‘ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’​; ನನ್ನ ಮದುವೆ ಆಗಿ ಎಂದು ನೇರವಾಗಿ ಕೇಳಿದವನಿಗೆ ರಶ್ಮಿಕಾ ಖಡಕ್​ ಉತ್ತರ

ಶೂಟಿಂಗ್​ ಬಿಡುವಿನಲ್ಲೇ ಮಂಗಳವಾರ (ಜೂ.29) ಅಭಿಮಾನಿಗಳಿಂದ ರಶ್ಮಿಕಾ ಪ್ರಶ್ನೆ ಆಹ್ವಾನಿಸಿದರು. ಆಗ ಒಬ್ಬಾತ ನೇರವಾಗಿ ‘ನನ್ನನ್ನು ಮದುವೆ ಮಾಡಿಕೊಳ್ಳಿ’ ಎಂದು ಕೇಳಿದ್ದಾನೆ.

‘ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’​; ನನ್ನ ಮದುವೆ ಆಗಿ ಎಂದು ನೇರವಾಗಿ ಕೇಳಿದವನಿಗೆ ರಶ್ಮಿಕಾ ಖಡಕ್​ ಉತ್ತರ
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Jun 29, 2021 | 4:07 PM

ಅತಿ ಹೆಚ್ಚು ಬ್ಯುಸಿ ಆಗಿರುವ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಮುಂಚೂಣಿಯಲ್ಲಿ ಇದೆ. ಬಹುಭಾಷೆಯಲ್ಲಿ ಅವರಿಗೆ ಬೇಡಿಕೆ ಇದೆ. ಸಿನಿಮಾ ಕೆಲಸಗಳ ಒತ್ತಡ ಎಷ್ಟೇ ಇದ್ದರೂ ಕೂಡ ಅವರು ಅಭಿಮಾನಿಗಳಿಗಾಗಿ ಒಂದಷ್ಟು ಸಮಯ ಮೀಸಲಿಟ್ಟಿರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಈ ವೇಳೆ ಅವರಿಗೆ ಅನೇಕ ಬಗೆಯ ಪ್ರಶ್ನೆಗಳು ಎದುರಾಗುತ್ತವೆ. ಮದುವೆ ಪ್ರಪೋಸಲ್​ಗಳು ಕೂಡ ಬರುತ್ತವೆ! ಅದಕ್ಕೆ ರಶ್ಮಿಕಾ ಅಷ್ಟೇ ಜಾಣತನದಿಂದ ಉತ್ತರ ನೀಡುತ್ತಾರೆ.

ಮಂಗಳವಾರ (ಜೂ.29) ಶೂಟಿಂಗ್​ ಬಿಡುವಿನಲ್ಲಿ ಅಭಿಮಾನಿಗಳಿಂದ ರಶ್ಮಿಕಾ ಪ್ರಶ್ನೆ ಆಹ್ವಾನಿಸಿದರು. ಆಗ ಒಬ್ಬಾತ ನೇರವಾಗಿ ‘ನನ್ನನ್ನು ಮದುವೆ ಮಾಡಿಕೊಳ್ಳಿ’ ಎಂದು ಕೇಳಿದ್ದಾನೆ. ಅದಕ್ಕೆ ಉತ್ತರಿಸಿರುವ ಕಿರಿಕ್​ ಕುವರಿ ರಶ್ಮಿಕಾ, ‘ಕೊನೇಪಕ್ಷ ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’ ಎಂದು ಹೇಳಿದ್ದಾರೆ. ಇದನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ನಿಮಗೆ ಎಷ್ಟು ಭಾಷೆ ಬರುತ್ತದೆ ಎಂದು ಕೇಳಿದ್ದಕ್ಕೆ ಕೆಲವು ಸೆಕೆಂಡ್​ಗಳ ಕಾಲ ಲೆಕ್ಕಹಾಕಿ ‘6 ಭಾಷೆ ಬರುತ್ತದೆ’ ಅಂತ ರಶ್ಮಿಕಾ ಉತ್ತರಿಸಿದ್ದಾರೆ. ‘ಎಲ್ಲರೂ ನಿಮ್ಮನ್ನು ನ್ಯಾಷನಲ್ ಕ್ರಶ್​ ಅಂತ ಕರೆಯುವಾಗ ನಿಮಗೆ ಏನು ಅನಿಸುತ್ತದೆ’ ಎಂಬ ಪ್ರಶ್ನೆಗೆ ‘ನಾಚಿಕೆ ಆಗುತ್ತದೆ’ ಎಂಬ ರೀತಿಯಲ್ಲಿ ರಶ್ಮಿಕಾ ಎಕ್ಸ್​ಪ್ರೆಷನ್​ ನೀಡಿದ್ದಾರೆ. ವಿಜಯ್​ ದೇವರಕೊಂಡ ಜೊತೆಗೆ ಇರುವ ತಮ್ಮ ನೆಚ್ಚಿನ​ ಫೋಟೋ ಯಾವುದು ಎಂಬುದನ್ನು ಕೂಡ ಅವರು ತೋರಿಸಿದ್ದಾರೆ.

ಈ ಹಿಂದೆ ಕೂಡ ರಶ್ಮಿಕಾ ಇದೇ ರೀತಿ ಪ್ರಶ್ನೋತ್ತರ ನಡೆಸಿದಾಗ ನಿಮ್ಮ ಬಾಯ್ ಫ್ರೆಂಡ್​ ಯಾರು ಎಂಬ ಪ್ರಶ್ನೆ ಎದುರಾಗಿತ್ತು. ‘ಕೆಲಸವೇ ನನ್ನ ಬಾಯ್​ಫ್ರೆಂಡ್​. ಅದನ್ನು ಬಿಟ್ಟರೆ ನನಗೆ ಬೇರೆ ಯಾವುದಕ್ಕೂ ಸಮಯ ಇಲ್ಲ’ ಎಂದು ಅವರು ಉತ್ತರ ನೀಡಿದ್ದರು. ಸದ್ಯ ಬಾಲಿವುಡ್​ನಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’, ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ತೆರೆ ಹಂಚಿಕೊಳ್ಳುತ್ತಿರುವ ‘ಪುಷ್ಪ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ:

ಮುಂಬೈನಲ್ಲಿ ಹೊಸ ಅಪಾರ್ಟ್​ಮೆಂಟ್​ ಸೇರಿಕೊಂಡ ರಶ್ಮಿಕಾ; ಅಲ್ಲೇ ಸೆಟ್ಲ್​ ಆಗ್ತಾರಾ ಕೊಡಗಿನ ಕುವರಿ?

ಪ್ಲೀಸ್​.. ಇಂಥ ಕೆಲಸ ಮಾಡಬೇಡಿ; ಮನನೊಂದ ರಶ್ಮಿಕಾ ಪರಿಪರಿಯಾಗಿ ಬೇಡಿಕೊಂಡಿದ್ದೇಕೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ