AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆತ ಯಾರು ದಯವಿಟ್ಟು ಹೇಳಿ’; ಹುಡುಗನ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ದುಂಬಾಲು ಬಿದ್ದ ಅಭಿಮಾನಿಗಳು

ರಶ್ಮಿಕಾ ಒಂದು ಅದ್ಭುತ ಸೆಲ್ಫಿಯನ್ನು ಇನ್​ಸ್ಟಾಗ್ರಾಮ್​ ಹಾಗೂ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ‘ಇದನ್ನು ಪೋಸ್ಟ್ ಮಾಡಲೇಬೇಕು; ಆತ ಹೇಳಿದ’ ಎಂದು ಅವರು ಬರೆದುಕೊಂಡಿದ್ದಾರೆ.

‘ಆತ ಯಾರು ದಯವಿಟ್ಟು ಹೇಳಿ’; ಹುಡುಗನ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ದುಂಬಾಲು ಬಿದ್ದ ಅಭಿಮಾನಿಗಳು
‘ಆತ ಯಾರು ದಯವಿಟ್ಟು ಹೇಳಿ’ ಹುಡುಗನ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ದುಂಬಾಲು ಬಿದ್ದ ಅಭಿಮಾನಿಗಳು
TV9 Web
| Edited By: |

Updated on: Jul 11, 2021 | 7:03 PM

Share

ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಇಂಡಸ್ಟ್ರಿಗೆ ಬಂದು ಐದು ವರ್ಷ ಕಳೆಯುತ್ತಾ ಬಂದಿದೆ. ಅತಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿಕೊಂಡ ಹೆಚ್ಚುಗಾರಿಕೆ ರಶ್ಮಿಕಾ ಅವರದ್ದು. ಅಭಿಮಾನಿಗಳ ಜತೆ ಸಂಪರ್ಕದಲ್ಲಿರಲು ರಶ್ಮಿಕಾ ನಿರಂತರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರುತ್ತಾರೆ. ಈಗ ಅವರು ಹಾಕಿರೋ ಸೋಶಿಯಲ್​ ಮೀಡಿಯಾ ಪೋಸ್ಟ್​ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪೋಸ್ಟ್​ ನೋಡಿದ ಅನೇಕರು ಆತ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ರಶ್ಮಿಕಾ ಒಂದು ಅದ್ಭುತ ಸೆಲ್ಫಿಯನ್ನು ಇನ್​ಸ್ಟಾಗ್ರಾಮ್​ ಹಾಗೂ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ‘ಇದನ್ನು ಪೋಸ್ಟ್ ಮಾಡಲೇಬೇಕು; ಆತ ಹೇಳಿದ’ ಎಂದು ಅವರು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆತ ಯಾರು ಎನ್ನುವ ಹುಳ ಅಭಿಮಾನಿಗಳ ತರೆಯಲ್ಲಿ ಕೊರೆಯೋಕೆ ಆರಂಭವಾಗಿತ್ತು. ಈ ಬಗ್ಗೆ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಚರ್ಚೆ ಕೂಡ ಮಾಡಿದ್ದರು.

ಕುತೂಹಲ ತಾಳಲಾರದೆ ಓರ್ವ ಅಭಿಮಾನಿ ‘ಆತ ಯಾರು?’ ಎಂದು ರಶ್ಮಿಕಾಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಶ್ಮಿಕಾ ಉತ್ತರಿಸಿದ್ದಾರೆ. ಆತ ಎಂದರೆ, ‘ನನ್ನ ಆಲೋಚನೆಯಲ್ಲಿರು ಫ್ಯಾನ್​ ಬಾಯ್’​ ಎಂದು ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಕೂಡ ರಶ್ಮಿಕಾ ಇದೇ ರೀತಿ ಪ್ರಶ್ನೋತ್ತರ ನಡೆಸಿದಾಗ ನಿಮ್ಮ ಬಾಯ್ ಫ್ರೆಂಡ್​ ಯಾರು ಎಂಬ ಪ್ರಶ್ನೆ ಎದುರಾಗಿತ್ತು. ‘ಕೆಲಸವೇ ನನ್ನ ಬಾಯ್​ಫ್ರೆಂಡ್​. ಅದನ್ನು ಬಿಟ್ಟರೆ ನನಗೆ ಬೇರೆ ಯಾವುದಕ್ಕೂ ಸಮಯ ಇಲ್ಲ’ ಎಂದು ಅವರು ಉತ್ತರ ನೀಡಿದ್ದರು. ಸದ್ಯ ಬಾಲಿವುಡ್​ನಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’, ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ತೆರೆ ಹಂಚಿಕೊಳ್ಳುತ್ತಿರುವ ‘ಪುಷ್ಪ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ.

ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ, ಬಾಲಿವುಡ್​ನ ‘ಗುಡ್​ಬೈ’ ಮತ್ತು ‘ಮಿಷನ್​ ಮಜ್ನು’ ಸಿನಿಮಾಗಳ ಶೂಟಿಂಗ್​ ಸಲುವಾಗಿ ಅವರಿಗೆ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಹೊಸ ಅಪಾರ್ಟ್​ಮೆಂಟ್​ ಕೂಡ ಖರೀದಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅವರಿಗೆ ಸಿಕ್ಕಾಟ್ಟೆ ಬೇಡಿಕೆ ಇದೆ. ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ನಟಿಸಿರುವ ಬಹುನಿರೀಕ್ಷಿತ ‘ಪುಷ್ಪ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಇದನ್ನೂ ಓದಿ: Rashmika Mandanna : ಮುಂಬೈನ ಜುಹುವಿನಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ!

‘ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’​; ನನ್ನ ಮದುವೆ ಆಗಿ ಎಂದು ನೇರವಾಗಿ ಕೇಳಿದವನಿಗೆ ರಶ್ಮಿಕಾ ಖಡಕ್​ ಉತ್ತರ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?