ಪ್ರೀತಿ ಹುಟ್ಟೋಕೆ​ 3 ಸೆಕೆಂಡ್​ ಸಾಕು; ಆದ್ರೆ ರಶ್ಮಿಕಾಗೆ 0.3 ಸೆಕೆಂಡ್​ನಲ್ಲಿ ಹೊಸ ಹೃದಯದ ಜೊತೆ ಲವ್ ಶುರು

ಪ್ರೀತಿ ಹುಟ್ಟೋಕೆ​ 3 ಸೆಕೆಂಡ್​ ಸಾಕು; ಆದ್ರೆ ರಶ್ಮಿಕಾಗೆ 0.3 ಸೆಕೆಂಡ್​ನಲ್ಲಿ ಹೊಸ ಹೃದಯದ ಜೊತೆ ಲವ್ ಶುರು
ರಶ್ಮಿಕಾ ಮಂದಣ್ಣ

‘ಹೊರ ಜಗತ್ತಿನ ಎಲ್ಲ ಗದ್ದಲದ ನಡುವೆಯೂ ನಾನು ನನ್ನ ಖುಷಿಯ ಕಣಜವನ್ನು ಕಂಡುಕೊಂಡಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಏನಿದು ಹೊಸ ವಿಷ್ಯ? ಇಲ್ಲಿದೆ ಮಾಹಿತಿ

TV9kannada Web Team

| Edited By: Madan Kumar

Jun 06, 2021 | 1:03 PM

ನಟಿ ರಶ್ಮಿಕಾ ಮಂದಣ್ಣ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ಅವರಿಗೆ ಕೈ ತುಂಬಾ ಆಫರ್​ಗಳಿಗೆ. ಆದರೆ ಲಾಕ್​ಡೌನ್​ ಇರುವುದರಿಂದ ಅವರು ಸದ್ಯಕ್ಕೆ ಮನೆಯಲ್ಲೇ ಇದ್ದಾರೆ. ಈ ನಡುವೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ತಮ್ಮ ಕೆಲವು ಇಂಟರೆಸ್ಟಿಂಗ್​ ದಿನಚರಿಯ ಬಗ್ಗೆ ಆಗಾಗ ಅಪ್​ಡೇಟ್​ ನೀಡುತ್ತಿರುತ್ತಾರೆ. ಈಗ ತಮಗೆ 0.3 ಸೆಕೆಂಡ್​ನಲ್ಲಿ ಲವ್​ ಆಯ್ತು ಎಂದು ಫೋಟೋ ಸಮೇತ ರಶ್ಮಿಕಾ ಹೇಳಿಕೊಂಡಿದ್ದಾರೆ.

ಲವ್​ ಆಯ್ತು ಎಂದ ಮಾತ್ರಕ್ಕೆ ಯಾರದ್ದೋ ಜೊತೆ ರಶ್ಮಿಕಾ ಮಂದಣ್ಣ ಪ್ರೀತಿಯ ಬಲೆಗೆ ಸಿಲುಕಿದ್ದಾರೆ ಎಂದುಕೊಳ್ಳಬೇಡಿ. ಸದ್ಯ ಅವರು ಹೇಳಿಕೊಂಡಿರುವುದು ತಮ್ಮ ಮುದ್ದಿನ ಹೊಸ ನಾಯಿ ಕುರಿತು. ಈಗಾಗಲೇ ತಿಳಿದಿರುವಂತೆ ರಶ್ಮಿಕಾ ಪ್ರಾಣಿಪ್ರೇಮಿ. ಈಗ ಅವರ ಮನೆಗೆ ಹೊಸ ಶ್ವಾನದ ಆಗಮನ ಆಗಿದೆ. ಅದಕ್ಕೆ ಔರಾ ಎಂದು ಹೆಸರು ಇಟ್ಟಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ.

‘ಹೊರ ಜಗತ್ತಿನ ಎಲ್ಲ ಗದ್ದಲದ ನಡುವೆಯೂ ನಾನು ನನ್ನ ಖುಷಿಯ ಕಣಜವನ್ನು ಕಂಡುಕೊಂಡಿದ್ದೇನೆ. ಇದು ಸದಾ ನನ್ನನ್ನು ಖುಷಿಯಾಗಿ ಇಡುತ್ತದೆ. ನಿಮ್ಮೆಲ್ಲರಿಗೂ ನಾನು ಪುಟ್ಟ ಔರಾ ಪರಿಚಯ ಮಾಡಿಕೊಡುತ್ತಿದ್ದೇನೆ. ಮೂರು ಸೆಕೆಂಡ್​ನೊಳಗೆ ಪ್ರೀತಿಯಲ್ಲಿ ಬೀಳಬಹುದು ಎನ್ನುತ್ತಾರೆ. ಆದರೆ ಇವಳು ಕೇವಲ 0.3 ಸೆಕೆಂಡ್​ನಲ್ಲಿ ನನ್ನ ಹೃದಯ ಕದ್ದಳು’ ಎಂದು ತಮ್ಮ ಪ್ರೀತಿಯ ಶ್ವಾನವನ್ನು ರಶ್ಮಿಕಾ ಪರಿಚಯ ಮಾಡಿಕೊಟ್ಟಿದ್ದಾರೆ.

ದಿನದಿಂದ ದಿನಕ್ಕೆ ರಶ್ಮಿಕಾ ಚಾರ್ಮ್​ ಹೆಚ್ಚುತ್ತಲೇ ಇದೆ. ಕನ್ನಡದಿಂದ ಶುರುವಾದ ಅವರ ಸಿನಿಮಾ ಜರ್ನಿ ಈಗ ಬಾಲಿವುಡ್​ವರೆಗೂ ತಲುಪಿದೆ. ಅಮಿತಾಭ್​ ಬಚ್ಚನ್​ ಜೊತೆ ಅವರು ‘ಗುಡ್​ ಬೈ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ತೆರೆಹಂಚಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್​ ಜೊತೆ ಅಭಿನಯಿಸಿರುವ ‘ಪುಷ್ಪ’ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಸಿದೆ. ಎಲ್ಲದರ ಪರಿಣಾಮ ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ.

ಇದನ್ನೂ ಓದಿ:

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

ರಶ್ಮಿಕಾ ಸಿನಿಮಾ ರಿಲೀಸ್​ಗೂ ಮುನ್ನವೇ ವಿದೇಶದಲ್ಲಿ ಜಾಕ್​ಪಾಟ್​; ಕೊಡಗಿನ ಕುವರಿ ಮುಟ್ಟಿದ್ದೆಲ್ಲ ಚಿನ್ನ

Follow us on

Related Stories

Most Read Stories

Click on your DTH Provider to Add TV9 Kannada