Darshan Press Meet: ಕಾಣದ ಕೈಗಳು ಕೆಲಸ ಮಾಡುತ್ತಿವೆ; ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಗರಂ

ದರ್ಶನ್ ಸುದ್ದಿಗೋಷ್ಠಿ: ಸಿನಿಮಾ ಇದ್ದರೆ ಹೊರಗೆ ಬರುತ್ತೀನಿ. ಇಲ್ಲ ಅಂದರೆ ಈ ತರ ವಿಷಯ ಇದ್ದರೆ ಹೊರಗೆ ಬರುತ್ತೀನಿ ಅಷ್ಟೆ. ಊಟ ಕೊಡುವುದು ವಿಳಂಬವಾಗಿದ್ದಕ್ಕೆ ಪ್ರಶ್ನಿಸಿದ್ದೆ. ಯಾಕಪ್ಪಾ ಎಂದು ಪ್ರಶ್ನಿಸಿದ್ದೆ ಅದನ್ನೇ ದೊಡ್ಡದು ಮಾಡ್ತಿದ್ದಾರೆ.

Darshan Press Meet: ಕಾಣದ ಕೈಗಳು ಕೆಲಸ ಮಾಡುತ್ತಿವೆ; ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಗರಂ
ನಟ ದರ್ಶನ್​(ಸಾಂದರ್ಭಿಕ ಚಿತ್ರ)
Follow us
TV9 Web
| Updated By: sandhya thejappa

Updated on:Jul 15, 2021 | 1:06 PM

ಬೆಂಗಳೂರು: ಇಂದ್ರಜಿತ್ ಲಂಕೇಶ್ ಏನು ಬೇಕಾದರೂ ಹೇಳಿಕೊಳ್ಳಲಿ ಎಂದು ಹೇಳಿಕೆ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೂನ್ 16ರಂದೇ ಅರುಣಾ ಕುಮಾರಿಗೆ ನಿನ್ನದು ಏನೂ ತಪ್ಪಿಲ್ಲ ಎಂದು ಹೇಳಿದ್ದೆ. ನಾವು ಯಾವುದೇ ಕಾರಣಕ್ಕೂ ಇದನ್ನು ಮುಚ್ಚಾಕುತ್ತಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನ್ನದು, ಸಂದೇಶ್ ನಾಗರಾಜ್ದು ಸಾವಿರ ಗಲಾಟೆ ಇದೆ. ನಾನು ಹಲ್ಲೆ ನಡೆಸಿದ್ದೇನೆ ಎಂಬುದು ಅವರ ಆರೋಪ ಅಲ್ಲವೇ, ಅದು ಸಾಬೀತಾಗಿದ್ಯಾ? ಎಂದು ಪ್ರಶ್ನಿಸಿದ್ದಾರೆ.

ಸಿನಿಮಾ ಇದ್ದರೆ ಹೊರಗೆ ಬರುತ್ತೀನಿ. ಇಲ್ಲ ಅಂದರೆ ಈ ತರ ವಿಷಯ ಇದ್ದರೆ ಹೊರಗೆ ಬರುತ್ತೀನಿ ಅಷ್ಟೆ. ಊಟ ಕೊಡುವುದು ವಿಳಂಬವಾಗಿದ್ದಕ್ಕೆ ಪ್ರಶ್ನಿಸಿದ್ದೆ. ಯಾಕಪ್ಪಾ ಎಂದು ಪ್ರಶ್ನಿಸಿದ್ದೆ ಅದನ್ನೇ ದೊಡ್ಡದು ಮಾಡ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಬೆಂಗಳೂರಿನಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್ ಹೇಳಿದರು.

ಸಂದೇಶ್ ಮತ್ತು ನನ್ನ ನಡುವೆ ಸಾಕಷ್ಟು ಜಗಳಗಳು ಇದಾವೆ. ಊಟ ಯಾಕಪ್ಪ ಲೇಟು, ಅಂತ ಗದರಿರಬಹುದು. ನಾನೇನಾದ್ರು ಮಾಡಿದ್ರೆ ಸಂದೇಶ್ ಸುಮ್ಮನೆ ಇರುತ್ತಿರಲಿಲ್ಲ. ಇಂದ್ರಜಿತ್ ದೊಡ್ಡವರು ಏನೂ ಬೇಕಾದ್ರು ಹೇಳಲಿ.  ಊಹ, ಪೋಹಗಳನ್ನ ಬಿಟ್ಟು ಬಿಡಿ ಎಂದು ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಅಸ್ಪಷ್ಟ ಉತ್ತರ ನೀಡಿದ್ದಾರೆ.

ಇಂದ್ರಜಿತ್ ಅವರು ದೊಡ್ಡ ತನಿಖೆದಾರರು, ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ. ಇಂದ್ರಜಿತ್ ಅವರು ಪ್ರೂವ್ ಮಾಡಿಕೊಳ್ಳಲಿ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ ಚಾಲೆಂಜಿಂಗ್ ಸ್ಟಾರ್, ಇಂದ್ರಜಿತ್ ಅವರು ಎರಡು ಬಾರಿ ಇಂಟರ್ ವ್ಯೂ ಕೇಳಿ ಕರೆ ಮಾಡಿದ್ದರು. ನಾನು ಈಗ ಆಗಲ್ಲ ಅಂದೆ. ಅವರು ನನ್ನ ಒಂದು ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈಗ ಈ ಇಶ್ಯೂ ಮಾಡಿ ಹೊಸದಾಗಿ ಏನೋ ಡೈರೆಕ್ಟ್ ಮಾಡ್ತಿದ್ದಾರೆ. ಈಗ ಮೈಸೂರಿಗೆ ಹೋಗ್ತಾ ಇದ್ದೇನೆ. ಉಮಾಪತಿ, ಹರ್ಷಗೆ  ಇಲ್ಲಿಗೆ ನಿಲ್ಲಿಸಿ ಎಂದಿದ್ದೇನೆ. ಪೊಲೀಸ್ ತನಿಖೆ ನಡೆದ ಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಸಂಜೆ 5 ಘಂಟೆಗೆ ಇಂದ್ರಜಿತ್ ಲಂಕೇಶ್​ ಮತ್ತೊಂದು ಸುದ್ದಿಗೋಷ್ಠಿ; ಈ ಮಧ್ಯೆ ದರ್ಶನ್ ಪ್ರತಿಕ್ರಿಯೆ ಸಾಧ್ಯತೆ

Indrajit Lankesh Press Meet: ಮೈಸೂರು ಪೊಲೀಸ್ ಸ್ಟೇಷನ್​ಗಳು ಸೆಟಲ್ ಮೆಂಟ್ ಸ್ಟೇಷನ್​ಗಳಾಗಿವೆ; ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

(Darshan react to Indrajit Lankesh Statement in Bengaluru)

Published On - 12:42 pm, Thu, 15 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ