AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ ಮುಖಕ್ಕೆ ಮುತ್ತಿಟ್ಟ ಔರಾ; ರಾತ್ರೋರಾತ್ರಿ ವೈರಲ್​ ಆಯ್ತು ಫೋಟೋ

ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋ ವೈರಲ್​ ಆಗಿದೆ. ಅದರಲ್ಲಿ ರಶ್ಮಿಕಾ ಮಂದಣ್ಣ ಮುಖಕ್ಕೆ ಔರಾ ಮುತ್ತಿಡುತ್ತಿರುವುದನ್ನು ಕಂಡು ಅಭಿಮಾನಿಗಳು ನಾನಾ ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮುಖಕ್ಕೆ ಮುತ್ತಿಟ್ಟ ಔರಾ; ರಾತ್ರೋರಾತ್ರಿ ವೈರಲ್​ ಆಯ್ತು ಫೋಟೋ
ರಶ್ಮಿಕಾ ಮಂದಣ್ಣ
TV9 Web
| Edited By: |

Updated on: Jun 19, 2021 | 1:44 PM

Share

ನಟಿ ರಶ್ಮಿಕಾ ಮಂದಣ್ಣ ಹಲವು ಕಾರಣಗಳಿಗಾಗಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಸಿನಿಮಾ ಅಥವಾ ವೈಯಕ್ತಿಕ ಜೀವನದ ಬಗ್ಗೆ ಏನಾದರೊಂದು ನ್ಯೂಸ್​ ವೈರಲ್​ ಆಗುತ್ತಿರುತ್ತದೆ. ಸದ್ಯ ಲಾಕ್​ಡೌನ್​ ಇರುವುದರಿಂದ ರಶ್ಮಿಕಾ ಮಂದಣ್ಣ ಹೊರಗಡೆ ಹೋಗಿ ಹೆಚ್ಚು ಜನರ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಹಾಗಂತ ಅವರೀಗ ಒಂಟಿಯಾಗಿಲ್ಲ. ಅವರೊಂದು ಮುದ್ದಾದ ನಾಯಿ ಸಾಕಿದ್ದು, ಅದಕ್ಕೆ ಔರಾ ಎಂದು ಹೆಸರು ಇಟ್ಟಿದ್ದಾರೆ. ರಶ್ಮಿಕಾ ಮುಖಕ್ಕೆ ಔರಾ ಮುತ್ತು ಕೊಡುತ್ತಿರುವ ಫೋಟೋ ವೈರಲ್​ ಆಗಿದೆ.

ರಶ್ಮಿಕಾ ಎಲ್ಲೇ ಹೋದರೂ ಅವರನ್ನು ಔರಾ ಹಿಂಬಾಲಿಸುತ್ತದೆ. ಹಾಗಾಗಿ ಅವರಿಗೆ ಈ ನಾಯಿ ಕಂಡರೆ ಅತಿಯಾದ ಪ್ರೀತಿ. ಈಗಾಗಲೇ ಅವರು ಈ ಬಗ್ಗೆ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈಗ ಅವರು ಹೊಸ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ರಶ್ಮಿಕಾ ಮುಖಕ್ಕೆ ಔರಾ ಮುತ್ತಿಡುತ್ತಿರುವುದನ್ನು ಕಂಡು ಅಭಿಮಾನಿಗಳು ನಾನಾ ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ನಾನು ಮತ್ತು ಔರಾ ನಿಮ್ಮ ಫೀಡ್​ನಲ್ಲಿ’ ಎಂದು ಈ ಫೋಟೋಗೆ ರಶ್ಮಿಕಾ ಕ್ಯಾಪ್ಷನ್​ ನೀಡಿದ್ದಾರೆ.

‘ಹೊರ ಜಗತ್ತಿನ ಎಲ್ಲ ಗದ್ದಲದ ನಡುವೆಯೂ ನಾನು ನನ್ನ ಖುಷಿಯ ಕಣಜವನ್ನು ಕಂಡುಕೊಂಡಿದ್ದೇನೆ. ಇದು ಸದಾ ನನ್ನನ್ನು ಖುಷಿಯಾಗಿ ಇಡುತ್ತದೆ. ನಿಮ್ಮೆಲ್ಲರಿಗೂ ನಾನು ಪುಟ್ಟ ಔರಾ ಪರಿಚಯ ಮಾಡಿಕೊಡುತ್ತಿದ್ದೇನೆ. ಮೂರು ಸೆಕೆಂಡ್​ನೊಳಗೆ ಪ್ರೀತಿಯಲ್ಲಿ ಬೀಳಬಹುದು ಎನ್ನುತ್ತಾರೆ. ಆದರೆ ಇವಳು ಕೇವಲ 0.3 ಸೆಕೆಂಡ್​ನಲ್ಲಿ ನನ್ನ ಹೃದಯ ಕದ್ದಳು’ ಎಂದು ಕೆಲವೇ ದಿನಗಳ ಹಿಂದೆ ತಮ್ಮ ಪ್ರೀತಿಯ ಶ್ವಾನವನ್ನು ರಶ್ಮಿಕಾ ಪರಿಚಯ ಮಾಡಿಕೊಟ್ಟಿದ್ದರು.

ರಶ್ಮಿಕಾ ಕೈಯಲ್ಲಿ ಈಗ ಹಲವಾರು ಸಿನಿಮಾಗಳಿವೆ. ದಕ್ಷಿಣದಲ್ಲಿ ಮಿಂಚಿದ ಬಳಿಕ ಅವರು ಬಾಲಿವುಡ್​ಗೂ ಕಾಲಿಟ್ಟಿರುವುದರಿಂದ ಅವರಿಗೆ ದೇಶಾದ್ಯಂತ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಶ್ರೀಲಂಕಾದಿಂದಲೂ ಕೆಲವರು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’, ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ತೆಲುಗಿನಲ್ಲಿ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸಿರುವ ‘ಪುಷ್ಪ’ ಚಿತ್ರ ದೊಡ್ಡ ಮಟ್ಟದ ಹೈಪ್ ಸೃಷ್ಟಿ ಮಾಡಿದೆ. ಆ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಮೂಡಿಬರಲಿದೆ ಎಂಬ ಮಾಹಿತಿ ಕೂಡ ಕೇಳಿ ಬಂದಿದೆ.

ಇದನ್ನೂ ಓದಿ:

ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ಗಳ ಸುರಿಮಳೆ; ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್​ ಎನ್ನಲೇಬೇಕು

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?