ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ಗಳ ಸುರಿಮಳೆ; ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್​ ಎನ್ನಲೇಬೇಕು

Rashmika Mandanna: ಅನೇಕ ಅಭಿಮಾನಿಗಳು ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ಎಷ್ಟರಮಟ್ಟಿಗೆಂದರೆ, ಆ ಕುರಿತು ಸ್ವತಃ ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆ ನೀಡುವುದು ಅನಿವಾರ್ಯ ಆಯಿತು.

ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ಗಳ ಸುರಿಮಳೆ; ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್​ ಎನ್ನಲೇಬೇಕು
ರಕ್ಷಿತ್​-ರಶ್ಮಿಕಾ
Follow us
TV9 Web
| Updated By: ಮದನ್​ ಕುಮಾರ್​

Updated on: Jun 08, 2021 | 4:10 PM

ನಟಿ ರಶ್ಮಿಕಾ ಮಂದಣ್ಣ ಅವರನ್ನು ಕಂಡರೆ ಒಂದು ವರ್ಗದ ನೆಟ್ಟಿಗರು ಉರಿದು ಬೀಳುತ್ತಾರೆ. ಮನಬಂದಂತೆ ಟ್ರೋಲ್ ಮಾಡುತ್ತಾರೆ. ಅವರ ಮಾಜಿ ಪ್ರಿಯಕರ ರಕ್ಷಿತ್​ ಶೆಟ್ಟಿಯ ವಿಚಾರ ಬಂದಾಗಲೂ ರಶ್ಮಿಕಾಗೆ ಖಾರದ ಕಮೆಂಟ್​ಗಳ ಮೂಲಕ ಜನರು ತಿರುಗೇಟು ನೀಡುತ್ತಾರೆ. ಆದರೆ ಇದೆಲ್ಲ ಸರಿಯಲ್ಲ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ. ಹಾಗೆ ನೋಡಿದರೆ, ಈಗ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್​ ಶೆಟ್ಟಿ ನಡುವೆ ಯಾವುದೇ ಕಿರಿಕ್​ ಇಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ಮಾತ್ರ ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ ಮಾಡುತ್ತಿರುವುದು ರಕ್ಷಿತ್​ಗೆ ಬೇಸರ ಮೂಡಿಸಿದೆ.

ಜೂ.6ರಂದು ರಕ್ಷಿತ್​ ಶೆಟ್ಟಿ 38ನೇ ವರ್ಷದ ಬರ್ತ್​​ಡೇ ಆಚರಿಸಿಕೊಂಡರು. ಅಂದು ಅವರ ‘777 ಚಾರ್ಲಿ’ ಸಿನಿಮಾದ ಟೀಸರ್​ ರಿಲೀಸ್​ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲು ಅವರು ಸೋಮವಾರ (ಜೂ.7) ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದರು. ಈ ವೇಳೆ ಅನೇಕ ಅಭಿಮಾನಿಗಳು ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ಎಷ್ಟರಮಟ್ಟಿಗೆಂದರೆ, ಆ ಕುರಿತು ಸ್ವತಃ ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆ ನೀಡುವುದು ಅನಿವಾರ್ಯ ಆಯಿತು.

‘ಕೆಲವೊಂದು ಕಮೆಂಟ್​ಗಳನ್ನು ನೋಡೋಕೆ ಬಹಳ ಬೇಜಾರಾಗುತ್ತೆ. ಆದರೆ ಆ ಕಮೆಂಟ್​ಗಳು ನನ್ನ ಬಗ್ಗೆ ಇರೋದಲ್ಲ. ಬೇರೆಯವರ ಬಗ್ಗೆ ಇರುವಂಥದ್ದು. ನಾನು ಎಲ್ಲರಲ್ಲೂ ಒಂದು ಮನವಿ ಮಾಡಿಕೊಳ್ಳುತ್ತೇನೆ. ಹಳೆಯದನ್ನು ಬಿಟ್ಟು ಬಿಡೋಣ. ಮುಗಿದು ಹೋಗಿದ್ದು ಆಗಿ ಹೋಯ್ತು. ಅದರ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ಯಾವುದೇ ಮನುಷ್ಯರಿಗೂ ಅಗೌರವ ತೋರಿಸುವುದು ಬೇಡ. ನಮ್ಮ ಬಗ್ಗೆ ನಾವೇ ಅಸಹ್ಯಪಟ್ಟುಕೊಳ್ಳುವ ರೀತಿಯ ಕಮೆಂಟ್​ಗಳನ್ನು ನಾವು ಬೇರೆಯವರಿಗೂ ಮಾಡಬಾರದು’ ಎಂದು ರಕ್ಷಿತ್​ ಹೇಳಿದ್ದಾರೆ.

‘ಎಲ್ಲರಲ್ಲೂ ನಾನು ಮನವಿ ಮಾಡಿಕೊಳ್ಳುತ್ತೇನೆ. ಮೊದಲು ಮನುಷ್ಯರಾಗೋಣ. ಎಲ್ಲರನ್ನೂ ಗೌರವಿಸೋಣ. ಎಲ್ಲರಿಗೂ ಅವರದ್ದೇ ಆದ ಬದುಕು ಇದೆ. ಈ ಕಮೆಂಟ್​ ಸೆಕ್ಷನ್​ನಲ್ಲಿ ನಾನು ಒಳ್ಳೆಯ ಕಮೆಂಟ್​ಗಳನ್ನು ನೋಡೋಕೆ ಇಷ್ಟಪಡ್ತೀನಿ. ನಮ್ಮ ಸಿನಿಮಾ ಬಗ್ಗೆ ಕಮೆಂಟ್ಸ್​ ನೋಡೋಕೆ ಇಷ್ಟಪಡ್ತೀನಿ’ ಎನ್ನುವ ಮೂಲಕ ಅಭಿಮಾನಿಗಳಿಗೆ ರಕ್ಷಿತ್​ ಶೆಟ್ಟಿ ಬುದ್ಧಿಮಾತು ಹೇಳಿದ್ದಾರೆ.

ಇಷ್ಟು ಕೂಲ್​ ಆಗಿ ಉತ್ತರಿಸಿರುವ ಅವರಿಗೆ ಅಭಿಮಾನಿಗಳು ಹಲವು ಬಗೆಯಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ಮೇಲಾದರೂ ರಶ್ಮಿಕಾ ಮಂದಣ್ಣ ಬಗ್ಗೆ ಕೆಟ್ಟ ಕಮೆಂಟ್​ಗಳು ನಿಲ್ಲುತ್ತವೋ ಇಲ್ಲವೋ ಎಂಬುದು ನೆಟ್ಟಿಗರ ವರ್ತನೆಗೆ ಮೇಲೆ ನಿಂತಿದೆ.

ಇದನ್ನೂ ಓದಿ:

Rakshit Shetty Birthday: ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ ಅಭಿಮಾನಿಗಳ ಪಾಲಿಗೆ ‘ಭರವಸೆಯ ಸ್ಟಾರ್’​ ಆಗಿದ್ದು ಹೇಗೆ?

ಪ್ರೀತಿ ಹುಟ್ಟೋಕೆ​ 3 ಸೆಕೆಂಡ್​ ಸಾಕು; ಆದ್ರೆ ರಶ್ಮಿಕಾಗೆ 0.3 ಸೆಕೆಂಡ್​ನಲ್ಲಿ ಹೊಸ ಹೃದಯದ ಜೊತೆ ಲವ್ ಶುರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ