AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ನ ಐಆರ್​ಜಿಸಿ ಪ್ರಧಾನ ಕಚೇರಿ ನಾಶ, ಹಾವಿನ ತಲೆಯನ್ನೇ ಕತ್ತರಿಸಿದ್ದೇವೆ ಎಂದ ಅಮೆರಿಕ

ಅಮೆರಿಕದ ದಾಳಿಯಿಂದ ಇರಾನ್‌ನ ಐಆರ್‌ಜಿಸಿ ಪ್ರಧಾನ ಕಚೇರಿ ನಾಶವಾಗಿದೆ. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. 'ಹಾವಿನ ತಲೆ ಕತ್ತರಿಸಿದ್ದೇವೆ' ಎಂದು ಅಮೆರಿಕ ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಕೆಂಪು ಸೇಡಿನ ಬಾವುಟ ಹಾರಿಸಿದೆ, ರಕ್ತಕ್ಕೆ ರಕ್ತದ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ದೊಡ್ಡ ಸಂಘರ್ಷದ ಭೀತಿ ಎದುರಾಗಿದೆ.

ಇರಾನ್​ನ ಐಆರ್​ಜಿಸಿ ಪ್ರಧಾನ ಕಚೇರಿ ನಾಶ, ಹಾವಿನ ತಲೆಯನ್ನೇ ಕತ್ತರಿಸಿದ್ದೇವೆ ಎಂದ ಅಮೆರಿಕ
ಇರಾನ್
ನಯನಾ ರಾಜೀವ್
|

Updated on: Mar 02, 2026 | 7:24 AM

Share

ಟೆಹ್ರಾನ್, ಮಾರ್ಚ್​ 02: ಇರಾನ್‌(Iran)ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಪ್ರಧಾನ ಕಚೇರಿಯನ್ನು ಪ್ರಮುಖ ದಾಳಿಯಲ್ಲಿ ನಾಶಪಡಿಸಲಾಗಿದೆ ಎಂದು ಅಮೆರಿಕ ದೃಢಪಡಿಸಿದೆ. ಕಳೆದ 47 ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ನರ ಸಾವಿಗೆ ಐಆರ್​ಜಿಸಿ ಕಾರಣವಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಹೇಳಿದೆ. ಈ ಕ್ರಮವನ್ನು “ಹಾವಿನ ತಲೆಯನ್ನು ಕತ್ತರಿಸುವುದು” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಬಣ್ಣಿಸಿದೆ ಮತ್ತು ಯುಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ ಮತ್ತು ಐಆರ್ಜಿಸಿ ಇನ್ನು ಮುಂದೆ ಪ್ರಧಾನ ಕಚೇರಿಯನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.

ಇಸ್ರೇಲಿ ಸೇನೆಯು ಐಆರ್‌ಜಿಸಿ ಕೇಂದ್ರ, ಗುಪ್ತಚರ ಪ್ರಧಾನ ಕಚೇರಿ, ಐಆರ್‌ಜಿಸಿ ವಾಯುಪಡೆಯ ಕಮಾಂಡ್ ಕೇಂದ್ರ ಮತ್ತು ಆಂತರಿಕ ಭದ್ರತಾ ಪ್ರಧಾನ ಕಚೇರಿ ಸೇರಿದಂತೆ ಡಜನ್‌ಗಟ್ಟಲೆ ಇರಾನಿನ ಮಿಲಿಟರಿ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿ ಮಾಡಿದೆ.

ಶನಿವಾರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ, ಅಮೆರಿಕ-ಇಸ್ರೇಲಿ ಜಂಟಿ ಕಾರ್ಯಾಚರಣೆಗಳು ಭಾನುವಾರದವರೆಗೆ ಮುಂದುವರೆದವು. ಇರಾನ್ 66 ವರ್ಷದ ಧರ್ಮಗುರು ಅಲಿರೆಜಾ ಅರಾಫಿ ಅವರನ್ನು ಮೂರು ಸದಸ್ಯರ ನಾಯಕತ್ವ ಮಂಡಳಿಗೆ ನೇಮಿಸಿತು, ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶವನ್ನು ಆಳುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಇಡೀ ಮಧ್ಯಪ್ರಾಚ್ಯ ಈಗ ಕುದಿಯುತ್ತಿರುವ ಕೆಂಡದಂತಾಗಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಸುದ್ದಿ ದೃಢಪಡುತ್ತಿದ್ದಂತೆಯೇ ಇರಾನ್‌ನಲ್ಲಿ ಸೇಡಿನ ಕಿಚ್ಚು ಹೊತ್ತಿ ಉರಿಯುತ್ತಿದೆ.

ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!

ಇರಾನ್‌ನ ಪವಿತ್ರ ನಗರವಾದ ಕೊಮ್​ನಲ್ಲಿರುವ ಜಮ್ಕಾರನ್ ಮಸೀದಿಯ ಮೇಲೆ ಸೇಡಿನ ಕೆಂಪು ಬಾವುಟ ಹಾರಾಡುತ್ತಿದ್ದು, ಇದು ಇಡೀ ಜಗತ್ತಿಗೆ ಒಂದು ಭೀಕರ ಎಚ್ಚರಿಕೆಯ ಸಂಕೇತವಾಗಿದೆ. ಇರಾನ್ ಸಂಪ್ರದಾಯದ ಪ್ರಕಾರ, ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸುವುದು ಎಂದರೆ ಅದು ಕೇವಲ ಶೋಕವಲ್ಲ, ಬದಲಾಗಿ ರಕ್ತಕ್ಕೆ ರಕ್ತದ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ.

ಖಮೇನಿ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ಬೆಲೆ ತೆರಲೇಬೇಕು ಎಂಬ ಸಂದೇಶವನ್ನು ಇರಾನ್  ರವಾನಿಸಿದೆ. ಖಮೇನಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಮೃತಪಟ್ಟಿದ್ದಾನೆ. ಇರಾನ್ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಒಳ್ಳೆಯ ಅವಕಾಶ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!