ಮುಂಬೈನಲ್ಲಿ ಹೊಸ ಅಪಾರ್ಟ್​ಮೆಂಟ್​ ಸೇರಿಕೊಂಡ ರಶ್ಮಿಕಾ; ಅಲ್ಲೇ ಸೆಟ್ಲ್​ ಆಗ್ತಾರಾ ಕೊಡಗಿನ ಕುವರಿ?

Rashmika Mandanna: ಅನ್​ಲಾಕ್​ ಪ್ರಕ್ರಿಯೆ ಶುರು ಆಗುತ್ತಿದ್ದಂತೆಯೇ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿನ ತಮ್ಮ ಹೊಸ ಅಪಾರ್ಟ್​ಮೆಂಟ್​ಗೆ ಶಿಫ್ಟ್​ ಆಗಿದ್ದಾರೆ. ಈ ಬಗ್ಗೆ ಅವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಮುಂಬೈನಲ್ಲಿ ಹೊಸ ಅಪಾರ್ಟ್​ಮೆಂಟ್​ ಸೇರಿಕೊಂಡ ರಶ್ಮಿಕಾ; ಅಲ್ಲೇ ಸೆಟ್ಲ್​ ಆಗ್ತಾರಾ ಕೊಡಗಿನ ಕುವರಿ?
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Jun 26, 2021 | 2:24 PM

ನಟಿ ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ. ಬಹುಭಾಷೆಯಲ್ಲಿ ಅವರಿಗೆ ಭರ್ಜರಿ ಡಿಮ್ಯಾಂಡ್​ ಇದೆ. ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಬಾಲಿವುಡ್​ವರೆಗೆ ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆಯೇ ಅವರ ತಿರುಗಾಟ ಜೋರಾಗಿದೆ. ಟಾಲಿವುಡ್​ ಸಿನಿಮಾಗಳ ಸಲುವಾಗಿ ಹೈದರಾಬಾದ್​ನಲ್ಲಿ ಇರುತ್ತಿದ್ದ ರಶ್ಮಿಕಾ ಈಗ ಬಾಲಿವುಡ್​ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಮುಂಬೈನಲ್ಲಿ ಮನೆ ಮಾಡುವುದು ಅನಿವಾರ್ಯ. ಹಾಗಾಗಿ ಅವರು ಮುಂಬೈನಲ್ಲಿ ಹೊಸ ಅಪಾರ್ಟ್​ಮೆಂಟ್​ ಖರೀದಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನಕ್ಕೆ ಇಳಿಮುಖ ಆಗುತ್ತಿದೆ. ಹಾಗಾಗಿ ಸಿನಿಮಾ ಚಟುವಟಿಕೆಗಳು ಗರಿಗೆದರುತ್ತಿವೆ. ಈ ಸಮಯಕ್ಕೆ ಸರಿಯಾಗಿ ರಶ್ಮಿಕಾ ಅವರು ಮುಂಬೈನಲ್ಲಿ ತಮ್ಮ ಹೊಸ ಅಪಾರ್ಟ್​ಮೆಂಟ್​ಗೆ ಶಿಫ್ಟ್​ ಆಗಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಮಾಹಿತಿ ನೀಡಿದ್ದಾರೆ.

‘ಇವತ್ತು ತುಂಬ ಕೆಲಸ ಆಯಿತು. ಕಡೆಗೂ ನಾನು ಅಪಾರ್ಟ್​ಮೆಂಟ್​ಗೆ ಶಿಫ್ಟ್​ ಆದೆ. ತುಂಬ ವಸ್ತುಗಳನ್ನು ಖರೀದಿಸಬೇಕಿತ್ತು. ಅದು ಇನ್ನೂ ಮುಗಿದಿಲ್ಲ. ಅದು ಎಂದಿಗೂ ಮುಗಿಯುವಂಥದ್ದು ಕೂಡ ಅಲ್ಲ. ಔರಾ (ಶ್ವಾನ) ಇಡೀ ದಿನ ಹೊರಗೆ ಇದ್ದಳು. ನನ್ನ ಇಬ್ಬರು ಸ್ನೇಹಿತರನ್ನು ಭೇಟಿಯಾಗಬೇಕಿತ್ತು. ಅಪಾರ್ಟ್​ಮೆಂಟ್​ ಸಜ್ಜುಗೊಳಿಸಬೇಕಿತ್ತು. ನನ್ನ ಅಸಿಸ್ಟೆಂಟ್​ ಸಾಯಿ ನನಗೆ ಸಹಾಯ ಮಾಡಿದ. ನನಗೆ ಮತ್ತು ಔರಾಗೆ ತುಂಬ ಸುಸ್ತಾಗಿತ್ತು’ ಎಂದು ರಶ್ಮಿಕಾ ತಮ್ಮ ದಿನಚರಿ ಬಗ್ಗೆ ಬರೆದುಕೊಂಡಿದ್ದರು.

ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ರಶ್ಮಿಕಾಗೆ ಬಾಲಿವುಡ್​ನಿಂದ ಒಳ್ಳೊಳ್ಳೆಯ ಆಫರ್​ಗಳು ಸಿಗುತ್ತಿವೆ. ಹಿಂದಿಯಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾದ ಹೆಸರು ‘ಮಿಷನ್​ ಮಜ್ನು’ ಆ ಚಿತ್ರದಲ್ಲಿ ಅವರು ಸ್ಟಾರ್​ ನಟ ಸಿದ್ಧಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿದ್ದಾರೆ. ಎರಡನೇ ಚಿತ್ರ ‘ಗುಡ್​ಬೈ’ನಲ್ಲಿ ಅಮಿತಾಭ್​ ಬಚ್ಚನ್​ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ವಿಶೇಷ. ಈ ಸಿನಿಮಾದಲ್ಲಿ ಅಮಿತಾಭ್​ ಹಾಗೂ ರಶ್ಮಿಕಾ ಅಪ್ಪ-ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ನಟಿಸಿರುವ ‘ಪುಷ್ಪ’ ಚಿತ್ರ ಎರಡು ಪಾರ್ಟ್​ಗಳಲ್ಲಿ ಮೂಡಿಬರುವ ಬಗ್ಗೆ ಸುದ್ದಿ ಹರಡಿದೆ. ಎರಡನೇ ಪಾರ್ಟ್​ಗೆ ಬೇರೆ ಶೀರ್ಷಿಕೆ ಇಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಟೀಸರ್​ ಮತ್ತು ಪೋಸ್ಟರ್​ಗಳ ಮೂಲಕ ‘ಪುಷ್ಪ’ ದೊಡ್ಡಮಟ್ಟದ ನಿರೀಕ್ಷೆ ಸೃಷ್ಟಿ ಮಾಡಿದೆ.

ಇದನ್ನೂ ಓದಿ:

ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಮುಖಕ್ಕೆ ಮುತ್ತಿಟ್ಟ ಔರಾ; ರಾತ್ರೋರಾತ್ರಿ ವೈರಲ್​ ಆಯ್ತು ಫೋಟೋ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ