ದರ್ಶನ್-ಇಂದ್ರಜಿತ್ ಎಪಿಸೋಡ್ ಸಮ್ಮುಖದಲ್ಲಿ ಹಿರಿಯ ನಟ ಜಗ್ಗೇಶ್ ನೀಡಿರುವ ಸಚಿತ್ರ ಪ್ರತಿಕ್ರಿಯೆ ಏನು? ಕೊಟ್ಟ ಸಂದೇಶ ಏನು? ಹಂಚಿಕೊಂಡ ಚಿತ್ರಗಳು ಎಂಥವು?

ನಟ ಜಗ್ಗೇಶ್ ಅವರು ತಾವು ಬೆಳೆದು ಬಂದ ಕನ್ನಡ ಚಿತ್ರೋದ್ಯಮದೆಡೆಗಿನ ಕಕ್ಕುಲತೆಯಿಂದ ತಮ್ಮ ಭಾರವಾದ ಭಾವನೆಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮತ್ತು ದರ್ಶನ್ ನಡುವೆ ನಡೆದ ಇತ್ತೀಚಿನ ಕಹಿ ಪ್ರಕರಣವನ್ನು ಮರೆತು, ದರ್ಶನ್ ಜೊತೆಗಿನ ಫೋಟೋ ಸಹ ಹಂಚಿಕೊಂಡಿದ್ದಾರೆ.

ದರ್ಶನ್-ಇಂದ್ರಜಿತ್ ಎಪಿಸೋಡ್ ಸಮ್ಮುಖದಲ್ಲಿ ಹಿರಿಯ ನಟ ಜಗ್ಗೇಶ್ ನೀಡಿರುವ ಸಚಿತ್ರ ಪ್ರತಿಕ್ರಿಯೆ ಏನು? ಕೊಟ್ಟ ಸಂದೇಶ ಏನು? ಹಂಚಿಕೊಂಡ ಚಿತ್ರಗಳು ಎಂಥವು?
ಹಿರಿಯ ನಟ ಜಗ್ಗೇಶ್
TV9kannada Web Team

| Edited By: Ayesha Banu

Jul 18, 2021 | 9:48 AM

ಮೂರು ದಿನಗಳಿಂದ ಕನ್ನಡ ಚಿತ್ರ ರಂಗ ಒಡೆದ ಮನೆಯಂತಾಗಿದೆ. ಮನೆ ಮಕ್ಕಳು ಹಾದಿಬೀದಿಯಲಿ ಜಗಳವಾಡುತ್ತಿದ್ದರೆ. ಬುದ್ಧಿವಾದ ಹೇಳಲು ಮನೆಯ ಹಿರಿಯ ಇಲ್ಲವೇ ಎಂಬ ಕೊರಗು ಕಾಡತೊಡಗಿದೆ. ಈ ಸಂದರ್ಭದಲ್ಲಿ ನಟ ಜಗ್ಗೇಶ್ ಅವರು ತಾವು ಬೆಳೆದು ಬಂದ ಕನ್ನಡ ಚಿತ್ರೋದ್ಯಮದೆಡೆಗಿನ ಕಕ್ಕುಲತೆಯಿಂದ ತಮ್ಮ ಭಾರವಾದ ಭಾವನೆಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮತ್ತು ದರ್ಶನ್ ನಡುವೆ ನಡೆದ ಇತ್ತೀಚಿನ ಕಹಿ ಪ್ರಕರಣವನ್ನು ಮರೆತು, ದರ್ಶನ್ ಜೊತೆಗಿನ ಫೋಟೋ ಸಹ ಹಂಚಿಕೊಂಡಿದ್ದಾರೆ. ನೀವೇ ಓದ್ಕಳ್ಳೀ ಹಿರಿಯ ನಟ ಜಗ್ಗೇಶ್ ಅವರ ಮನದಾಳದ ಮಾತು, ಸ್ಯಾಂಡಲ್ ವುಡ್ ಬಗೆಗಿನ ಅವರ ಕಳಕಳಿ ಇಲ್ಲಿದೆ:

ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ ಹೋಬಳಿಯ, ಆನಡುಗು ಎಂಬ ಸಣ್ಣ ಗ್ರಾಮದ, ಸಣ್ಣ ಕುಟುಂಬದ, ಹಳ್ಳಿಹುಡುಗ ನಾನು ಈಶ್ವರ್ ಗೌಡ ಜಗ್ಗೇಶ..! ನನಗೆ ಇದ್ದ ಆಸೆ ರಾಜಕುಮಾರ್ ಕಂಡು ಮಾತಾಡಿಸಿ ಆಶೀರ್ವಾದ ಪಡೆದು ಸಿನಿಮಾ ನಟನಾಗ ಬೇಕು ಎಂಬುದು ಒಂದೆ ಗುರಿ! 1980ಕ್ಕೆ ಆ ಕಾರ್ಯ ಶುರು, ಆಗ ಹೇಗಿದ್ದೆ ನಾನು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ! ಆ ಮುಖಕ್ಕೆ ಆಕಾಲಕ್ಕೆ ಸಿನಿಮಾ ನಟ ಆಗುವ ಕನಸ್ಸು? ಈಗಿನ ಜಗ್ಗೇಶನ ಮರೆತು ಯೋಚಿಸಿ ಇದು ಸಾಧ್ಯವಾ?

jaggesh

ಜಗ್ಗೇಶ್

ಆಗ ಅಪ್ಪ-ಅಮ್ಮ ಬಂಧು ಮಿತ್ರರು ಹೇಳಿದ್ದು, ಉಗಿದದ್ದು ಹೀಗೆ ಮುಚ್ಕೊಂಡು ಅನ್ನ ಹುಡ್ಕೋ ಕ್ಯಾಮೆ ನೋಡು!ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗಮುಂಡೆದೆ ಎಂದು! ಗುರುಹಿಂದೆ ಗುರಿಮಂದೆ ಹಠ ಬಿಡಲಿಲ್ಲಾ ಗಾಂಧಿನಗರ ಅಲೆದು ಚಪ್ಪಲಿಸವೆಸಿ ದಡಮುಟ್ಟಿದೆ ಎಂದುಬಿಟ್ಟರೆ ಆತ್ಮ ಧ್ರೋಹ ಆಗಿಬಿಡುತ್ತದೆ ಕಾರಣ ದಡಮುಟ್ಟಿಸಿದ್ದು ಅಂದಿನ ನಿರ್ದೇಶಕರು ನಿರ್ಮಾಪಕರು ಮಾಧ್ಯಮಮಿತ್ರರು ಹಾಗು ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು! ಹೇಳಿ ಹೇಗಿದ್ದರಬೇಕು ಅಪಮಾನ ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು! ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೆ ಬರಹಮಾಧ್ಯಮ ಮಾತ್ರ! ನೆನಪಿಡಿ ಇಂದು ನೂರಾರು ಮಾಧ್ಯಮ, ಅಂಗೈಯಲ್ಲೆ ಆಕಾಶ ತೋರಿ ಹತ್ತಾರುವರ್ಷ ಸಾಧನೆ ಕ್ಷಣಮಾತ್ರದಲ್ಲೆ ಅನುಮಾನದಿಂದ ಸಾಧಕನ ನೋಡುವಂತ ಮಾಯಾಜಾಲ ಸಾಮಾಜಿಕ ಜಾಲತಾಣ, ಸಿಕ್ಕಸಿಕ್ಕವರ ಕೈಲಿ ಈ ಜಾಲಸಿಕ್ಕು ವಯಸ್ಸು ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವುದು ವಿಪರ್ಯಾಸ ದಿನಗಳು! ಇಂದಿನ ಸಾರ್ವಜನಿಕ ಜೀವನ public toilet ನಂತೆ ಆಗಿಬಿಟ್ಟಿದೆ! ಆದರು ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕು!

ಈಗ ವಿಷಯಕ್ಕೆ ಬರುವೆ ಈ ಅಕ್ಷರ ಠಂಕಿಸಿದ್ದಕ್ಕೆ ಉಧ್ಯಮದ ಕಲಾಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ! ಮಾನ್ಯರೆ ನಶ್ವರ ಬಣ್ಣದ ಬದುಕು!ಕಲಾವಿಧನ ಜೀವನ ನಡೆಯುವವರೆಗೆ ನಾಣ್ಯ ಮಿಕ್ಕಂತೆ ಸವಕಲು! ಎಲ್ಲಿಯವರೆಗು ಕಲಾವಿದ ವರ್ಷಕ್ಕೆ ಮಾತ್ರ ಹೊರಬರುವ ಊರ ಮೆರೆದೇವರಂತೆ ಹೊರ ಬರಬೇಕು, ಆಗ ದೇವರಪರ ಅದ್ಭುತ ಅನನ್ಯ! ದಿನ ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲಾ! ರಾಜನಾಗಲಿ ಸೇವಕನಾಗಲಿ ಜಗಳ ಘರ್ಷಣೆ ಸಹಜ! ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು! ಹಾಗೆ ಅನ್ಯತ ಭಾವಿಸದೆ ನನ್ನ ಮಾತು ಆಲಿಸಬೇಕು ಕಲಾಬಂಧುಗಳು! ಆತ್ಮೀಯ ಮಾಧ್ಯಮಮಿತ್ರರು ಕಲಾರಂಗದ ನಮ್ಮಕಾಯಕ ಜನರಿಗೆ ತಲುಪಿಸೋ ನಾವಿಕರು, ನಾವು ನೀವು ದೇಹದ ಎರಡುಕಣ್ಣಂತೆ ಯಾವುದಕ್ಕು ನೋವಾದರು ನಮಗೆ ನಷ್ಟ! ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿಚರ್ಚೆಗೆ ವಿಷಯವಾಗದಿರಲಿ ವಿನಂತಿ! ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ! ಉಧ್ಯಮದ ಹಿರಿಯರು ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಒಡೆದಮನಗಳ ಸರಿಮಾಡಿ ಎಂದು ಪ್ರಾರ್ಥನೆ ಸರ್ವೆಜನಃಸುಖಿನೋಭವ ಎಂದು ಫೇಸ್ಬುಕ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

jaggesh

ಜಗ್ಗೇಶ್, ಅಂಬರೀಶ್, ರವಿಚಂದ್ರನ್, ಶಶಿಕುಮಾರ್

jaggesh

ಅಣ್ಣಾವ್ರ ಜೊತೆಗಿದ್ದ ಸವಿ ನೆನಪು ಹಂಚಿಕೊಂಡ ಜಗ್ಗೇಶ್

jaggesh

ರಜನಿಕಾಂತ್ ಜೊತೆಗಿನ ಜಗ್ಗೇಶ್ ಆ ದಿನಗಳು

ಇದನ್ನು ಓದಿ: ಮಾತನಾಡುವ ಭರದಲ್ಲಿ ಪ್ರೇಮ್ ಬಗ್ಗೆ ಸುಳ್ಳು ಹೇಳಿದ್ರಾ ದರ್ಶನ್? ಕಟುವಾಗಿ ಉತ್ತರಿಸಿದ ಜೋಗಿ ಪ್ರೇಮ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada