‘ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು’; ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ ರಕ್ಷಿತ್​

ಪುಷ್ಕರ್​ ಅವರು ಮೊದಲ ಬಾರಿ ‘ಉಳಿದವರು ಕಂಡಂತೆ’ ಟೈಮ್​ನಲ್ಲಿ ನಂಗೆ ಸಿಕ್ಕಿದ್ರು. ‘ಸಿಂಪಲ್​ ಆಗ್​ ಒಂದ್​ ಲವ್​ ಸ್ಟೋರಿ’ ನೋಡಿ ಅವರು ಖುಷಿ ಪಟ್ಟಿದ್ದರು ಎಂದು ರಕ್ಷಿತ್ ಮಾತು ಆರಂಭಿಸಿದ್ದಾರೆ.

‘ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು’; ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ ರಕ್ಷಿತ್​
ರಕ್ಷಿತ್​ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 11, 2021 | 7:50 PM

ನಟ ರಕ್ಷಿತ್​ ಶೆಟ್ಟಿ ಹಾಗೂ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ನಡುವೆ ವೈಮನಸ್ಸು ಬೆಳೆದಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು. ಮಾಧ್ಯಮವೊಂದು ಈ ಬಗ್ಗೆ ಕಾರ್ಯಕ್ರಮ ಕೂಡ ಪ್ರಸಾರ ಮಾಡಿತ್ತು. ರಕ್ಷಿತ್​ ಬಗ್ಗೆ ಇಲ್ಲಸಲ್ಲದ ವಿಚಾರವನ್ನು ಹೇಳಲಾಗಿತ್ತು. ಈ ಬಗ್ಗೆ ರಕ್ಷಿತ್​ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಪುಷ್ಕರ್​ ಮೊದಲು ಸಿಕ್ಕಿದ್ದು ಯಾವಾಗ? ಅವರ ಜತೆಗಿನ ಜರ್ನಿ ಹೇಗಿತ್ತು ಎಂದು ರಕ್ಷಿತ್​ ಮಾತನಾಡಿದ್ದಾರೆ. ‘ಪುಷ್ಕರ್​ ಅವರು ಮೊದಲ ಬಾರಿ ‘ಉಳಿದವರು ಕಂಡಂತೆ’ ಟೈಮ್​ನಲ್ಲಿ ನಂಗೆ ಸಿಕ್ಕಿದ್ರು. ‘ಸಿಂಪಲ್​ ಆಗ್​ ಒಂದ್​ ಲವ್​ ಸ್ಟೋರಿ’ ನೋಡಿ ಅವರು ಖುಷಿ ಪಟ್ಟಿದ್ದರು. ಹೀಗಾಗಿ, ಡೇಟ್ಸ್​ ಕೇಳಿಕೊಂಡು ಬಂದಿದ್ರು. ಆದರೆ, ಕೆಲ ಸಿನಿಮಾಗಳ ಕಮಿಟ್​ಮೆಂಟ್ಸ್​ ಇರುವುದರಿಂದ ಆಗುವುದಿಲ್ಲ ಎಂದಿದ್ದೆ. ‘ಉಳಿದವರು ಕಂಡಂತೆ’ ಸಿನಿಮಾ ನೋಡಿ ಡಿಸಪಾಯಿಂಟ್​ ಆಯ್ತು ಎಂದಿದ್ರು. ನಮ್ಮ ಫ್ರೆಂಡ್​ಶಿಪ್​ ಆದ್ಮೇಲೆ ಸಿನಿಮಾ ಚೆನ್ನಾಗಿದೆ ಅಂದಿದ್ರು. ಅವರು ಯಾಕೆ ಹಾಗೆ ಹೇಳಿದ್ರು ಅನ್ನೋದು ಗೊತ್ತಿಲ್ಲ’ ಎಂದಿದ್ದಾರೆ ರಕ್ಷಿತ್​.

‘ಗೋಧಿ ಬಣ್ಣ ಸಾಧಾರಾಣ ಮೈಕಟ್ಟು’ ಚಿತ್ರಕ್ಕೆ ಪುಷ್ಕರ್​, ನಾನು ಹಾಗೂ ಹೇಮಂತ್​ ರಾವ್​ ನಿರ್ಮಾಪಕರಾಗಿದ್ದೆವು. ‘ಗೋಧಿ ಬಣ್ಣ’ ರಿಮೇಕ್​ ರೈಟ್ಸ್​ ಮಾರಾಟವಾಗುವ ವಿಚಾರ ಬಂದಾಗ ಪುಷ್ಕರ್​ ಪಾಲು ಕೇಳಿದ್ರು. ಆಗ ಕೊಟ್ಟಿದ್ದೇವೆ. ‘ಕಿರಿಕ್​ ಪಾರ್ಟಿ’ ಮಾಡಬೇಕು ಎಂದಾಗ ಎಲ್ಲಾ ಪ್ರೊಡ್ಯೂಸರ್​ ರಿಜೆಕ್ಟ್​ ಮಾಡಿದ್ರು.  ದುಬೈ ಮೂಲದ ಜೆಎಸ್​ ಗುಪ್ತಾ ಅಂತ ಸಿನಿಮಾಗೆ ಇನ್ವೆಸ್ಟ್​ ಮಾಡಿದ್ರು. ಆಗ 25 ಲಕ್ಷ ಕೊಡಿ ನಾನು ಕ್ಯಾಮೆರಾ ಕೊಡ್ತೀನಿ ಅಂತ ಪುಷ್ಕರ್​ ಮುಂದೆ ಬಂದ್ರು. ಸಿನಿಮಾ ನೋಡಿದಮೇಲೆ ಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್​ ಪುಷ್ಕರ್​ಗೆ ಬಂತು. ಅದೇ ಸಮಯದಲ್ಲಿ ಹೂಡಿಕೆದಾರರಿಗೆ ನಾನು 3 ಕೋಟಿ ಕೊಡಬೇಕಿತ್ತು. ಆಗ ಪುಷ್ಕರ್​ 3 ಕೋಟಿ ನೀಡಿದ್ರು. ಸಿನಿಮಾದಿಂದ ಬಂದ ಲಾಭದಲ್ಲಿ 70 ಪರ್ಸೆಂಟ್​ ನನಗೆ, 30 ಪರ್ಸೆಂಟ್​ ಅವರಿಗೆ ಎಂದಾಯ್ತು.  ಸಿನಿಮಾ ಹಿಟ್​ ಆಗಿದ್ದಕ್ಕೆ ಎಲ್ಲರೂ ಸೆಲೆಬ್ರೇಟ್​ ಮಾಡಿದ್ವಿ’ ಎಂದಿದ್ದಾರೆ ರಕ್ಷಿತ್​.

‘ನಂತರ ‘ಅವನೇ ಶ್ರೀಮನ್ನಾರಾಯಣ’ ಮಾಡೋಣ ಎಂದು ನಿರ್ಧರಿಸಿದೆವು. ಆರಂಭದಲ್ಲಿ ಒಟ್ಟು ಬಜೆಟ್​ನಲ್ಲಿ ನಾನು 25 ಪರ್ಸೆಂಟ್​, ಪುಷ್ಕರ್ 25 ಪರ್ಸೆಂಟ್​ ಹಾಗೂ ಪ್ರಕಾಶ್​ ಗೌಡ್ರು 50 ಪರ್ಸೆಂಟ್​ ಹಾಕೋದು ಎಂದಾಗಿತ್ತು. ನಂತರ ನಾನು ನಿರ್ಮಾಣ ಮಾಡಲ್ಲ ಎಂದೆ. ಆ ಸಂದರ್ಭದಲ್ಲಿ ಬೇರೆ ನಿರ್ಮಾಪಕರನ್ನು ಹುಡಕ್ತೀನಿ ಎಂದಿದ್ದೆ. ಆದರೆ, ಪುಷ್ಕರ್​ ಅವರು ನಾನೇ ಇನ್ವೆಸ್ಟ್ ಮಾಡ್ತೀನಿ ಅಂತೀನಿ ಎಂದರು. ಶ್ರೀಮನ್ನಾರಾಯಣ ಬಜೆಟ್​ ಜಾಸ್ತಿ ಆಗ್ತಾ ಹೋಯ್ತು. ಸಿನಿಮಾದ ಬಜೆಟ್​ನ ಅರ್ಧದಷ್ಟು ಬಡ್ಡಿ ಆಯ್ತು. ಇದು ನಮ್ಮ ತಪ್ಪಲ್ಲ, ಸಿನಿಮಾದ ತಪ್ಪಲ್ಲ. ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರದ ತಪ್ಪು’ ಎಂದಿದ್ದಾರೆ ರಕ್ಷಿತ್​.

‘ಸಿನಿಮಾ ಲಾಸ್ ಆಯ್ತಾ? ನಾನು ಸಹಾಯ ಮಾಡ್ತೀನಿ ಎಂದು ಪುಷ್ಕರ್​ಗೆ ಹೇಳಿದೆ. ನನಗೆ ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು. ಹೀಗಾಗಿ, ‘777 ಚಾರ್ಲಿ’ ಸಿನಿಮಾ ಇಟ್ಟುಕೊಂಡು 20 ಕೋಟಿ ತೆಗೆದುಕೊಂಡೆ. ಶ್ರೀಮನ್ನಾರಾಯಣದಲ್ಲಿ ಎಲ್ಲರಿಗೂ ಕೋಡೋಕೆ ಬಾಕಿ ಇದ್ದ ಹಣವನ್ನು ಚಾರ್ಲಿಯಿಂದ ಬಂದ ಅಮೌಂಟ್​ನಿಂದ ಕ್ಲಿಯರ್ ಮಾಡಿದ್ದೇನೆ. ಉಳಿದ ಹಣವನ್ನು ಪುಷ್ಕರ್​​ಗೆ ನೀಡಿದ್ದೆ. ಇಷ್ಟಾದ ಮೇಲೂ ನನ್ನ ಸಿನಿಮಾ ಬಗ್ಗೆ ಲೂಸ್​ ಟಾಕ್​ ಮಾಡೋದೇಕೆ? ನೀವು ಸಿನಿಮಾನ ಪ್ರೀತಿ ಮಾಡಿಲ್ಲ. ಉದ್ಯುಮ ನೋಡಿಕೊಂಡ್ರಿ’ ಎಂದು ರಕ್ಷಿತ್ ಬೇಸರ ಹೊರ ಹಾಕಿದರು.

ಇದನ್ನೂ ಓದಿ: Hombale Films and Rakshith Shetty: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!

Published On - 7:40 pm, Sun, 11 July 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ