತ್ರ(1980)

ನಿರ್ದೇಶನ ತಂಡದಲ್ಲಿ ಕೆಲಸ ಮಾಡುತ್ತಾ ಸಿನಿರಂಗದಲ್ಲಿ ಕಾಲೂರುತ್ತಿದ್ದಾಗ ಜಗ್ಗೇಶ್ ತೆಗೆಸಿಕೊಂಡ ಚಿತ್ರವಿದು.

6 / 16
‘ಸೂಪರ್​ ನನ್ ಮಗ’ ಚಿತ್ರದ ಪ್ರಾರಂಭದಲ್ಲಿ (1992)

1992ರಲ್ಲಿ ‘ಸೂಪರ್ ನನ್ ಮಗ’ ಚಿತ್ರೀಕರಣದಲ್ಲಿ ತೆಗೆದ ಚಿತ್ರವಿದು. ಇದಕ್ಕೆ ಜಗ್ಗೇಶ್ ಅವರ ತಂದೆ ತಾಯಿ ಬಂದು ಹರಸಿದ್ದರು. ತರ್ಲೆ ನನ್ ಮಗ ಚಿತ್ರದ ಯಶಸ್ಸು ಈ ಚಿತ್ರಕ್ಕೆ ಪ್ರೇರಣೆ ಅನ್ನಬಹುದು.

7 / 16
ಕನ್ನಡದ ನಟನಾ ದಿಗ್ಗಜರೊಂದಿಗೆ ಜಗ್ಗೇಶ್- ಚಿತ್ರದಲ್ಲಿ ಅಂಬರೀಶ್, ರವಿಚಂದ್ರನ್ ಹಾಗೂ ಶಶಿಕುಮಾರ್ ಅವರೊಂದಿಗೆ

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದಿವಂಗತ ಅಂಬರೀಶ್, ಕನಸುಗಾರ ಎಂದೇ ಎಲ್ಲರಿಂದ ಕರೆಯಲ್ಪಡುವ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಶಶಿಕುಮಾರ್ ಅವರೊಂದಿಗೆ ಜಗ್ಗೇಶ್.

8 / 16
ವರನಟ ಡಾ.ರಾಜ್​ಕುಮಾರ್ ಜೊತೆಯಲ್ಲಿ ನವರಸನಾಯಕ ಜಗ್ಗೇಶ್ ಸಂಭಾಷಣೆ

ಡಾ.ರಾಜ್​ಕುಮಾರ್ ಅವರನ್ನು ಅಪಾರವಾಗಿ ಗೌರವಿಸುವ ಜಗ್ಗೇಶ್- ರಾಜ್​ಕುಮಾರ್ ಅವರಿಂದ ಆಶೀರ್ವಾದ ಪಡೆದು ಚಿತ್ರರಂಗದಲ್ಲಿ ನಟನಾಗಬೇಕು ಎಂಬ ಒಂದೇ ಗುರಿಯೊಂದಿಗೆ ಚಿತ್ರರಂಗಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

9 / 16
ರಜನೀಕಾಂತ್ ಅವರೊಂದಿಗೆ

1980ರಲ್ಲಿ ಚಿತ್ರರಂಗ ಪ್ರವೇಶಿಸಿದ ಜಗ್ಗೇಶ್ ನಂತರ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಸಾಧನೆಯ ಶಿಖರ ತಲುಪಿದವು.

10 / 16
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆಯಲ್ಲಿ ಜಗ್ಗೇಶ್

ಚಿತ್ರರಂಗದ ಹಿರಿಯರೊಂದಿಗೆ ಜಗ್ಗೇಶ್ ಅವರಿಗೆ ಎಂದಿಗೂ ಆಪ್ತ ಒಡನಾಟವಿತ್ತು. ಅದನ್ನೆಲ್ಲಾ ಆಗಾಗ ಜಗ್ಗೇಶ್ ಮೆಲುಕು ಹಾಕುತ್ತಿರುತ್ತಾರೆ. ಹಾಸ್ಯ ನಟನಾಗಿದ್ದರೂ ತಮ್ಮ ವಿಭಿನ್ನ ಬಗೆಯ ಪಾತ್ರ ಪೋಷಣೆಯಿಂದ ಅವರು ಸ್ಟಾರ್ ಪಟ್ಟವನ್ನು ಸಂಪಾದಿಸಿದವರು.

11 / 16
ಜಗ್ಗೇಶ್ ಮತ್ತು ಪರಿಮಳಾ ಮದುವೆಯ ಚಿತ್ರ(1984)

ಜಗ್ಗೇಶ್ ಅವರ ಮದುವೆಯದ್ದೂ ಒಂದು ಕುತೂಹಲಕರ ಕತೆ. ಪರಿಮಳಾ ಅವರ ತಂದೆ ರಾಜಕಾರಣಿಯಾಗಿದ್ದು, ಈರ್ವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿತ್ತು. ತೀರ್ಪು ನೀಡಿದ ನ್ಯಾ.ಪಿಎನ್​ ಭಗವತಿ ಅವರನ್ನು ಜಗ್ಗೇಶ್ ದಂಪತಿ ಸ್ಮರಿಸುತ್ತಿರುತ್ತಾರೆ.

12 / 16
ಪುತ್ರ ಗುರುರಾಜ್ ಜೊತೆಯಲ್ಲಿ ಜಗ್ಗೇಶ್ ಮತ್ತು ಪರಿಮಳಾ ದಂಪತಿ

ಪುತ್ರನಿಗೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ತೆಗೆಸಿಕೊಂಡ ಈ ಚಿತ್ರವನ್ನು ಪರಿಮಳಾ ಅವರು ಮಗನ ಒಂದು ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಂಚಿಕೊಂಡಿದ್ದರು.

13 / 16
ಜಗ್ಗೇಶ್ ಪತ್ನಿ ಪರಿಮಳಾಗೆ ಗೌರವ ಡಾಕ್ಟರೇಟ್ ದೊರೆತ ಸಂದರ್ಭದಲ್ಲಿ ಜಗ್ಗೇಶ್ ತಮ್ಮ ಇಬ್ಬರು ಪುತ್ರರು, ಸೊಸೆ ಹಾಗೂ ಮೊಮ್ಮಗನೊಂದಿಗೆ

ಜಗ್ಗೇಶ್ ಕುಟುಂಬ- ಪುತ್ರರಾದ ಗುರುರಾಜ್- ಯತಿರಾಜ್ ಹಾಗೂ ಸೊಸೆ ಕ್ಯಾಟಿ ಪೇಯ್ಲ್(ಗುರುರಾಜ್ ಪತ್ನಿ) ಮತ್ತು ಮೊಮ್ಮಗ

14 / 16
ಜಗ್ಗೇಶ್ ಸಿನಿ ಜೀವನದ ವಿಭಿನ್ನ ಚಿತ್ರ ನೀರ್ದೋಸೆಯ ಒಂದು ಚಿತ್ರ

ಚಿತ್ರಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಜಗ್ಗೇಶ್ ವೃತ್ತಿ ಜೀವನದ ಮತ್ತೊಂದು ವಿಭಿನ್ನ ಚಿತ್ರ ‘ನೀರ್ದೋಸೆ’. ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರ ಒಳ್ಳೆಯ ಹೆಸರು ಗಳಿಸಿತ್ತು.

15 / 16
ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ತೀರ್ಪುಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ಜಗ್ಗೇಶ್

ನಟನಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಜಗ್ಗೇಶ್ ಪ್ರಸ್ತುತ ಕನ್ನಡದ ಚಾನೆಲ್​ ಒಂದರಲ್ಲಿ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ. ತಮ್ಮ ಕಾಮಿಡಿ ಟೈಮಿಂಗ್​ನಿಂದಾಗಿ ಕಿರುತೆರೆಯಲ್ಲೂ ಅವರಿಗೆ ಅಪಾರ ಅಭಿಮಾನಿ ಬಳಗ ಸೃಷ್ಟಿಯಾಗಿದೆ.

16 / 16

Follow us on

Most Read Stories

Click on your DTH Provider to Add TV9 Kannada