AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿಗೆ ಹೋದ ಉಮಾಪತಿ; ಬಾಲಾಜಿ ದರ್ಶನ ನಂತರ ದರ್ಶನ್​ ಸವಾಲಿಗೆ ಉತ್ತರ?

ಕುಟುಂಬ ಸಮೇತ ಬಾಲಾಜಿ ದರ್ಶನಕ್ಕೆ ತೆರಳಿರುವ ಉಮಾಪತಿ ಶ್ರೀನಿವಾಸ ಗೌಡ ನಾಳೆ ಮಧ್ಯಾಹ್ನ 2.30ರ ಸುಮಾರಿಗೆ ಬೆಂಗಳೂರಿಗೆ ಹಿಂದಿರುಗಲಿದ್ದು, ಮರಳಿ ಬಂದ ನಂತರ ಆಸ್ತಿ ವಿಚಾರವಾಗಿ ದರ್ಶನ್ ಎಸೆದಿರುವ ಸವಾಲಿಗೆ ಪ್ರತ್ಯುತ್ತರ ನೀಡಲಿದ್ದಾರಾ ಎಂಬ ಕುತೂಹಲ ಮೂಡಿದೆ.

ತಿರುಪತಿಗೆ ಹೋದ ಉಮಾಪತಿ; ಬಾಲಾಜಿ ದರ್ಶನ ನಂತರ ದರ್ಶನ್​ ಸವಾಲಿಗೆ ಉತ್ತರ?
ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ (ಫೈಲ್ ಚಿತ್ರ)
TV9 Web
| Updated By: shruti hegde|

Updated on: Jul 18, 2021 | 10:49 AM

Share

ಬೆಂಗಳೂರು: ನಟ ದರ್ಶನ್ (Actor Darshan)​ ಕುರಿತಾದ ವಿವಾದ ಸದ್ಯ ಬೇರೆ ಬೇರೆ ಆಯಾಮಗಳನ್ನು ಪಡೆದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಆಸ್ತಿ ವಿಚಾರವನ್ನೂ ಪ್ರಸ್ತಾಪಿಸಿ ವಿವಾದಕ್ಕೆ ಹೊಸ ತಿರುವು ನೀಡಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ (Umapathy Srinivas Gowda) ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕುಟುಂಬ ಸಮೇತ ಬಾಲಾಜಿ ದರ್ಶನಕ್ಕೆ ತೆರಳಿರುವ ಉಮಾಪತಿ ಶ್ರೀನಿವಾಸ ಗೌಡ ನಾಳೆ ಮಧ್ಯಾಹ್ನ 2.30ರ ಸುಮಾರಿಗೆ ಬೆಂಗಳೂರಿಗೆ ಹಿಂದಿರುಗಲಿದ್ದು, ಮರಳಿ ಬಂದ ನಂತರ ಆಸ್ತಿ (Property) ವಿಚಾರವಾಗಿ ದರ್ಶನ್ ಎಸೆದಿರುವ ಸವಾಲಿಗೆ (Challenge) ಪ್ರತ್ಯುತ್ತರ ನೀಡಲಿದ್ದಾರಾ ಎಂಬ ಕುತೂಹಲ ಮೂಡಿದೆ.

ಆಸ್ತಿ ವಿಚಾರವಾಗಿ ಮಾತನಾಡಿದ್ದ ಉಮಾಪತಿ, ನಟ ಪುನೀತ್ ರಾಜ್​ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್​ ಅವರಿಗೆ ಸೇರಿದ್ದ ಆಸ್ತಿ ಖರೀದಿಸಿದ್ದೆ. ಆ ಆಸ್ತಿಯನ್ನು ದರ್ಶನ್ ಕೇಳಿದ್ದರು. ನಾನು ಕೊಡಲ್ಲ ಅಂದಿದ್ದೆ. ದರ್ಶನ್ ಸರ್​ ಸಹ ಅದಕ್ಕೆ ಒಪ್ಪಿಗೆ ನೀಡಿ ವಿಚಾರ ಕೈಬಿಟ್ಟಿದ್ದರು ಎಂದು ಹೇಳಿದ್ದರು. ಪ್ರಾಪರ್ಟಿ ವಿಚಾರವನ್ನು ನಾನು ಮತ್ತು ದರ್ಶನ್ ಮಾತನಾಡಿಕೊಳ್ಳುತ್ತೇವೆ. ಪ್ರಾಪರ್ಟಿ ಬೇಕೇ ಬೇಕು ಎಂದು ದರ್ಶನ್ ಕೇಳುವುದಿಲ್ಲ. ದರ್ಶನ್​ ಅವರಿಗೆ ನಾನು ಬೇರೆ ವ್ಯವಸ್ಥೆ ಮಾಡುವುದಾಗಿ ಈಗಾಗಲೇ ಹೇಳಿದ್ದೇನೆ ಎಂದು ತಿಳಿಸಿದ್ದರು.

ನಾನು ಆ ಆಸ್ತಿಯನ್ನು ದುಡ್ಡು ಕೊಟ್ಟು ಖರೀದಿಸಿದ್ದೇನೆ. ಅದು ದೊಡ್ಮನೆಯವರದ್ದು. ಪ್ರಾಪರ್ಟಿ ಕೊಟ್ಟರೆ, ಬೇರೆಯದ್ದೇ ಆಯಾಮ ಪಡೆಯುತ್ತದೆ. ದೊಡ್ಮನೆಯವರ ಪ್ರಾಪರ್ಟಿ ಮತ್ತೊಬ್ಬರಿಗೆ ಮಾರಿದರೆ ಶೋಭೆ ತರುವುದಿಲ್ಲ. ಹಾಗಾಗಿ ನಾನು ದೊಡ್ಮನೆ ಪ್ರಾಪರ್ಟಿಯನ್ನ ಮಾರಾಟ ಮಾಡಿಲ್ಲ ಎಂದು ಉಮಾಪತಿ ಸ್ಪಷ್ಟನೆ ನೀಡಿದ್ದರು.

ಆದರೆ, ಅದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್, ನನಗೂ ಉಮಾಪತಿಗೂ 2016ರಿಂದ ಪರಿಚಯ. ಪುನೀತ್​ ಆಸ್ತಿಯನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಉಮಾಪತಿ ಹೇಳಿದ್ದರು. ನಾನು ಅದನ್ನು ಕೊಡೋ ಆಲೋಚನೆ ಇದೆಯೇ ಅಂತ ಕೇಳಿದ್ದೆ. ಓಕೆ ಅಂದಿದ್ದರು. ಈಗ ಅದನ್ನು ಕೊಡಲ್ಲ ಅಂತಿದ್ದಾರೆ. ಹಾಗಾದ್ರೆ ಇಷ್ಟು ವರ್ಷ ಬಾಡಿಗೆ ಯಾಕೆ ನಂಗೆ ತಂದು ಕೊಡ್ತಾ ಇದ್ರು? ಇದಕ್ಕೆ ಉಮಾಪತಿ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದರು.

ಇದೀಗ ತಿರುಪತಿಗೆ ಹೋಗಿರುವ ಉಮಾಪತಿ ಬಾಲಾಜಿ ದರ್ಶನ ಪಡೆದ ನಂತರ ದರ್ಶನ್​ ಸವಾಲಿಗೆ ಉತ್ತರ ನೀಡುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನೊಂದೆಡೆ, ಹಲ್ಲೆ ಆರೋಪ ಕೇಳಿ ಬಂದಾಗಿನಿಂದ ಮೈಸೂರಿನಲ್ಲೇ ಇದ್ದ ದರ್ಶನ್ ಇಂದು ಮುಂಜಾನೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಟಿ.ನರಸೀಪುರ ರಸ್ತೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ದರ್ಶನ್, ಫಾರ್ಮ್ ಹೌಸ್ ನಿಂದ ಸ್ವತಃ ಕಾರು ಚಾಲಾಯಿಸಿಕೊಂಡು ಬೆಂಗಳೂರಿನತ್ತ ಹೊರಟಿದ್ದಾರೆ.

ಇದನ್ನೂ ಓದಿ:

ದರ್ಶನ್- ಉಮಾಪತಿ ಭಿನ್ನಾಭಿಪ್ರಾಯಕ್ಕೆ ಆಸ್ತಿ ವಿಚಾರ ಕಾರಣವೇ?; ಉಮಾಪತಿ ಹೇಳಿದ್ದೇನು?

ದರ್ಶನ್​ ವಿಚಲಿತರಾಗಿದ್ದಾರೆ, ಅವರು ಚಿಕಿತ್ಸೆ ಪಡೆದುಕೊಳ್ಳಲಿ; ಇಂದ್ರಜಿತ್​ ಲಂಕೇಶ್​

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ