Bigg Boss Kannada: ಈ ವಾರದ​ ಎಲಿಮಿನೇಷನ್​ಗೆ ಟ್ವಿಸ್ಟ್​ ಕೊಟ್ಟ ಬಿಗ್ ಬಾಸ್​

ಪ್ರತಿವಾರ ಸ್ಪರ್ಧಿಗಳಿಗೆ ನಾಮಿನೇಷನ್​ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಯಾರಿಗೆ ಯಾವ ಸ್ಪರ್ಧಿ ಇಷ್ಟವಿಲ್ಲವೋ ಅವರನ್ನು ನಾಮಿನೇಟ್​ ಮಾಡುತ್ತಾರೆ. ಆದರೆ, ಈ ಬಾರಿ ಬಿಗ್​ ಬಾಸ್​ ಮನೆಯಲ್ಲಿ ಆ ರೀತಿ ಇರಲಿಲ್ಲ.

Bigg Boss Kannada: ಈ ವಾರದ​ ಎಲಿಮಿನೇಷನ್​ಗೆ ಟ್ವಿಸ್ಟ್​ ಕೊಟ್ಟ ಬಿಗ್ ಬಾಸ್​
ಕಿಚ್ಚ ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 16, 2021 | 2:55 PM

ಬಿಗ್​ ಬಾಸ್​ ಮನೆಯಲ್ಲಿ ಏನು ಮಿಸ್​ ಆಗುತ್ತದೆಯೋ ಗೊತ್ತಿಲ್ಲ. ಆದರೆ, ಎಲಿಮಿನೇಷನ್​ ಮಾತ್ರ ನಡೆದೇ ನಡೆಯುತ್ತದೆ. ವೀಕ್ಷಕರಲ್ಲಿ ಕುತೂಹಲ ಹುಟ್ಟಿಸುವ ಉದ್ದೇಶದಿಂದ ಕೆಲ ವಾರ ಬಿಗ್​ ಬಾಸ್​ ಎಲಿಮಿನೇಷನ್​ಗೆ ಟ್ವಿಸ್ಟ್ ಕೊಡಲಾಗುತ್ತದೆ. ಈ ವಾರ ಬಿಗ್​ ಬಾಸ್ ಮನೆಯಲ್ಲಿ ಇದೇ ಸೂತ್ರ ಅನುಸರಿಸಲಾಗಿದೆ. ಈ ವಾರದ ಎಲಿಮಿನೇಷನ್​ಗೆ ನಡೆದ ನಾಮಿನೇಷನ್​ ಪ್ರಕ್ರಿಯೆ ಭಿನ್ನವಾಗಿತ್ತು. ಹೀಗಾಗಿ, ಕೆಲವರು ಸೇಫ್​ ಆದರೆ, ಇನ್ನೂ ಕೆಲ ಪ್ರಮುಖ ಸ್ಪರ್ಧಿಗಳು ಡೇಂಜರ್​ ಜೋನ್​ನಲ್ಲಿದ್ದಾರೆ.

ಪ್ರತಿವಾರ ಸ್ಪರ್ಧಿಗಳಿಗೆ ನಾಮಿನೇಷನ್​ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಯಾರಿಗೆ ಯಾವ ಸ್ಪರ್ಧಿ ಇಷ್ಟವಿಲ್ಲವೋ ಅವರನ್ನು ನಾಮಿನೇಟ್​ ಮಾಡುತ್ತಾರೆ. ಆದರೆ, ಈ ಬಾರಿ ಬಿಗ್​ ಬಾಸ್​ ಮನೆಯಲ್ಲಿ ಆ ರೀತಿ ಇರಲಿಲ್ಲ. ಸೋಮವಾರ ಕ್ಯಾಪ್ಟನ್​ ಅರವಿಂದ್​ ಹಾಗೂ ರಘು ಗೌಡ ಸೇವ್​ ಮಾಡಿದ ಶಮಂತ್​ ಬ್ರೋ ಗೌಡ ಹೊರತುಪಡಿಸಿ ಉಳಿದ ಎಲ್ಲಾ 8 ಸದಸ್ಯರು ನಾಮಿನೇಟ್​ ಆಗಿದ್ದರು. ಈ ಎಂಟು ಸ್ಪರ್ಧಿಗಳಿಗೆ ನಾಮಿನೇಷನ್​​ನಿಂದ ತಪ್ಪಿಸಿಕೊಳ್ಳೋಕೆ ಅವಕಾಶ ನೀಡಲಾಗಿತ್ತು.

ಬಿಗ್ ಬಾಸ್​ ಮನೆಯಲ್ಲಿ ‘ವಿಜಯ ಯಾತ್ರೆ’ ಹಾಗೂ ‘ನಿಂಗ್​ ಐತೆ’ ಹೆಸರಿನ ಎರಡು ತಂಡಗಳನ್ನು ಮಾಡಲಾಯಿತು. ವಿಜಯ ಯಾತ್ರೆ ತಂಡಕ್ಕೆ ಅರವಿಂದ್​ ಕ್ಯಾಪ್ಟನ್​ ಆದರೆ, ನಿಂಗ್​ ಐತೆ ತಂಡಕ್ಕೆ ಮಂಜು ಪಾವಗಡ ನಾಯಕತ್ವ ವಹಿಸಿಕೊಂಡರು. ನಾಲ್ಕು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಒಟ್ಟೂ 10 ಟಾಸ್ಕ್​ಗಳು ನಡೆದವು. ಈ ಟಾಸ್ಕ್​ನಲ್ಲಿ ಗೆದ್ದು ಯಾರು ಹೆಚ್ಚು ದಂಡಗಳನ್ನು ಸಂಗ್ರಹಿಸುತ್ತಾರೋ ಅವರು ಗೆದ್ದಂತೆ.

ಈ ಟಾಸ್ಕ್​ನಲ್ಲಿ ನಿಂಗ್​ ಐತೆ ತಂಡ ಗೆದ್ದಿದೆ. ಈ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗಿದ್ದು ಮಾತ್ರವಲ್ಲ ನಾಮಿನೇಷನ್​ನಿಂದ ಬಚಾವ್​​​ ಆಗಿದೆ. ಮಂಜು ತಂಡದಲ್ಲಿದ್ದ ದಿವ್ಯಾ ಉರುಡುಗ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​,  ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ನಾಮಿನೇಟ್​ನಿಂದ ಬಚಾವ್​ ಆದರು. ಅರವಿಂದ್​ ತಂಡದ ಪ್ರಶಾಂತ್ ಸಂಬರಗಿ​, ಪ್ರಿಯಾಂಕಾ ತಿಮ್ಮೇಶ್​, ವೈಷ್ಣವಿ, ಶುಭಾ ಪೂಂಜಾ ನಾಮಿನೇಟ್​ ಆದರು.

ಟಾಸ್ಕ್​ನಲ್ಲಿ ಸೋತ ಬೆನ್ನಲ್ಲೇ ಶುಭಾ ಪೂಂಜಾ ಅತ್ತರು. ಪ್ರಶಾಂತ್​ ಸಂಬರಗಿ ಬೇಸರ ಮಾಡಿಕೊಂಡರು. ಈ ನಾಲ್ವರಲ್ಲಿ ಒಬ್ಬರು ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್​ ಮನೆಯಲ್ಲಿ ಒಂದಾದ ಹಾವು-ಮುಂಗುಸಿ; ಮಂಜುಗೆ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ ಪ್ರಶಾಂತ್​ 

Bigg Boss Kannada: ಮಂಜು ಪಾವಗಡ ಜಾತಕದಲ್ಲಿದ್ದ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ನಿಜವಾಯ್ತು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ