ಬಿಗ್​ ಬಾಸ್​ನಿಂದ ರಘು ಎಲಿಮಿನೇಟ್​ ಆಗೋಕೆ ಕಾರಣವಾಯ್ತು ಈ ಒಂದು ವಿಚಾರ 

ಈ ವಾರ ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ರಘು ಗೌಡ, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿತ್ತು.

ಬಿಗ್​ ಬಾಸ್​ನಿಂದ ರಘು ಎಲಿಮಿನೇಟ್​ ಆಗೋಕೆ ಕಾರಣವಾಯ್ತು ಈ ಒಂದು ವಿಚಾರ 
ರಘು - ಬಿಗ್ ಬಾಸ್​ ಕನ್ನಡ ಸೀಸನ್​ 8
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 12, 2021 | 3:51 PM

ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನ ಎರಡನೇ ಎಲಿಮಿನೇಷನ್​ ನಡೆದಿದೆ. ರಘು ಗೌಡ ಬಿಗ್​ ಬಾಸ್​​ನಿಂದ ಎಲಿಮಿನೇಟ್​ ಆಗಿದ್ದಾರೆ. ಈ ಮೂಲಕ ಬಿಗ್​ ಬಾಸ್​ನಲ್ಲಿ ಹನ್ನೊಂದು ಇದ್ದ ಸ್ಪರ್ಧಿಗಳ ಸಂಖ್ಯೆ ಹತ್ತಾಗಿದೆ. ಈ ವಾರ ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ರಘು ಗೌಡ, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿತ್ತು.

ಮೊದಲು ಮಂಜು ಸೇವ್​ ಆದರು. ನಂತರ ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ,  ಶಮಂತ್​ ಬ್ರೋ ಗೌಡ, ಪ್ರಿಯಾಂಕ ತಿಮ್ಮೇಶ್​ ಸೇವ್​ ಆದರು. ಕೊನೆಯಲ್ಲಿ ಚಕ್ರವರ್ತಿ ಹಾಗೂ ರಘು ಉಳಿದುಕೊಂಡರು. ಚಕ್ರವರ್ತಿ ಸೇವ್​ ಆಗಿ, ರಘು ಔಟ್​ ಆದರು.

ಈ ವಾರ ಬಿಗ್​ ಬಾಸ್​ ಮನೆಯಲ್ಲಿ ರಘು ಅಷ್ಟಾಗಿ ಆ್ಯಕ್ಟಿವ್​ ಆಗಿರಲಿಲ್ಲ. ಅವರು ಅರವಿಂದ್​ಗೆ ಹೆದರುತ್ತಾರೆ ಎನ್ನುವ ಮಾತು ಕೂಡ ಕೇಳಿಬಂತು. ಪ್ರಶಾಂತ್​ ಅವರು ರಘು ಪರ ಮಾತನಾಡಿದ್ದರೂ ರಘು ಈ ವಿಚಾರದಲ್ಲಿ ಮೌನ ವಹಿಸಿದ್ದರು. ಎಲ್ಲಿಯೂ ಅವರು ಅಷ್ಟಾಗಿ  ಮಾತನಾಡಿಲ್ಲ. ಈ ಕಾರಣಕ್ಕೆ ಅವರಿಗೆ ಕಡಿಮೆ ಮತ ಬಿದ್ದಿದೆ ಎನ್ನಲಾಗುತ್ತಿದೆ. ಈಗ ಎರಡನೇ ಇನ್ನಿಂಗ್ಸ್​ನ ಎರಡನೇ ಸ್ಪರ್ಧಿಯಾಗಿ ರಘು ಎಲಿಮಿನೇಟ್​ ಆಗಿದ್ದಾರೆ. ಈ ಮೂಲಕ ಬಿಗ್​ ಬಾಸ್ ಮನೆಯಲ್ಲಿ ಅವರ 91 ದಿನಗಳ ಪ್ರಯಾಣ ಪೂರ್ಣಗೊಂಡಿದೆ.

ಇನ್ನು, ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ರಘು ಡಲ್​ ಆಗಿ ಕಾಣುತ್ತಿದ್ದರು. ಚಕ್ರವರ್ತಿ ಹಾಗೂ ಪ್ರಶಾಂತ್​ ಮನೆಯಲ್ಲಿ ಮಾತಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಶಮಂತ್​, ಪ್ರಿಯಾಂಕಾ ತಿಮ್ಮೇಶ್​  ಕೂಡ ಎಲ್ಲರನ್ನೂ ಎಂಟರ್​ಟೇನ್​ ಮಾಡುತ್ತಿದ್ದಾರೆ. ಉಳಿದವರು ಸ್ಟ್ರಾಂಗ್​ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​,  ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ಶುಭಾ ಮನೆಯಲ್ಲಿ ಮುಂದುವರಿದಿದ್ದಾರೆ.  ಇನ್ನು ಕೆಲವೇ ವಾರಗಳಲ್ಲಿ ಬಿಗ್​ ಬಾಸ್​ ಫಿನಾಲೆ ನಡೆಯಲಿದೆ.  ಹೀಗಾಗಿ, ಮುಂದಿನ ದಿನಗಳಲ್ಲಿ ಫೈಟ್​ ಮತ್ತಷ್ಟು ಜೋರಾಗಲಿದೆ.

ಇದನ್ನೂ ಓದಿ: ‘72 ದಿನಗಳ ಕಾಲ ನೋಡಿದ ಕೆಪಿ ಹೀಗೆ ಇರಲಿಲ್ಲ’; ಚಕ್ರವರ್ತಿ ಪ್ರಭಾವಕ್ಕೊಳಗಾದ ಅರವಿಂದ್​ಗೆ ಸುದೀಪ್​ ಎಚ್ಚರಿಕೆ

ಈ ವಾರ ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗೋರು ಯಾರು?; ಇಬ್ಬರ ಮೇಲೆ ತೂಗುಗತ್ತಿ

Published On - 10:09 pm, Sun, 11 July 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್