ಶಿಕ್ಷಣ ಇಲಾಖೆಯ ಸುತ್ತೋಲೆಗೂ ಡೋಂಟ್ ಕೇರ್; ನೋ ಫೀಸ್, ನೋ ಹಾಲ್ ಟಿಕೆಟ್ ಎಂದು ಪಟ್ಟು ಹಿಡಿದ ಖಾಸಗಿ ಶಾಲೆಗಳು
SSLC Exam; ಎಕ್ಸಾಂ ಹತ್ತಿರವಾಗುತ್ತಿದ್ದಂತೆ ಫೀಸ್ ಪೈಟ್ ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಸುತ್ತೋಲೆಗೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಸಚಿವ ಸುರೇಶ್ ಕುಮಾರ್ ವಿರುದ್ಧ ಖಾಸಗಿ ಶಾಲೆಗಳು ಸಮರ ಸಾರಿವೆ.
ಬೆಂಗಳೂರು: ಕೊರೊನಾ ಕಾರಣದಿಂದ ಕರ್ನಾಟಕದಲ್ಲಿ ವಿಳಂಬವಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜುಲೈ 19 ಹಾಗೂ ಜುಲೈ 22ರಂದು ನಡೆಸಲು ಸರ್ಕಾರ ನಿರ್ಧರಿಸಿದೆ. ಸದ್ಯ ಈಗ ಎಸ್ಎಸ್ಎಲ್ಸಿ ಪರೀಕ್ಷೆಗೆ ಐದೇ ದಿನ ಬಾಕಿ ಇದೆ. ಆದರೆ ಇಂತಹ ಸಮಯದಲ್ಲಿ ಶಿಕ್ಷಣ ಇಲಾಖೆ v/s ಖಾಸಗಿ ಶಾಲೆಗಳು ಹಾಲ್ ಟಿಕೆಟ್ ಪೈಟ್ ಶುರುವಾಗಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಹಾಲ್ ಟಿಕಿಟ್ ನೀಡಲು ನಿರಾಕರಿಸಿವೆ. ನೋ ಫೀಸ್, ನೋ ಹಾಲ್ ಟಿಕೆಟ್ ಎಂಬ ಧೋರಣೆಗೆ ಮುಂದಾಗಿವೆ.
ಎಕ್ಸಾಂ ಹತ್ತಿರವಾಗುತ್ತಿದ್ದಂತೆ ಫೀಸ್ ಪೈಟ್ ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಸುತ್ತೋಲೆಗೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಸಚಿವ ಸುರೇಶ್ ಕುಮಾರ್ ವಿರುದ್ಧ ಖಾಸಗಿ ಶಾಲೆಗಳು ಸಮರ ಸಾರಿವೆ. ಕನಿಷ್ಠ ಕಳೆದ ವರ್ಷದ 50% ಶುಲ್ಕ ಕಟ್ಟಿದ್ರೆ ಮಾತ್ರ ಹಾಲ್ ಟಿಕೆಟ್ ನೀಡುತ್ತೇವೆ ಎಂದು ಶಾಲೆಗಳು ಡಿಮ್ಯಾಂಡ್ ಮಾಡುತ್ತಿವೆ. ಫೀಸ್ ಕಟ್ಟಿದರೆ ಮಾತ್ರ ಪ್ರವೇಶ ಪತ್ರ ನೀಡೊದಕ್ಕೆ ಖಾಸಗಿ ಶಾಲೆಗಳು ತೀರ್ಮಾನಿಸಿವೆ. ಶಾಲೆಗಳ ಈ ನಡೆ ವಿರುದ್ಧ ನಿನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು.
ಎಸ್ಎಸ್ಎಲ್ಸಿ ಎಕ್ಸಾಂಗೆ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಸಕಾಲದಲ್ಲಿ ಪ್ರವೇಶ ಪತ್ರ ಒದಗಿಸಬೇಕು. BEO ಕಚೇರಿಗೆ ಭೇಟಿ ನೀಡಿ ಪ್ರವೇಶ ಪತ್ರ ಪಡೆದುಕೊಳ್ಳಬಹುದು ಅಂತಾ ತಿಳಸಿತ್ತು. ಆದ್ರೆ ಇಲಾಖೆಯ ಸುತ್ತೋಲೆಗೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ. ಕನಿಷ್ಠ 50% ಕಳೆದ ವರ್ಷದ ಶುಲ್ಕ ಕಟ್ಟುವಂತೆ ಒತ್ತಾಯಿಸಿವೆ. 50% ಕಳೆದ ವರ್ಷದ ಶುಲ್ಕ ಕಟ್ಟಿದ್ರೆ ಮಾತ್ರ ಹಾಲ್ ಟಿಕೆಟ್ ನೀಡುವುದಾಗಿ ಖಾಸಗಿ ಶಾಲೆಗಳು ಪೋಷಕರಿಗೆ ಸೂಚಿಸಿವೆ. ಆದ್ರೆ ಶಾಲೆಗಳ ಈ ನಡೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಲೆ ನೋವಾಗಿದೆ.
Published On - 12:16 pm, Thu, 15 July 21