ಬಿಗ್​ ಬಾಸ್​ ಮನೆಯಲ್ಲಿ ಒಂದಾದ ಹಾವು-ಮುಂಗುಸಿ; ಮಂಜುಗೆ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ ಪ್ರಶಾಂತ್​

ಜಗಳವಾಡೋದು ತಪ್ಪು ಅನ್ನೋದು ಪ್ರಶಾಂತ್​ಗೆ ಅರಿವಾದಂತೆ ಕಾಣುತ್ತಿದೆ. ಈ ಕಾರಣಕ್ಕೆ ಅವರು ಮಂಜು ಸೇರಿ ಮನೆಯ ಎಲ್ಲಾ ಸದಸ್ಯರ ಜತೆ ಮೃದುವಾಗಿ ನಡೆದುಕೊಳ್ಳುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಒಂದಾದ ಹಾವು-ಮುಂಗುಸಿ; ಮಂಜುಗೆ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ ಪ್ರಶಾಂತ್​
ಬಿಗ್​ ಬಾಸ್​ ಮನೆಯಲ್ಲಿ ಒಂದಾದ ಹಾವು-ಮುಂಗುಸಿ; ಮಂಜುಗೆ ಪ್ರೀತಿಯಿಂದ ಕೈತುತ್ತು ತಿನ್ನಿಸಿದ ಪ್ರಶಾಂತ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 15, 2021 | 2:48 PM

‘ಕನ್ನಡ ಬಿಗ್ ಬಾಸ್ ಸೀಸನ್​ 8’ರ ಮೊದಲ ಇನ್ನಿಂಗ್ಸ್​ನ ಆರಂಭದ ದಿನಗಳಲ್ಲಿ ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ಚೆನ್ನಾಗಿಯೇ ಇದ್ದರು. ಪ್ರಶಾಂತ್​ ಅವರನ್ನು ಮಂಜು ಪ್ರೀತಿಯಿಂದ ಮಾವ ಎಂದು ಕರೆಯುತ್ತಿದ್ದರು. ಚಕ್ರವರ್ತಿ ಚಂದ್ರಚೂಡ್​ ಯಾವಾಗ ಮನೆ ಒಳಗೆ ಎಂಟ್ರಿ ಕೊಟ್ಟರೋ ಅಂದಿನಿಂದ ಮಂಜು ಹಾಗೂ ಪ್ರಶಾಂತ್​ ನಡುವೆ ಯಾವುದೂ ಸರಿ ಇಲ್ಲ. ಆದರೆ, ಈಗ ಇಬ್ಬರೂ ಒಂದಾಗಿದ್ದಾರೆ. ಅದೆಷ್ಟರ ಮಟ್ಟಿಗೆ ಎಂದರೆ, ಮಂಜುಗೆ ಕೈತುತ್ತು ತಿನ್ನಿಸುವಷ್ಟು.

ಬಿಗ್ ಬಾಸ್ ಎರಡನೆ ಇನ್ನಿಂಗ್ಸ್​ನಲ್ಲಿ ಮಂಜು ಪಾವಗಡ ಹಾಗೂ ಪ್ರಶಾಂತ್​ ಸಂಬರಗಿ ನಡುವೆ ದ್ವೇಷ ಮುಂದುವರಿದಿತ್ತು. ಮೊದಲ ವಾರದಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್​ ಆಡಿದ ಮಾತುಗಳು ಪ್ರಶಾಂತ್​ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ, ಸಿಕ್ಕಸಿಕ್ಕಲ್ಲಿ ಅವರು ಜಗಳವಾಡುತ್ತಿದ್ದರು. ಆದರೆ, ಇದು ತಪ್ಪು ಅನ್ನೋದು ಪ್ರಶಾಂತ್​ಗೆ ಅರಿವಾದಂತೆ ಕಾಣುತ್ತಿದೆ. ಈ ಕಾರಣಕ್ಕೆ ಅವರು ಮಂಜು ಸೇರಿ ಮನೆಯ ಎಲ್ಲಾ ಸದಸ್ಯರ ಜತೆ ಮೃದುವಾಗಿ ನಡೆದುಕೊಳ್ಳುತ್ತಿದ್ದಾರೆ.

ಬಿಗ್​ ಬಾಸ್​ನಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಅನುಸಾರ, ‘ವಿಜಯ ಯಾತ್ರೆ’ ತಂಡದ ಇಬ್ಬರು ಸದಸ್ಯರು, ‘ನಿಂಗ್​​ ಐತೆ’ ತಂಡದ ಸದಸ್ಯರಿಗೆ ಊಟ ಮಾಡಿಸಬೇಕು. ವಿಜಯ ಯಾತ್ರೆ ತಂಡದ ವೈಷ್ಣವಿ ಹಾಗೂ ಪ್ರಶಾಂತ್​ ಸಂಬರಗಿ​ ಅವರು ಮಂಜುಗೆ ಕರೆದು ಕರೆದು ಊಟ ಮಾಡಿಸಿದ್ದಾರೆ. ಪ್ರಶಾಂತ್​ ಅವರಂತೂ ಮಂಜುಗೆ ಬಹಳ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ್ದಾರೆ. ಈ ಮೂಲಕ ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿರೋದು ಸಾಬೀತಾಗಿದೆ. ಮನೆಯಲ್ಲಿ ಈ ಮೊದಲು ಹಾವು ಮುಂಗುಸಿಯಂತೆ ಇದ್ದ ಇಬ್ಬರೂ ಈಗ ತುಂಬಾನೇ ಬದಲಾಗಿದ್ದಾರೆ ಎನ್ನುತ್ತಿದ್ದಾರೆ ವೀಕ್ಷಕರು. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ ಹಂಚಿಕೊಂಡಿದ್ದು, ಇಂದು (ಜುಲೈ 15) ಪೂರ್ತಿ ಎಪಿಸೋಡ್​ ಪ್ರಸಾರವಾಗಲಿದೆ.

ಚಕ್ರವರ್ತಿ ಅವರಿಂದ ಪ್ರಶಾಂತ್​ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪ್ರಶಾಂತ್​ ಕೂಲ್​ ಆಗಿರೋಕು ಇದೂ ಕೂಡ ಒಂದು ಕಾರಣ ಇದ್ದರೂ ಇರಬಹುದು.

ಇದನ್ನೂ ಓದಿ: ಪ್ರಶಾಂತ್​-ಅರವಿಂದ್ ಕೈ ಮಿಲಾಯಿಸಿಕೊಳ್ಳುವುದನ್ನು ತಪ್ಪಿಸಿದ ಮನೆ ಮಂದಿ; ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳ

ಬಿಗ್​ ಬಾಸ್​ನಿಂದ ರಘು ಎಲಿಮಿನೇಟ್​ ಆಗೋಕೆ ಕಾರಣವಾಯ್ತು ಈ ಒಂದು ವಿಚಾರ 

Published On - 2:42 pm, Thu, 15 July 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು