ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

ಜೈಲು ಸೇರಿದ ನಂತರದಲ್ಲಿ ಚಕ್ರವರ್ತಿ ಚಂದ್ರಚೂಡ್​ ಕೂಗಾಟ ನಡೆಸಿದ್ದಾರೆ. ಐದು ಸ್ಪರ್ಧಿಗಳು ನನಗೆ ಕಳಪೆ ಎಂದು ನೀಡಿದ್ದಾರೆ. ಇದನ್ನು ನಾನು ಒಪ್ಪೋದಿಲ್ಲ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?
ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?
TV9kannada Web Team

| Edited By: Rajesh Duggumane

Jul 17, 2021 | 3:16 PM

ಕನ್ನಡ  ಬಿಗ್​ ಬಾಸ್​ ಸೀಸನ್​ 8ರಲ್ಲಿ ಚಕ್ರವರ್ತಿ ಚಂದ್ರಚೂಡ್​ ನಡೆ ಯಾರಿಗೂ ಇಷ್ಟವಾಗುತ್ತಿಲ್ಲ. ಎರಡನೇ ಇನ್ನಿಂಗ್ಸ್​ನಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ಚಕ್ರವರ್ತಿ ಆಪ್ತರು ಎನಿಸಿಕೊಂಡಿರುವ ಪ್ರಶಾಂತ್​ ಸಂಬರಗಿ ಹಾಗೂ ಶಮಂತ್​ ಬ್ರೋ ಗೌಡಗೆ ಬೇಸರ ತರಿಸಿದೆ. ಹೀಗಾಗಿ, ಮನೆಯ ಎಲ್ಲಾ ಸದಸ್ಯರು ಅವರಿಂದ ದೂರವಾಗುತ್ತಿದ್ದಾರೆ. ಈ ಮಧ್ಯೆ ಬಿಗ್​ ಬಾಸ್​ ಮನೆಯಲ್ಲಿ ಕಪ್ಪು ಬಾವುಟ ಹಾರಿದೆ.

ಈ ವಾರದ ಟಾಸ್ಕ್ ನಡೆಯುವಾಗ ದಿವ್ಯಾ ಉರುಡುಗ ತೀವ್ರವಾಗಿ ಗಾಯಗೊಂಡಿದ್ದರು. ಓಡಿ ಬರುತ್ತಿದ್ದ ಅವರನ್ನು ಬೇರೆಡೆ ಕಳುಹಿಸುವ ಪ್ರಯತ್ನದಲ್ಲಿ ಚಕ್ರವರ್ತಿ ಚಂದ್ರಚೂಡ್ ತಪ್ಪೊಂದನ್ನು ಮಾಡಿದ್ದರು. ದಿವ್ಯಾ ಅವರನ್ನು ತಡೆಯೋಕೆ ಹೋಗಿದ್ದು ತಪ್ಪಾಗಿತ್ತು. ದಿವ್ಯಾ ಉರುಡುಗ ಕೈ ಗಾಜಿಗೆ ತಾಕಿ ರಕ್ತ ಬಂದಿತ್ತು. ಈ ವಿಚಾರದ ಬಗ್ಗೆ ಮನೆಯ ಸದಸ್ಯರಿಗೆ ಬೇಸರ ಇದೆ. ಇದನ್ನು, ಕಳಪೆ ಪಟ್ಟ ನೀಡುವ ಸಂದರ್ಭದಲ್ಲಿ ಸ್ಪರ್ಧಿಗಳು ಹೊರ ಹಾಕಿದ್ದಾರೆ. ಆದರೆ, ಇದನ್ನು ಅರಗಿಸಿಕೊಳ್ಳೋಕೆ ಚಕ್ರವರ್ತಿಗೆ ಸಾಧ್ಯವಾಗಲೇ ಇಲ್ಲ.

ಜೈಲು ಸೇರಿದ ನಂತರದಲ್ಲಿ ಚಕ್ರವರ್ತಿ ಚಂದ್ರಚೂಡ್​ ಕೂಗಾಟ ನಡೆಸಿದ್ದಾರೆ. ಐದು ಸ್ಪರ್ಧಿಗಳು ನನಗೆ ಕಳಪೆ ಎಂದು ನೀಡಿದ್ದಾರೆ. ಇದನ್ನು ನಾನು ಒಪ್ಪೋದಿಲ್ಲ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ದೊಡ್ಡಾಗಿ ಹಾಡಿದ್ದಾರೆ. ಇದು ಎಲ್ಲಾ ಸ್ಪರ್ಧಿಗಳಿಗೆ ಕಿರಿಕಿರಿ ಉಂಟು ಮಾಡಿದೆ.

ಬಿಗ್​ ಬಾಸ್ ಮನೆಯಲ್ಲಿ ಸಿಕ್ಕ ಕಪ್ಪು ಬಣ್ಣದ ಕವರ್​ ಅನ್ನು ಜೈಲಿನ ಕಂಬಿಗೆ ಕಟ್ಟಿದ್ದಾರೆ. ‘ಮನೆಯ ಸ್ಪರ್ಧಿಗಳ ವಿರುದ್ಧ ನಾನು ಪ್ರತಿಭಟನೆ ಮಾಡುತ್ತಿದ್ದೇನೆ. ಇದುವೇ ಪ್ರತಿಭಟನೆಯ ಬಾವುಟ. ನಿಜವಾದ ಕಳಪೆ, ದಲ್ಲಾಳಿಗಳ ವಿರುದ್ಧ ನನ್ನ ಪ್ರತಿಭಟನೆ. ಕಪ್ಪು ಬಾವುಟ ನನ್ನ ಹೋರಾಟದ ಪ್ರತೀಕ’ ಎಂದಿದ್ದಾರೆ ಚಕ್ರವರ್ತಿ.

ಪ್ರತಿ ಬಾರಿ ಕಳಪೆ ನೀಡಿದಾಗಲೂ ಆ ಸ್ಪರ್ಧಿ ಅದನ್ನು ಒಪ್ಪಿಕೊಂಡು ಜೈಲಿಗೆ ಹೋಗಿದ್ದಾರೆ. ‘ದಿವ್ಯಾ ಕೈಗೆ ಗಾಯ ಆಗೋಕೆ ನಾನೇ ಕಾರಣ. ಹೀಗಾಗಿ, ನಾನೇ ಜೈಲಿಗೆ ಹೋಗುತ್ತೇನೆ’ ಎಂದು ಚಕ್ರವರ್ತಿ ಅವರೇ ಬಾಯ್ಬಿಟ್ಟು ಹೇಳಿದ್ದರು. ಈಗ ಕಳಪೆ ಎನ್ನುವ ಪಟ್ಟ ನೀಡಿದ ನಂತರದಲ್ಲಿ ಅವರು ಈ ರೀತಿ ಆಡುತ್ತಿದ್ದಾರೆ. ಹೀಗಾಗಿ, ಚಕ್ರವರ್ತಿ ಪರ ಯಾರೂ ನಿಲ್ಲುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರು ಏಕಾಂಗಿ ಆಗಿರೋದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: Bigg Boss Kannada: ಈ ವಾರದ​ ಎಲಿಮಿನೇಷನ್​ಗೆ ಟ್ವಿಸ್ಟ್​ ಕೊಟ್ಟ ಬಿಗ್ ಬಾಸ್​

ಕನ್ನಡ ಬಿಗ್​ ಬಾಸ್​ನ ಈ ವಾರದ ಎಲಿಮಿನೇಷನ್​ನಲ್ಲಿ ಪ್ರಮುಖ ಕ್ಯಾಂಡಿಡೇಟ್​ ಔಟ್​?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada