‘ನಾನಿರೋದೇ ಹೀಗೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ’; ರಕ್ಷಿತ್ ಶೆಟ್ಟಿ ಮನವಿ

ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ರಕ್ಷಿತ್​ ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಾರೆ. ಪ್ರತಿ ಸಿನಿಮಾವನ್ನು ಮಗು ರೀತಿಯಲ್ಲಿ ನೋಡುವ ಅವರು ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಾರೆ.

‘ನಾನಿರೋದೇ ಹೀಗೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ’; ರಕ್ಷಿತ್ ಶೆಟ್ಟಿ ಮನವಿ
ರಕ್ಷಿತ್​ ಶೆಟ್ಟಿ
Follow us
| Updated By: Skanda

Updated on: Jul 12, 2021 | 7:58 AM

ರಕ್ಷಿತ್​ ಶೆಟ್ಟಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ‘ರಿಚರ್ಡ್​ ಆಂಟನಿ’ ಹೆಸರಿನ ಸಿನಿಮಾ ಮೂಲಕ ರಕ್ಷಿತ್​ ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಡುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದು ಇವರ ಬಗ್ಗೆ ಪ್ರಸಾರ ಮಾಡಿದ ಸುಳ್ಳು ಸುದ್ದಿ ಹಾಗೂ ಸಿನಿಮಾ ಬಗ್ಗೆ ರಕ್ಷಿತ್​ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ನಾನಿರೋದೇ ಹೀಗೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ರಕ್ಷಿತ್​ ಮನವಿ ಮಾಡಿದ್ದಾರೆ.

ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ರಕ್ಷಿತ್​ ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಾರೆ. ಪ್ರತಿ ಸಿನಿಮಾವನ್ನು ಮಗು ರೀತಿಯಲ್ಲಿ ನೋಡುವ ಅವರು ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಾರೆ. ಇವುಗಳ ಮಧ್ಯೆ ಬ್ಯುಸಿಯಾದಾಗ ರಕ್ಷಿತ್​ಗೆ ಯಾರ ಕರೆಗಳನ್ನೂ ಸ್ವೀಕರಿಸೋಕೆ ಸಾಧ್ಯವಾಗುವುದಿಲ್ಲ. ಹೀಗಾಗಿ, ರಕ್ಷಿತ್​ ಮಾಧ್ಯಮದವರ ಕರೆ ಸ್ವೀಕರಿಸುವುದಿಲ್ಲ ಎನ್ನುವ ಮಾತಿದೆ. ಇದಕ್ಕೆ ರಕ್ಷಿತ್​ ಸ್ಪಷ್ಟನೆ ನೀಡಿದ್ದಾರೆ.

‘ನಾನು ಸ್ಕ್ರಿಪ್ಟ್​ ಕೆಲಸಕ್ಕೆ ಕೂತರೆ ಒಂದೆರಡು ಗಂಟೆ ಕೂರೋಕೆ ಆಗಲ್ಲ. ಬೆಳಗ್ಗೆ ಬರೆಯೋಕೆ ಕೂತರೆ ನಾನು ಏಳೋದು ಸಂಜೆ ಅಥವಾ ರಾತ್ರಿ ಆಗತ್ತೆ. ಮಧ್ಯೆ ಹಸಿವಾದಾಗ ಮಾತ್ರ ಎಳುತ್ತೇನೆ.  ಅಲ್ಲಿಯವರಿಗೆ ನಾನು ಮೊಬೈಲ್​ ಮುಟ್ಟಲ್ಲ. ಮೀಡಿಯಾದವರು ಕರೆ ಮಾಡಿದರೆ ನಾನು ಉದ್ದೇಶ ಪೂರ್ವಕವಾಗಿ ಕಾಲ್​ ಕಟ್​ ಮಾಡೋದಿಲ್ಲ. ಆ ಸಮಯದಲ್ಲಿ ನಾನು ಬೇರೆ ಕೆಲಸದಲ್ಲಿ ಬ್ಯುಸಿ ಇರ್ತೀನಿ ಅಷ್ಟೆ. ನಾನಿರೋದೇ ಹೀಗೆ, ದಯವಿಟ್ಟು ಅರ್ಥ ಮಾಡ್ಕೋಳಿ’ ಎಂದು ರಕ್ಷಿತ್​ ಮನವಿ ಮಾಡಿದ್ದಾರೆ.

ನಟ ರಕ್ಷಿತ್​ ಶೆಟ್ಟಿ ಹಾಗೂ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ನಡುವೆ ವೈಮನಸ್ಸು ಬೆಳೆದಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು. ಮಾಧ್ಯಮವೊಂದು ಈ ಬಗ್ಗೆ ಕಾರ್ಯಕ್ರಮ ಕೂಡ ಪ್ರಸಾರ ಮಾಡಿತ್ತು. ರಕ್ಷಿತ್​ ಬಗ್ಗೆ ಇಲ್ಲಸಲ್ಲದ ವಿಚಾರವನ್ನು ಹೇಳಲಾಗಿತ್ತು. ಈ ಬಗ್ಗೆಯೂ ರಕ್ಷಿತ್​ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!

‘ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು’; ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ ರಕ್ಷಿತ್​

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ